ನಗರಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸೂಕ್ತ ಪಾರ್ಕಿಂಗ್ ಇಲ್ಲದ ಕಾರಣ ಮನೆ ಮುಂದೆ ನಿಲ್ಲಿಸಿದ್ದ ಬಜಾಜ್ ಪಲ್ಸರ್ NS200 ಬೈಕ್ ಕಳ್ಳತನವಾಗಿತ್ತು. ಆದರೆ ಕಳ್ಳತನ ತಿಳಿದ ಒಂದೇ ಗಂಟೆಯಲ್ಲಿ ಖದೀಮರನ್ನ ಬಂಧಿಸಲಾಗಿದೆ.
ಚೆನ್ನೈ(ಫೆ.19): ನಗರಗಳಲ್ಲಿ ಬೈಕ್ ಕಳ್ಳತನ ಹೆಚ್ಚಾಗುತ್ತಿದೆ. ಸೂಕ್ತ ಪಾರ್ಕಿಂಗ್ ಇಲ್ಲದೆ ಮನೆ ಹೊರಗಡೆ ನಿಲ್ಲಿಸಿರುವ ಬೈಕ್‌ಗಳನ್ನ ರಾತ್ರಿ ವಳೆ ಕಳ್ಳತನ ಮಾಡಲಾಗುತ್ತಿದೆ. ಇದೇ ರೀತಿ ಮನೆ ಮುಂದೆ ನಿಲ್ಲಿಸಿದ್ದ ಬಜಾಜ್ ಪಲ್ಸರ್ NS200 ಬೈಕ್ ಕಳ್ಳತನ ಮಾಡಲಾಗಿತ್ತು. ಆದರೆ ಕೇವಲ ಒಂದೇ ಗಂಟೆಯಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಹಿಮಾಲಯದಲ್ಲಿ ರಾಯಲ್ ಎನ್‌ಫೀಲ್ಡ್ ಹಿಂದಿಕ್ಕಿದ ಹೊಂಡಾ CBR!
undefined
ಚೆನ್ನೈ ನಿವಾಸಿ ಪುಷ್ಪರಾಜ್ ಹೊಸ ಬಜಾಜ್ ಪಲ್ಸರ್ NS200 ಬೈಕ್ ಖರೀದಿಸಿದ್ದರು. ಪಾರ್ಕಿಂಗ್ ಸಮಸ್ಯೆ ಇರೋ ಕಾರಣ, ಮನೆ ಮುಂದೆ ನಿಲ್ಲಿಸಿದ್ದರು. ಆದರೆ ಮರುದಿನ ಬೆಳಗ್ಗೆ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಕಾಣಿಸಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾಜ ಪುಷ್ಪರಾಜ್ ಪೊಲೀಸರ ಸಹಾಯದಿಂದ ಕಳ್ಳರನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಬೀದಿಗಳಿದು ಪ್ರತಿಭಟನೆ ಮಾಡಿದ ಮುಖ್ಯಮಂತ್ರಿ!
ಪುಷ್ಪರಾಜ್ ಬೈಕ್ ಖರೀದಿಸಿದ ಬೆನ್ನಲ್ಲೇ 1500 ರೂಪಾಯಿ ನೀಡ GPS ಟ್ರ್ಯಾಕರ್ ಅಳವಡಿಸಿದ್ದರು. ಬೈಕ್ ಕಳ್ಳತನ ತಿಳಿಯುತ್ತಿದ್ದಂತೆ ಪುಷ್ಪರಾಜ್ ಗೆಳೆಯರ ಜೊತೆ GPS ಮೂಲಕ ಬೈಕ್ ಟ್ರ್ಯಾಕ್ ಮಾಡಲು ಮುಂದಾದರು. ಅಷ್ಟರಲ್ಲೇ ಬೈಕ್ ಸಾಕಷ್ಟು ದೂರ ಕ್ರಮಿಸಿಯಾಗಿತ್ತು. ಪೊಲೀಸರಿಗೆ GPS ಟ್ರ್ಯಾಕರ್ ಮಾಹಿತಿ ನೀಡಿದರು.
ಇದನ್ನೂ ಓದಿ: TVS ಸ್ಟಾರ್ ಸಿಟಿ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ- ಬೆಲೆ 54 ಸಾವಿರ!
GPS ಸಹಾಯದಿಂದ ಲೋಕೇಶನ್ ಟ್ರ್ಯಾಕ್ ಮಾಡಿದ ಪೊಲೀಸರು ತಕ್ಷಣವೇ ಕಳ್ಳರನ್ನ ಹಿಡಿದಿದ್ದಾರೆ. ಬೈಕ್ ವಶಪಡಿಸಿಕೊಂಡು ಕಳ್ಳರನ್ನ ಪೊಲೀಸ್ ಠಾಣೆಗೆ ಕರೆತಂದ ವೇಳೆ ಬೈಕ್ ಮಾಲೀಕ ಪುಷ್ಪರಾಜ್‌ಗೆ ಅಚ್ಚರಿ ಕಾದಿತ್ತು. ತನ್ನ ಜೊತೆಗೆ 10ನೇ ತರಗತಿವರೆಗೆ ಕಲಿತ ಸಹಪಾಠಿಯೇ ಬೈಕ್ ಕಳ್ಳತನ ಮಾಡಿದ್ದ. ಇದೀಗ ಬೈಕ್ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ.