ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಅಡಿಯಲ್ಲಿ ಇದೀಗ ಹಲವು ವಿದೇಶಿ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇನ್ನು ಹಲವು ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಘಟಕ ಸೇರಿದಂತೆ ಇತರ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇದೀಗ ಆಸ್ಟ್ರೀಯಾದ KTM ಬೈಕ್ ಆಟೋಮೇಟರ್ ಭಾರತದಲ್ಲೇ ನಿರ್ಮಾಣ ಮಾಡಿದ ಡ್ಯೂಕ್ 200 ಬೈಕ್ ಅಮರಿಕದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.
ನವದೆಹಲಿ(ಆ.04): ಆಸ್ಟ್ರೀಯಾದ KTM ಆಟೋಮೇಟರ್ ಶೀಘ್ರದಲ್ಲೇ ಡ್ಯೂಕ್ 200 ಬೈಕ್ ಅಮೆರಿಕದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. KTM ಕಂಪನಿಯಲ್ಲಿ ಶೇಕಡಾ 48 ರಷ್ಟು ಪಾಲುದಾರಿಗೆ ಹೊಂದಿರುವ ಭಾರತದ ಬಜಾಜ್ ಇದೀಗ ಜಂಟಿಯಾಗಿ ಡ್ಯೂಕ್ 200 ಬೈಕ್ ಉತ್ತರ ಅಮೆರಿಕದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ವಿಶೇಷ ಅಂದರೆ ಈ ಬೈಕ್ ಸಂಪೂರ್ಣವಾಗಿ ಭಾರತದ ಬಜಾಜ್ ಬೈಕ್ ಘಟಕದಲ್ಲಿ ನಿರ್ಮಾಣವಾಗುತ್ತಿದೆ.
ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್!
KTM ಡ್ಯೂಕ್ 200 ಬೈಕ್ ಎಂಟ್ರಿ ಲೆವೆಲ್ ಬೈಕ್ ಆಗಿದೆ. ಅಮೆರಿಕದಲ್ಲಿ ಬಿಡುಗಡೆಯಾಗುತ್ತಿರುವ ಈ ಬೈಕ್ ಬೆಲೆ 4,000 ಅಮೆರಿಕನ್ ಡಾಲರ್(ಭಾರತದ ರೂಪಾಯಿಗಳಲ್ಲಿ ಬೈಕ್ ಬೆಲೆ 2.99 ಲಕ್ಷ ರೂಪಾಯಿ). ಡ್ಯೂಕ್ 390 ಬೈಕ್ ಬೆಲೆಗಿಂತ 1,500 ಅಮೆರಿಕನ್ ಡಾಲರ್ ನಷ್ಟು ಕಡಿಮೆ.
KTM 390 ಬೈಕ್ ಖರೀದಿ ಸುಲಭ, ಭರ್ಜರಿ ಆಫರ್ ಘೋಷಣೆ!
2012ರಲ್ಲಿ ಬಜಾಜ್ ಜೊತೆ ಪಾಲುದಾರಿಕೆಯಲ್ಲಿ KTM ಬೈಕ್ ಭಾರತದಲ್ಲಿ ಉತ್ಪಾದನೆ ಹಾಗೂ ಮಾರಾಟ ಆರಂಭಿಸಿದೆ. ಪುಣೆಯಲ್ಲಿರುವ ಬಜಾಜ್ ಚಕನ್ ಉತ್ಪಾದನೆ ಘಟಕದಲ್ಲಿ ಬೈಕ್ ಉತ್ಪಾದನೆಯಾಗುತ್ತಿದೆ. ಇದೀಗ ಡ್ಯೂಕ್ 200 ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು KTM ಹೇಳಿದೆ.
ಉತ್ತರ ಅಮೆರಿಕದಲ್ಲಿ KTM ಸ್ಪೋರ್ಟ್ಸ್ ಬೈಕ್‌ಗೆ ಭಾರಿ ಬೇಡಿಕೆ ಇದೆ. 1978ರಿಂದ ಅಮೆರಿಕ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವ ಆಸ್ಟ್ರೀಯನ್ ಬೈಕ್ KTM ಪ್ರತಿ ಬಾರಿ ಅತ್ಯುತ್ತಮ ಹಾಗೂ ದಕ್ಷ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್ ಬಿಡುಗಡೆ ಮಾಡಿ ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ.