ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸಮಸ್ಯೆಗೆ ಮುಕ್ತಿ, 50 ಪವರ್ ಸ್ಟೇಶನ್ ಅಳವಡಿಸಲಿದೆ ಟಾಟಾ!

Suvarna News   | Asianet News
Published : Jun 08, 2020, 06:22 PM ISTUpdated : Jun 08, 2020, 06:50 PM IST
ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸಮಸ್ಯೆಗೆ ಮುಕ್ತಿ, 50 ಪವರ್ ಸ್ಟೇಶನ್ ಅಳವಡಿಸಲಿದೆ ಟಾಟಾ!

ಸಾರಾಂಶ

ಟಾಟಾ ಪವರ್ ಹಾಗೂ ಎಂಜಿ ಮೋಟಾರ್ಸ್ ಇದೀಗ  ಭಾರತದಲ್ಲಿ 50ಕ್ಕೂ ಹೆಚ್ಚು ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ನಿರ್ಮಿಸುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಮಾಲೀಕರ ಚಾರ್ಜಿಂಗ್ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿದೆ.   

ಮುಂಬೈ(ಜೂ.08):  ಟಾಟಾ ಪವರ್ ಹಾಗೂ ಎಂಜಿ ಮೋಟಾರ್ಸ್ ಭಾರತದಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ನಿರ್ಮಾಣ ಮಾಡುತ್ತಿದೆ. ಎಂಜಿ ಡೀಲರ್‌ಶಿಪ್‌ಗಳಲ್ಲಿ ಸೂಪರ್‌ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ನಿರ್ಮಿಸಲು ಟಾಟಾ ಪವರ್ ಮುಂದಾಗಿದೆ. ಇದು ಎಂಜಿ ಎಲೆಕ್ಟ್ರಿಕ್ ವಾಹನದ ಜೊತೆಗೆ ಇತರ ಎಲೆಕ್ಟ್ರಿಕ್ ವಾಹನ ಕಾರಿನ ಚಾರ್ಜಿಂಗ್ ಕೂಡ ಮಾಡಬಹುದು. 

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!.

ಎಂಜಿ ಮೋಟಾರ್ಸ್ ಈಗಾಗಲೇ ಬೆಂಗಳೂರು, ದೆಹಲಿ, ಮುಂಬೈ, ಅಹಮ್ಮದಾಬಾದ್ ಹಾಗೂ ಹೈದರಾಬಾದ್ ನಗರಗಳಲ್ಲಿ 10 ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ಅಳವಡಿಸಿದೆ. ಆದರೆ ಗ್ರಾಹಕರಿ ಚಾರ್ಚಿಂಗ್ ಸ್ಟೇಶನ್ ಸಮಸ್ಯೆ ಎದುರಾಗುತ್ತಲೇ ಇದೆ. ಇಷ್ಟೇ ಅಲ್ಲ ಇದೀಗ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಎಂಜಿ ಮೋಟಾರ್ಸ್ ಹಾಗೂ ಟಾಟಾ ಪವರ್ 50 ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ಅಳವಡಿಸುತ್ತಿದೆ.

ಬೆಂಗಳೂರಿನಲ್ಲಿ ಎಲ್ಲಿದೆ MG ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಸ್ಟೇಶನ್? ಇಲ್ಲಿದೆ ಲಿಸ್ಟ್!.

ಟಾಟಾ ಮೋಟಾರ್ಸ್ ಸದ್ಯ ಭಾರತದಲ್ಲಿ 170 ಚಾರ್ಜಿಂಗ್ ಸ್ಟೇಶನ್ ಅಳವಡಿಸಿದೆ. ಇದೀಗ ಈ ಸಂಖ್ಯೆಯನ್ನು 700ಕ್ಕೇರಿಸಲು ಟಾಟಾ ನಿರ್ಧರಿಸಿದೆ. ಇದರೊಂದಿಗೆ ಟಾಟಾ ಮತ್ತಷ್ಟು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.  ಟಾಟಾ ನೆಕ್ಸಾನ್ ev, ಟಿಗೋರ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. 

ಎಂಜಿ ಮೋಟಾರ್ಸ್ ಕಳೆದ ವರ್ಷ ಎಂಜಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿತ್ತು. ಹ್ಯುಂಡೈ ಕೋನಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಎಂಜಿ ZS ಎಲೆಕ್ಟ್ರಿಕ್  ಬಿಡುಗಡೆಯಾಗಿತ್ತು. ಇದರ ಬೆಲೆ 20.88 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತಿದೆ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ