'ಚೌಕಿದಾರ್' ನಂಬರ್ ಪ್ಲೇಟ್- ಬಿಜೆಪಿ MLA ಕಾರಿಗೆ ದಂಡ!

By Web DeskFirst Published Mar 28, 2019, 4:09 PM IST
Highlights

ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೌಕಿದಾರ್ ಅಭಿಯಾನ ಬಿಜೆಪಿ MLAಗೆ ಸಂಕಷ್ಟ ತಂದಿದೆ. ಚೌಕಿದಾರ್ ಅಭಿಯಾನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಬಿಜೆಪಿ MLAಗೆ ಎದುರಾದ ಸಂಕಷ್ಟವೇನು? ಇಲ್ಲಿದೆ ವಿವರ.
 

ಮಧ್ಯ ಪ್ರದೇಶ(ಮಾ.28): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸಾಮಾಜಿತ ಜಾಲತಾಣಗಳಲ್ಲಿ ಚೌಕಿದಾರ್ ರಾರಾಜಿಸುತ್ತಿದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಲ್ಲಿ ತಮ್ಮ ತಮ್ಮ ಹೆಸರಿನ ಮುಂದೆ ಚೌಕಿದಾರ್  ಎಂದು ನಾಮಕರಣ ಮಾಡಿಕೊಂಡು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದಿ ಹೋಗಿರುವ ಬಿಜೆಪಿ MLA ಕಾರಿನ ನಂಬರ್ ಪ್ಲೇಟ್ ಮೇಲೆ ಚೌಕಿದಾರ್ ಎಂದು ಬರೆಯಿಸಿ ಸಂಕಷ್ಟ ಅನುಭವಿಸಿದ್ದಾರೆ.

ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಸ್ಟಮ್ ಕಾರು ಅನಾವರಣ!

ಮಧ್ಯಪ್ರದೇಶದ ಬಿಜೆಪಿ MLA ರಾಮ್ ದಂಗೊರೆ ತಮ್ಮ ಮಹೀಂದ್ರ TUV300 ಕಾರಿನ ನಂಬರ್ ಪ್ಲೇಟ್ ಮೇಲೆ ಚೌಕಿದಾರ್ ಎಂದು ನಮೂದಿಸಿದ್ದಾರೆ. ಕಾರಿನ ನಂಬರ್ ಪ್ಲೇಟ್ ಮೇಲೆ, ಪಕ್ಕದಲ್ಲಿ ಹೆಸರು ಹಾಗೂ ಇತರ ಯಾವುದೇ ಅಂಕಿ-ಸಂಖ್ಯೆಗಳನ್ನ ಬರೆಯುವುಂತಿಲ್ಲ. ಮೋಟಾರು ಕಾಯ್ದೆ ನಿಯಮ ಪ್ರಕಾರ ವಾಹನದ ನಂಬರ್ ಪ್ಲೇಟ್ ಸ್ಪಷ್ಟವಾಗಿ ಗೋಚರವಾಗಬೇಕು. ನಂಬರ್ ಪ್ಲೇಟ್ ಪಕ್ಕದಲ್ಲಿ, ನಂಬರ್ ಪ್ಲೇಟ್ ಮೆಲೆ ಏನೂ ಬರೆಯುವಂತಿಲ್ಲ. ಮೋಟಾರು ಕಾಯ್ದೆಯ ಕಲಂ 51 ರ ಅನ್ವಯ ಬಿಜೆಪಿ MLA ರಾಮ್ ದಂಗೊರೆ ನಿಯಮ ಉಲ್ಲಂಘಿಸಿದ್ದಾರೆ ಎಂದು ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಇಂಗ್ಲೆಂಡ್ ರಸ್ತೆಯಲ್ಲಿ ಭಾರತದ ಬಜಾಜ್ ಅಟೋ ಹಾಗೂ ಓಲಾ!

ಚೌಕಿದಾರ್ ನಂಬರ್ ಪ್ಲೇಟ್ ಗಮಿಸಿದ ಖಂಡವಾ ಪೊಲೀಸರು ಕಾರು ನಿಲ್ಲಿಸಿ ದಂಡ ಪಾವತಿಸಲು ಚಲನ್ ನೀಡಿದ್ದಾರೆ. ಆದರೆ ಬಿಜೆಪಿ MLA ಚಲನ್ ಸ್ವೀಕರಿಸಲು ನಿರಾಕರಿಸಿದ್ದಾರೆ. ನಿಯಮ ಮಧ್ಯ ಪ್ರದೇಶದಲ್ಲಿ ಜಾರಿಯಾಗಿರುವ ಕುರಿತು ಹಾಗೂ MCC ನಿಯಮದ ಕುರಿತು ಸ್ಪಷ್ಟತೆ ನೀಡಲು ಪೊಲೀಸರನ್ನು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಈ ಬರಹ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಇಷ್ಟೇ ಅಲ್ಲ ನಂಬರ್ ಪ್ಲೇಟ್ ಮೇಲ್ಭಾಗದಲ್ಲಿ ಬರೆಯಲಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಿಲ್ಲ ಎಂದು ವಾದಿಸಿದ್ದಾರೆ. ಸದ್ಯ ಚಲನ್ ಕೋರ್ಟ್‌ಗೆ ರವಾನೆಯಾಗಿದೆ. 
 

click me!