
ಬೆಂಗಳೂರು(ಡಿ.16): ಹೊಸ ವರ್ಷಕ್ಕೆ ಇನ್ನು ಕೆಲದಿನಗಳ ಮಾತ್ರ ಬಾಕಿ. 2019ರಲ್ಲಿ ಹಲವು ಬೈಕ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇನ್ನು 2018ರಲ್ಲಿ ರಾಯಲ್ ಎನ್‌ಫೀಲ್ಡ್, ಟಿವಿಎಸ್, ಬಜಾಜ್, ಯಮಾಹಾ ಸೇರಿದಂತೆ ಹಲವು ಕಂಪೆನಿಗಳು ಬೈಕ್‌ಗಳನ್ನ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: ಸ್ಟಾರ್ ನಟನಿಗೆ ಎಚ್ಚರಿಕೆ ನೀಡಿ ಪೇಚಿಗೆ ಸಿಲುಕಿದ ಪೊಲೀಸ್!
2018ರಲ್ಲಿ ಬಿಡುಗಡೆಯಾದ ಬೈಕ್‌ಗಳ ಪೈಕಿ ಕೆಲ ಬೈಕ್‌ಗಳು ಗ್ರಾಹಕರನ್ನ ಆಕರ್ಷಿಸಿದೆ. ಮಾರಾಟದಲ್ಲೂ ದಾಖಲೆ ಬರೆದಿದೆ. ಅತ್ಯಂತ ಬಲಿಷ್ಠ ಎಂಜಿನ್, ಪವರ್, ಹೊಸ ವಿನ್ಯಾಸ ಬೆಲೆ, ಮೈಲೇಜ್ ಸೇರಿದಂತೆ ಪ್ರಮುಖ ವಿಚಾರದಲ್ಲಿ ಗ್ರಾಹಕರನ್ನ ಆಕರ್ಷಿಸಿದ ಬೈಕ್ ವಿವರ ಇಲ್ಲಿದೆ.
ಯಮಹಾ YZF-R15 3.0
ಎಂಜಿನ್: 155ಸಿಸಿ
ಪವರ್: 19bhp, 15nm ಟಾರ್ಕ್
ಬೆಲೆ: 1.27 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಟಿವಿಎಸ್ ಅಪಾಚೆ RTR 1604V
ಎಂಜಿನ್: 159.5 ಸಿಸಿ
ಪವರ್: 16.3bhp, 14.8nm ಟಾರ್ಕ್
ಬೆಲೆ: 81,490 ರೂಪಾಯಿ(ಎಕ್ಸ್ ಶೋ ರೂಂ)
ಹೀರೋ Xtreme 200R
ಎಂಜಿನ್: 200 ಸಿಸಿ
ಪವರ್:18.1 bhp, 17.1nm ಟಾರ್ಕ್
ಬೆಲೆ: 89,900 ರೂಪಾಯಿ(ಎಕ್ಸ್ ಶೋ ರೂಂ)
ರಾಯಲ್ ಎನ್‌ಫೀಲ್ಡ್ ಟ್ವಿನ್
ಎಂಜಿನ್: 535 ಸಿಸಿ
ಪವರ್: 47 bhp, 52 nm ಟಾರ್ಕ್
ಬೆಲೆ: 2.34 ಲಕ್ಷ ಹಾಗೂ 2.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಬಜಾಜ್ ಪಲ್ಸಾರ್ ಕ್ಲಾಸಿಕ್
ಎಂಜಿನ್: 149 ಸಿಸಿ
ಪವರ್: 14 bhp, 13.4 nm ಟಾರ್ಕ್
ಬೆಲೆ: 64,998 ರೂಪಾಯಿ (ಎಕ್ಸ್ ಶೋ ರೂಂ)