ಬೆನೆಲ್ಲಿ TRK 502, TRK 502 X ಬಿಡುಗಡೆ ದಿನಾಂಕ ಬಹಿರಂಗ!

Published : Dec 30, 2018, 05:43 PM IST
ಬೆನೆಲ್ಲಿ TRK 502, TRK 502 X ಬಿಡುಗಡೆ ದಿನಾಂಕ ಬಹಿರಂಗ!

ಸಾರಾಂಶ

ಹೊಸ ವರ್ಷದಲ್ಲಿ ಬೆನೆಲ್ಲಿ ಸಂಸ್ಥೆ 2 ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಬೈಕ್ ಬೆಲೆ, ಇದರ ವಿಶೇಷತೆ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

ನವದೆಹಲಿ(ಡಿ.30): ಮಹವೀರ್ ಮೋಟಾರ್ಸ್ ಸಹಭಾಗಿತ್ವ ಹೊಂದಿರು  ಬೆನೆಲ್ಲಿ ಇದೀಗ ಭಾರತದಲ್ಲಿ ಹೊಸ ಎರಡು ಬೈಕ್ ಬಿಡುಗಡ ಮಾಡಲು ಸಜ್ಜಾಗಿದೆ. ಬೆನೆಲ್ಲಿ TRK 502, TRK 502 X ಬೈಕ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಫೆಬ್ರವರಿ 18, 2019ರಲ್ಲಿ ನೂತನ ಬೈಕ್ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಎಪ್ರಿಲಿಯಾ 125 ಸಿಸಿ ಸ್ಕೂಟರ್ ಬಿಡುಗಡೆ!

2016ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾದ ನೂತನ ಬೆನೆಲ್ಲಿ TRK 502, TRK 502 X ಬೈಕ್ ಎರಡು ವರ್ಷಗಳ ಬಳಿಕ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ನೂತನ ಬೈಕ್ ಬೆಲೆ 5 ರಿಂದ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ: ವರ್ಷದ ಅತ್ಯುತ್ತಮ ಕಾರು-ಬೈಕ್ ಪ್ರಶಸ್ತಿ ಪ್ರಕಟ-ಇಲ್ಲಿದೆ ಲಿಸ್ಟ್!

499ಸಿಸಿ ಟ್ವಿನ್ ಲಿಕ್ವಿಡ್ ಕೂಲ್‌ಡ್ ಎಂಜಿನ್, 47bhp ಪವರ್ ಹಾಗೂ 45nm ಟಾರ್ಕ್ ಉತ್ವಾದಿಸಲಿದೆ. 213 ಕೆಜಿ ತೂಕವಿರುವ ಈ ಬೈಕ್ ಹೆಚ್ಚು ರೋಡ್ ಗ್ರಿಪ್ ಹೊಂದಿದೆ. ಕವಾಸಕಿ ವರ್ಸೆಸ್ 650, ಸುಜುಕಿ ವಿ ಸ್ಟ್ರೋಮ್ 650 ಬೈಕ್‌ಗಳಿಗೆ ಹೋಲಿಸಿದರೆ, ನೂತನ ಬೆನೆಲ್ಲಿ ಬೈಕ್ ಬೆಲೆ ಕಡಿಮೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ
ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?