ಸ್ಪೋರ್ಟ್ಸ್ ಟೂರಿಂಗ್ ಹಾಗೂ ಅಡ್ವೆಂಚರ್ ಬೈಕ್ ಪ್ರಿಯರಿಗೆ ಇದೀಗ BMW ನೂತನ S 1000 XR ಬೈಕ್ ಬಿಡುಗಡೆ ಮಾಡುತ್ತಿದೆ. 2019ರ EICMA ಮೋಟಾರ್‌ಸೈಕಲ್ ಶೋನಲ್ಲಿ ಪ್ರದರ್ಶಿಸಲಾಗಿದ್ದ ಈ ಬೈಕ್ ಕೊರೋನಾ ವೈರಸ್ ಕಾರಣ ಕೊಂಚ ತಡವಾಗಿ ಬಿಡುಗಡೆಯಾಗಿದೆ. ನೂತನ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಜು.14): ಹೊಸ ವಿನ್ಯಾಸ, ಹೊಸ ತಂತ್ರಜ್ಞಾನ ಸೇರಿದಂತೆ ಹಲವು ಫೀಚರ್ಸ್ ಹೊಂದಿರುವ ನೂತನ BMW S 1000 XR ಬೈಕ್ ಬಿಡುಗಡೆಗೆ ರೆಡಿಯಾಗಿದೆ. ಇದೇ ಜುಲೈ 16 ರಂದು ನೂತನ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ಬಿಡುಗಡೆಯಾದ BMW S 1000 RR ಬೈಕ್ ಭಾರಿ ಯಶಸ್ಸು ಸಾಧಿಸಿತ್ತು. ಇದೀಗ ಸ್ಪೋರ್ಟ್ಸ್ ಹಾಗೂ ಅಡ್ವೆಂಚರ್ ಆದ್ಯತೆ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.
ಕಾರಿಗಿಂತಲೂ ಶಕ್ತಿಶಾಲಿ ಎಂಜಿನ್, BMW R 18 ಬೈಕ್ ಅನಾವರಣ!ನೂತನ ಬೈಕ್‌ನಲ್ಲಿನ ಎದ್ದು ಕಾರಣು ಬದಲಾವಣೆ ಅಂದರೆ ಇದರ ಹೆಡ್‌ಲೈಟ್. ಬಾಡಿ ಪ್ಯಾನಲ್ ಹೊಸದಾಗಿ ಡಿಸೈನ್ ಮಾಡಲಾಗಿದ್ದು ಬೈಕ್ ಅಂದ ಮತ್ತಷ್ಟು ಹೆಚ್ಚಿಸಿದೆ. ಆಕರ್ಷಕ ಫ್ಯುಟೆಲ್ ಟ್ಯಾಂಕ್ ಸೇರಿದಂತೆ ಒಟ್ಟಾರೆ ಸ್ಪೋರ್ಟ್ಸ್ ಹಾಗೂ ಅಗ್ರೆಸ್ಸೀವ್ ಲುಕ್ ಹೊಂದಿದೆ. ಟೈಲ್ ಲ್ಯಾಂಪ್‌ನಲ್ಲೂ ಬದಲಾವಣೆ ಮಾಡಲಾಗಿದೆ. ಬೈಕ್ ಕರ್ಬ್ ತೂಕ 226 ಕೆಜಿ.
ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ದುಬಾರಿ ಬೈಕ್; ಇಲ್ಲಿದೆ ಲಿಸ್ಟ್!
undefined
BMW S 1000 XR ಬೈಕ್ 999 cc ಲಿಕ್ವಿಡ್ ಕೂಲ್ಡ್, 4 ಸಿಲಿಂಡರ್ ಎಂಜಿನ್ ಹೊಂದಿದ್ದು, 165 bhp ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ABS ಬ್ರೇಕ್, ಟ್ರಾಕ್ಷನ್ ಕಂಟ್ರೋಲ್, BMW ಎಲೆಕ್ಟ್ರಾನಿಕ್ ಸಸ್ಪೆನ್ಶನ್ ಹೊಂದಿದೆ.
BMW S 1000 XR ಬೈಕ್ ಬೆಲೆ17.9 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು(ಎಕ್ಸ್ ಶೋ ರೂಂ) ಗರಿಷ್ಠ ಬೆಲೆ 20.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)