2019ರ ಬಜಾಜ್ ಡೊಮಿನಾರ್ 400 ಬೈಕ್ ಬೆಲೆ ಬಹಿರಂಗ!

Published : Mar 31, 2019, 05:01 PM IST
2019ರ ಬಜಾಜ್ ಡೊಮಿನಾರ್ 400  ಬೈಕ್ ಬೆಲೆ ಬಹಿರಂಗ!

ಸಾರಾಂಶ

2019  ಬಜಾಜ್ ಡೊಮಿನಾರ್ ಬೆಲೆ ಬಹಿರಂಗವಾಗಿದೆ. ಹೆಚ್ಚುವರಿ ಫೀಚರ್ಸ್, ಹೊಸ ಬಣ್ಣಗಳಲ್ಲಿ ನೂತನ ಬಜಾಜ್ ಡೊಮಿನಾರ್ ಲಭ್ಯವಿದೆ. ಹಿಂದಿನ ಡೊಮಿನಾರ್ ಹಾಗೂ ನೂತನ ಡೊಮಿನಾರ್ ಬೆಲೆ ಏನು? ಇಲ್ಲಿದೆ ವಿವರ.

ನವದೆಹಲಿ(ಮಾ.31): ಬಹುನಿರೀಕ್ಷಿತ ಬಜಾಜ್ ಡೊಮಿನಾರ್ 400 ಬಿಡುಗಡೆಗೆ ಸಜ್ಜಾಗಿದೆ. ಬೈಕ್ ಮಾರುಕಟ್ಟೆ ಪ್ರವೇಶಿಸೋ ಮುನ್ನ ಡೊಮಿನಾರ್ ಬೈಕ್ ಬೆಲೆ ಬಹಿರಂಗವಾಗಿದೆ. ಬೈಕ್ ಈಗಾಗಲೇ ಡೀಲರ್‌ಗಳ ಕೈ ಸೇರಿದೆ. ಇದರ ಬೆನ್ನಲ್ಲೇ ಬೈಕ್ ಬೆಲೆ ಕೂಡ ಬಹಿರಂಗವಾಗಿದೆ. ಈ ಹಿಂದಿನ ಡೊಮಿನಾರ್ ಬೈಕ್ ಬೆಲೆಗಿಂತ ನೂತನ ಬೈಕ್ ಬೆಲೆ 10,000 ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: TVS ವಿಕ್ಟರ್ CBS ಬೈಕ್ ಬಿಡುಗಡೆ- ಬೆಲೆ ಎಷ್ಟು?

2019ರ ಬಜಾಜ್ ಡೊಮಿನಾರ್ 400 ಬೈಕ್ ಬೆಲೆ 1.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಹಿಂದಿನ ಡೊಮಿನಾರ್ ಬೈಕ್ ಬೆಲೆ 1.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  2019 ಬಜಾಜ್ ಡೊಮಿನಾರ್ 400 ಬೈಕ್‌ನಲ್ಲಿ SOHC ಎಂಜಿನ್ ಬದಲು DOHC ಎಂಜಿನ್ ಬಳಸಲಾಗಿದೆ.  35 bhp ಪವರ್(@8000 rpm) to 39 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಬಜಾಜ್‌ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?

ನೂತನ ಬಜಾಜ್ ಡೊಮಿನಾರ್ ಹಸಿರು ಬಣ್ಣದಲ್ಲೂ ಲಭ್ಯವಿದೆ. ನೂತನ ಡೊಮಿನಾರ್ ಬೈಕ್ ರಾಯಲ್ ಎನ್‌ಫೀಲ್ಡ್ 350,  ಹೊಂಡಾ CB 300R, KTM 250 ಡ್ಯೂಕ್, BMW G 310 R, TVS ಆಪಾಚೆ RR 310 ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ