ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕ್ ಬಳಿಕ ಇದೀಗ ಜಾವಾ ಪೆರಾಕ್ ಬಿಡುಗಡೆಗೆ ಸಜ್ಜಾಗಿದೆ. ನೂತನ ಬೈಕ್ 2018ರಲ್ಲಿ ಅನಾವರಣಗೊಂಡಿದೆ. ಇದೀಗ ಬಿಡುಗಡೆ ದಿನಾಂಕವನ್ನು ಜಾವಾ ಬಹಿರಂಗ ಪಡಿಸಿದೆ.
ನವದೆಹಲಿ(ಜು.21): ಬಹುನಿರೀಕ್ಷಿತ ಜಾವಾ ಮೋಟರ್‌ಸೈಕಲ್ ಕಳೆದ ವರ್ಷ ಬಿಡುಗಡೆಯಾಗಿದೆ. ದಾಖಲೆಯ ಬುಕಿಂಗ್‌ನಿಂದ ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಗ್ರಾಹಕರ ಕೈಸೇರುವಲ್ಲಿ ವಿಳಂಬವಾಗಿದೆ. ಇದೀಗ ಜಾವಾ ಪೆರಾಕ್ ಬಾಬರ್ ಬೈಕ್ ಬಿಡುಗಡೆಗೆ ಜಾವಾ ಸಜ್ಜಾಗಿದೆ. ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕ್ ಜೊತೆ ಜಾವಾ ಪೆರಾಕ್ ಕೂಡ ಅನಾವರಣ ಮಾಡಲಾಗಿತ್ತು. ಆದದೆ ಬಿಡುಗಡೆ ಮಾಡಿರಲಿಲ್ಲ.
ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!
ಜಾವಾ ಪೆರಾಕ್ 2020ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಆರಂಭದಲ್ಲಿ 2019ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಲು ಜಾವಾ ನಿರ್ಧರಿಸಿತ್ತು. ಆದರೆ ಜಾವಾ ಬೈಕ್ ವಿತರಣೆ ವಿಳಂಬ ಕಾರಣ ಇದೀಗ ಮುಂದಿನ ವರ್ಷದ ಆರಂಭದಲ್ಲಿ ಜಾವಾ ಪೆರಾಕ್ ಬಿಡುಗಡೆಯಾಗಲಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಜಾವಾ ಪೆರಾಕ್ ಬೈಕ್ ಬುಕಿಂಗ್ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಜಾವಾ ನೀಡಿತು 13 ಹೊಡೆತ!
ಜಾವಾ ಪೆರಾಕ್ ಬೈಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 334cc, ಸಿಂಗಲ್ ಸಿಲಿಂರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 30 HP ಗರಿಷ್ಠ ಪವರ್ ಹಾಗೂ 31 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.