ಟಕ್ಸನ್ ಫೇಸ್‌ಲಿಫ್ಟ್ ಕಾರು ಬಿಡುಗಡೆ: ಇದು ಹ್ಯುಂಡೈನ ದುಬಾರಿ ಕಾರು!

By Suvarna News  |  First Published Jul 14, 2020, 3:08 PM IST

ಕೊರೋನಾ ವೈರಸ್, ಲಾಕ್‌ಡೌನ್ ಸೇರಿದಂತೆ 2020 ಹಲವು ಅಡೆ ತಡೆಗಳಿಂದ ಕೂಡಿದ ವರ್ಷ. ಆದರೆ ಹ್ಯುಂಡೈ ಮಾತ್ರ 2020ರಲ್ಲಿ ಒಂದರ ಮೇಲೊಂದರಂತೆ ಕಾರು ಬಿಡುಗಡೆ ಮಾಡಿ ಅಚ್ಚರಿ ನೀಡುತ್ತಿದೆ. ಇದೀಗ ಭಾರತದಲ್ಲಿ ಹ್ಯುಂಡೈ ದುಬಾರಿ ಕಾರಾದ ಟಕ್ಸನ್ ಫೇಸ್‌ಲಿಫ್ಟ್ SUV ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ .


ನವದೆಹಲಿ(ಜು.14): ಈ ವರ್ಷದ ಆರಂಭದಲ್ಲಿ ಹ್ಯುಂಡೈ ಹೊಚ್ಚ ಹೊಸ ಔರಾ ಸೆಡಾನ್ ಕಾರು ಬಿಡುಗಡೆ ಮಾಡಿತ್ತು. ಬಳಿಕ ಹಲವು ಬದಲಾವಣೆಗಳೊಂದಿಗೆ ಕ್ರೆಟಾ ಫೇಸ್‌ಲಿಫ್ಟ್ ಹಾಗೂ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿತ್ತು. ಸೌತ್ ಕೊರಿಯಾ ಮೂಲದ ಹ್ಯುಂಡೈ ಇದೀಗ ಭಾರತದಲ್ಲಿ ಟಕ್ಸನ್ ಫೇಸ್‌ಲಿಫ್ಟ್ SUV ಕಾರು ಬಿಡುಗಡೆ ಮಾಡಿದೆ.

ಒಂದೇ ವರ್ಷದಲ್ಲಿ ದಾಖಲೆ ಬರೆದ ಹ್ಯುಂಡೈ ವೆನ್ಯೂ ಕಾರು!

Tap to resize

Latest Videos

undefined

ಪೆಟ್ರೋಲ್, ಡೀಸೆಲ್ ಎಂಜಿನ್‌ಗಳಲ್ಲಿ ಒಟ್ಟು 5 ವೇರಿಯೆಂಟ್ ಕಾರು ಲಭ್ಯವಿದೆ. ಡೀಸೆಲ್ ಎಂಜಿನ್‌ನಲ್ಲಿ 4WD ಸಿಸ್ಟಮ್ ಹಾಗೂ ಪೆಟ್ರೋಲ್ ಎಂಜಿನ್‌ನಲ್ಲಿ 2WD ಸಿಸ್ಟಮ್ ವೇರಿಯೆಂಟ್ ಕಾರು ಲಭ್ಯವಿದೆ. ಟಕ್ಸನ್ ಫೇಸ್‌ಲಿಫ್ಟ್ ಕಾರಿನ ಬೆಲೆ 23.3 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 27.03 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಲಾಕ್‌ಡೌನ್ ನಡುವೆ ನೂತನ ಹ್ಯುಂಡೈ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆ!.

2.0 ಲೀಟರ್ ಪೆಟ್ರೋಲ್ 6AT
GL(O) ವೇರಿಯೆಂಟ್ = 23.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
GLS ವೇರಿಯೆಂಟ್ =23.52ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

2.0 ಲೀಟರ್ ಡೀಸೆಲ್ 8AT
GL(O) ವೇರಿಯೆಂಟ್ =24.35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
GLS ವೇರಿಯೆಂಟ್ =25.56 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
GLS 4WD ವೇರಿಯೆಂಟ್ =27.03 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ನೂತನ ಟಕ್ಸನ್ ಕಾರಿನ ಮುಂಭಾಗದ ಗ್ರಿಲ್ ಬದಲಾವಣೆ ಮಾಡಲಾಗಿದೆ. LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಬಳಕೆ ಮಾಡಲಾಗಿದ್ದು, ರಾತ್ರಿ ಡ್ರೈವಿಂಗ್‌ಗೆ ಸಹಕಾರಿಯಾಗಿದೆ. ಹೊಸ ವಿನ್ಯಾಸದ ಫಾಗ್ ಲ್ಯಾಂಪ್ಸ್, ಅಲೋಯ್ ವೀಲ್, R18 ಡೈಮಂಡ್ ಕಟ್ ಅಲೋಯ್ ವೀಲ್ ಬಳಸಲಾಗಿದೆ. 

8.0 ಇಂಚಿನ ಫ್ಲೋಟಿಂಗ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಬ್ಲೂಲಿಂಕ್ ಫೀಚರ್ಸ್, 8 ಸ್ಪೀಕರ್ ಸಿಸ್ಟಮ್, ಎಲೆಕ್ಟ್ರಿಕ್ ಪನೋರಮಿಕ್ ಸನ್‌ರೂಫ್, ಎಡ್ಜಸ್ಟೇಬಲ್ ಸೀಟ್, ವೈಯರ್‌ಲೆಸ್ ಮೊಬೈಲ್ ಚಾರ್ಚಿಂಗ್ ಪ್ಯಾಡ್, ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
 

click me!