ಹೊಂಡಾ ಟೊಮೊ ಎಲೆಕ್ಟ್ರಿಕ್ ಕಾರು ಅನಾವರಣಗೊಳ್ಳುತ್ತಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಈ ಕಾರು, ಎಲೆಕ್ಟ್ರಿಕ್ ವಿಭಾಗದಲ್ಲಿ ಸಂಚನಲ ಮೂಡಿಸಲಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಜಿನೆವಾ(ಫೆ.13): ಹೊಂಡಾ ಮೋಟಾರ್ಸ್ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಮಾರ್ಚ್ 7 ರಿಂದ 17ರ ವರೆಗೆ ನಡೆಯಲಿರುವ ಜಿನೆವಾ ಮೋಟಾರ್ ಶೋನಲ್ಲಿ ಹೊಂಡಾ ಕಂಪೆನಿ ಟೊಮೊ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಲಿದೆ.
ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!
undefined
ಹೊಂಡಾ ಹಾಗೂ ಇಸ್ಟಿಟ್ಯೂಟೋ ಯುರೋಪಿಯೋ ಡಿ ಡಿಸೈನ್ ಸೇರಿ ನೂತನ ಕಾರಿನ ವಿನ್ಯಾಸ ರೂಪಿಸಿದೆ. ಟೊರಿನೋದ ಮಾಸ್ಟರ್ ಡಿಸೈನ್ IED ಸಂಸ್ಥೆಯ 13 ವಿದ್ಯಾರ್ಥಿಗಳು ಈ ಟೊಮೊ ಡಿಸೈನ್ ಥೀಸಿಸ್ ಮಂಡಿಸಿದ್ದರು. ಈ ಡಿಸೈನ್‌ನಿಂದ ಪ್ರಭಾವಿಗೊಂಡ ಹೊಂಡಾ, ಹೆಚ್ಚಿನ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಇದೀಗ ವಿದ್ಯಾರ್ಥಿಗಳಿಂದಲೇ ರೂಪಿಸಲಾದ ಟೊಮೊ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರನ್ನ ಹೊಂಡಾ ಅನಾವರಣ ಮಾಡಲಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆ- ಎಲೆಕ್ಟ್ರಿಕ್ ವಾಹನಕ್ಕೆ ಸುಲಭ ಸಾಲ!
ಟೊಮೊ ಎಲೆಕ್ಟ್ರಿಕ್ ಕಾರು 3997 mm ಉದ್ದ, 1893 mm ಅಗಲ ಹಾಗೂ 1556 mm ಎತ್ತರವಿದೆ. ವೀಲ್ಹ್ ಬೇಸ್ 2690 mm ಹೊಂದಿದೆ. ಮಿನಿ ಕಾರು ಹಾಗೂ ಪಿಕ್ ರೀತಿಯಲ್ಲಿರುವ ನೂತನ ಹೊಂಡಾ ಟೊಮೊ ಆಕರ್ಷಕ ವಿನ್ಯಾಸ ಹೊಂದಿದೆ. ಸದ್ಯ ಈ ಕಾರಿನ ವಿನ್ಯಾಸ ಬಿಡುಗಡೆ ಮಾಡಿರುವ ಹೊಂಡಾ, ಇತರ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.