ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಆಟೋಮೊಬೈಲ್ ಕಂಪನಿಗಳು ಪುನರ್ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಲವು ವಾಹನಗಳ ಬೆಲೆ ಕೂಡ ಏರಿಕೆಯಾಗಿದೆ. ಇದೀಗ ಬಜಾಜ್ ಸ್ಟ್ರೀಟ್ ಬೈಕ್ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಳದ ವಿವರ ಇಲ್ಲಿದೆ.
ನವದೆಹಲಿ(ಜೂ.08): ಕೊರೋನಾ ವೈರಸ್ ಕಾರಣ ಆಟೋಮೊಬೈಲ್ ಕಂಪನಿಗಳಿಗೆ ತೀವ್ರ ಹೊಡೆತ ಬಿದ್ದಿದೆ. ಲಾಕ್‌ಡೌನ್ ಮೊದಲೇ ಭಾರತೀಯ ಆಟೋಮೊಬೈಲ್ ಕಂಪನಿಗಳು ಸ್ಥಗಿತಗೊಂಡಿತ್ತು. ಇದೀಗ ಲಾಕ್‌ಡೌನ್ ಸಡಿಲಗೊಂಡಿದೆ. ಆಟೋಮೊಬೈಲ್ ಕಂಪನಿಗಳು ಪುನರ್ ಆರಂಭಗೊಂಡಿದೆ. ಆದರೆ ಬಿಡಿ ಭಾಗಗಳ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಇದೀಗ ವಾಹನಗಳ ಬೆಲೆಯೂ ಏರಿಕೆಯಾಗಿದೆ. ಬಜಾಜ್ ಇದೀಗ ತನ್ನ ಅವೆಂಜರ್ ಸ್ಟ್ರೀಟ್ ಬೈಕ್ ಬೆಲೆ ಹೆಚ್ಚಿಸಿದೆ.
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್‌ಶಿಪ್, ಸರ್ವೀಸ್ ಸೆಂಟರ್ ಆರಂಭ!
undefined
ಬಜಾಜ್ ಅವೆಂಜರ್ ಸ್ಟ್ರೀಟ್ 160 ಹಾಗೂ 220 ಬೈಕ್ ಬೆಲೆ ಏರಿಕೆಯಾಗಿದೆ. ಬಜಾಜ್ ಅವೆಂಜರ್ ಸ್ಟ್ರೀಟ್ 160 ಬೈಕ್ ಬೆಲೆ 1,216 ರೂಪಾಯಿ ಹಾಗೂ ಅವೆಂಜರ್ ಸ್ಟ್ರೀಟ್ 220 ಬೈಕ್ ಬೆಲೆ 2,500 ರೂಪಾಯಿ ಹೆಚ್ಚಳವಾಗಿದೆ. ಮೂಲಕ ಅವೆಂಜರ್ 160 ಹಾಗೂ 220 ಪರಿಷ್ಕೃತ ದರ 94,893 ರೂಪಾಯಿ ಹಾಗೂ 119,174 ರೂಪಾಯಿಗಳಾಗಿದೆ.
ನೌಕರರಿಗೆ ಸಂಪೂರ್ಣ ವೇತನ, ಯಾವುದೇ ಕಡಿತವಿಲ್ಲ ಎಂದ ಬಜಾಜ್!.
ಅವೆಂಜರ್ 160 ಸ್ಟ್ರೀಟ್ ಬೈಕ್ 160 cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಹಾಗೂ ಫ್ಯೂಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದ್ದು, 14.8 bhp ಪವರ್ ಹಾಗೂ 13.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅವೆಂಜರ್ ಕ್ರ್ಯೂಸ್ 220 ಬೈಕ್ 220 cc ಸಿಂಗಲ್ ಸಿಲಿಂಜರ್ ಎಂಜಿನ್ ಹೊಂದಿದ್ದು, 18.7 bhp ಪವರ್ ಹಾಗೂ 17.5 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಎರಡೂ ಬೈಕ್ 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.