ಏ.17ಕ್ಕೆ ಮಾರುತಿ ಬ್ರಿಜಾ ಪ್ರತಿಸ್ಪರ್ಧಿ ಹ್ಯುಂಡೈ QXi ಕಾರು ಅನಾವರಣ!

By Web DeskFirst Published Mar 26, 2019, 2:44 PM IST
Highlights

ಹ್ಯುಂಡೈ ನೂತನ ಕಾರನ್ನು ಅನಾವರಣ ಮಾಡುತ್ತಿದೆ. ಭಾರತದಲ್ಲಿ SUV ಕಾರುಗಳಿಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ, ಇದೀಗ ಹ್ಯುಂಡೈ ಕಂಪನಿ, ಮಾರುತಿ, ಟಾಟಾ ಫೋರ್ಡ್ ಕಂಪನಿಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರು ಅನಾವರಣ ಮಾಡುತ್ತಿದೆ.
 

ನವದೆಹಲಿ(ಮಾ.26): ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ XUV300 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ನೂತನ QXi SUV ಕಾರು ಅನಾವರಣ ಮಾಡುತ್ತಿದೆ. 2019ರ ನ್ಯೂಯಾರ್ಕ್ ಅಟೋ ಶೋನಲ್ಲಿ ಪರಿಚಯಿಸಲಾಗಿದ್ದ ಹ್ಯುಂಡೈ QXi, ಇದೀಗ ಭಾರತದಲ್ಲಿ ಎಪ್ರಿಲ್ 17 ರಂದು ಅನಾವರಣಗೊಳ್ಳಲಿದೆ. 

ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಸ್ಟಮ್ ಕಾರು ಅನಾವರಣ!

1.0 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್‌ಗಳಲ್ಲಿ ನೂತನ ಕಾರು ಲಭ್ಯವಿದೆ.  ಭಾರತದಲ್ಲಿ ರೋಡ್ ಟೆಸ್ಟ್ ಯಶಸ್ವಿಯಾಗಿ ಮುಗಿಸಿರುವ ಹ್ಯುಂಡೈ QXi ಕಾರು ಹೊಸ ಸಂಚಲನ ಸೃಷ್ಟಿಸಲಿದೆ ಅನ್ನೋ ವಿಶ್ವಾಸ ಕಂಪನಿ ವ್ಯಕ್ತಪಡಿಸಿದೆ.

ಇದನ್ನೂ ಓದಿ: ರೆನಾಲ್ಟ್ ಕ್ವಿಡ್ ಬೆಲೆ ಹೆಚ್ಚಳ- ಏಪ್ರಿಲ್‌ನಿಂದ ಹೊಸ ಬೆಲೆ ಅನ್ವಯ!

ಹ್ಯುಂಡೈ QXi ಕಾರು  100 ಅಥವಾ 120 bhp ಪವರ್ ಹಾಗೂ  220 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ ಎನ್ನಲಾಗ್ತಿದೆ.  6 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸಿಮಿಶನ್ ವೇರಿಯೆಂಟ್ ಲಭ್ಯವಿದೆ. ನೂತನ ಕಾರಿ ಬೆಲೆ ಹಾಗೂ ಇತರ ಮಾಹಿತಿ ಶೀಘ್ರದಲ್ಲೇ ಬಹಿರಂಗವಾಗಲಿದೆ.

click me!