ಮಾರುತಿ ಬ್ರೆಜಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಬಿಡುಗಡೆ ದಿನಾಂಕ ಬಹಿರಂಗ!

By Suvarna News  |  First Published Jul 14, 2020, 2:26 PM IST

ಕಿಯಾ ಸೆಲ್ಟೋಸ್, ಕಿಯಾ ಕಾರ್ನಿವಲ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿರುವ ಕಿಯಾ ಮೋಟಾರ್ಸ್ ಇದೀಗ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಭಾರತದ ಮೂಲಕ ವಿಶ್ವದಲ್ಲಿ ಈ ಕಾರು ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ಅನಂತಪುರಂ(ಜು.14): ಮಾರುತಿ ಬ್ರೆಜ್ಜಾ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್, ಮಹೀಂದ್ರ XUV300, ಹ್ಯುಂಡೈ ವೆನ್ಯೂ ಸೇರಿದಂತೆ ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಕಿಯಾ ಸೊನೆಟ್ ಕಾರು ಬಿಡುಗಡೆ ಮಾಡುತ್ತಿದೆ. ಕಿಯಾ ಸೆಲ್ಟೋಸ್, ಕಾರ್ನಿವಲ್ ಬಳಿಕ ಕಿಯಾ ಬಿಡುಗಡೆ ಮಾಡುತ್ತಿರರುವ 3ನೇ ಕಾರು ಇದಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

Tap to resize

Latest Videos

undefined

ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!.

ನೂತನ ಕಿಯಾ ಸೊನೆಟ್ ಕಾರು ಆಗಸ್ಟ್ 7 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದ ಮೂಲಕ ಈ ಕಾರು ವಿಶ್ವ ಮಾರುಕಟ್ಟೆಗೂ ಪ್ರವೇಶಿಸಲಿದೆ. ಕೊರೋನಾ ವೈರಸ್ ಕಾರಣ ಬಿಡುಗಡೆ ಕಾರ್ಯಕ್ರಮ ಭಾರತ ಸೇರಿದಂತೆ ಇತರ ದೇಶಗಲ್ಲಿ ಲೈವ್ ಪ್ರಸಾರ ಆಗಲಿದೆ. ಭಾರತದಲ್ಲಿ ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದೀಗ ಸೊನೆಟ್ ಕಾರು ಕಿಯಾ ಮೋಟಾರ್ಸ್ ಎಂಟ್ರಿ ಲೆವೆಲ್ ಕಾರಾಗಿದೆ. 

ಕಿಯಾ ಸೆಲ್ಟೋಸ್ ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!.

ಕಿಯಾ ಸೊನೆಟ್ ಕಾರು 1.2 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಹಾಗೂ 1.0 ಲೀಟರ್ ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ವೇರಿಯೆಂಟ್ ಬಿಡುಗಡೆಯಾಗುವ ಸಾಧ್ಯತೆ ಇದೆ. 6 ಸ್ಪೀಡ್ ಮಾನ್ಯುಯೆಲ್ ಹಾಗೂ 7 ಸ್ಪೀಡ್ DCT ಆಟೋಮ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಇದರ ಜೊತೆಗೆ iMT(intelligent manual transmission) ಆಯ್ಕೆಯೂ ಲಭ್ಯವಿದೆ.

ನೂತನ ಕಿಯಾ ಸೊನೆಟ್ ಕಾರಿನ ಬೆಲೆ 8 ಲಕ್ಷ ರೂಪಾಯಿಯಿಂದ 13 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ಎಂದು ಅಂದಾಜಿಸಲಾಗಿದೆ. 

click me!