2,999 ರೂ EMI ಸೇರಿದಂತೆ ಆಕರ್ಷಕ ಕೂಡುಗೆ; ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಇನ್ನೂ ಸುಲಭ!

By Suvarna NewsFirst Published Aug 3, 2020, 1:13 PM IST
Highlights
  • ಹೀರೋ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಹಣಕಾಸು ಸೇವೆ ಸೇರಿದಂತೆ ಇನ್ನಿತರೆ ಆಕರ್ಷಕ ಸೇವೆಗಳನ್ನು ಕಲ್ಪಿಸಲು ಈ ಒಪ್ಪಂದ
  • ಆಟೋವರ್ಟ್ ನಿಂದ ಹೀರೋ ಎಲೆಕ್ಟ್ರಿಕ್ ಗ್ರಾಹಕರಿಗೆ ಹಲವಾರು ಯೋಜನೆಗಳು
  • ಸದ್ಯಕ್ಕೆ ಬೆಂಗಳೂರಿನ ಆಯ್ದ ಡೀಲರ್ ಶಿಪ್ ಗಳಲ್ಲಿ ಈ ಯೋಜನೆ

ಬೆಂಗಳೂರು(ಆ.03): ದೇಶದ ಎಲೆಕ್ಟ್ರಾನಿಕ್ ವಾಹನಗಳ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ವಾಹನಗಳ ಹೊಸ ಮಾಲೀಕರಿಗೆ ಪರ್ಯಾಯ ಮಾಲೀಕತ್ವ ಮಾದರಿಯನ್ನು ಘೋಷಿಸಿದೆ. ಸುಲಭವಾಗಿ  ಸ್ಕೂಟರ್ ಒದಗಿಸುವ ನಿಟ್ಟಿನಲ್ಲಿ ಆಟೋವರ್ಟ್ ಟೆಕ್ನಾಲಾಜಿಸ್ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಪಾಲುದಾರಿಕೆ ಅಡಿಯಲ್ಲಿ ಫೈನ್ ಟೆಕ್ ಸ್ಟಾರ್ಟಪ್ ಆಗಿರುವ ಆಟೋವರ್ಟ್ ಹೀರೋ ಎಲೆಕ್ಟ್ರಿಕ್ ವಾಹನಗಳ ಗ್ರಾಹಕರಿಗೆ ಆಕರ್ಷಕವಾದ ನೋಂದಣಿ ಆಧಾರಿತ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಹೊಸ ಖರೀದಿ ವೇಳೆ ಗ್ರಾಹಕರಿಗೆ ಆಲ್ ಇನ್ ಕ್ಲೂಸಿವ್ ಪ್ರೈಸ್ ಯೋಜನೆಗಳನ್ನು ನೀಡುತ್ತದೆ.

ಹೀರೋ ಹೀರೋ Xpulse ಬೈಕ್ Review:ಆಫ್ ರೋಡ್, ಅಡ್ವೆಂಚರ್, ನಿತ್ಯ ಬಳಕೆಗೂ ಸೈ!

ಅತಿ ಕಡಿಮೆ ಮಾಸಿಕ ಕಂತು 2999 ರೂಪಾಯಿಗಳ ಆಲ್ ಇನ್ ಕ್ಲೂಸಿವ್ ನೋಂದಣಿ ಯೋಜನೆಗಳ ಮೂಲಕ ಗ್ರಾಹಕರು ಹೀರೋ ಎಲೆಕ್ಟ್ರಿಕ್ ವಾಹನವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಸಮಗ್ರ ವಿಮೆ, ಸರ್ವೀಸ್ ಮತ್ತು ಮೇಂಟೇನೆನ್ಸ್, ಲಾಯಲ್ಟಿ ಬೋನಸ್ ಗಳು, ಮೇಲ್ದರ್ಜೆಗೇರಿಸಿಕೊಳ್ಳುವಂತಹ ಆಕರ್ಷಕ ಆಯ್ಕೆಗಳೂ ಇದರಲ್ಲಿರುತ್ತವೆ. ಈ ಸಬ್ ಸ್ಕ್ರಿಪ್ಶನ್ ಅಂದರೆ ನೋಂದಣಿ ಯೋಜನೆಗಳನ್ನು ಪರ್ಯಾಯ ಮಾಲೀಕತ್ವ ಆಯ್ಕೆಗಳಿಗೆ ಬೆಳೆಯುತ್ತಿರುವ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಸಾಂಪ್ರದಾಯಿಕವಾದ ಆಟೋ ಫೈನಾನ್ಸ್ ವ್ಯವಸ್ಥೆಯನ್ನು ಮತ್ತಷ್ಟು ಸುಲಭವಾಗುವಂತಹ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರಿಗೆ ನೀಡಲಾಗುತ್ತಿದೆ.

ಆಕರ್ಷಕ ಹಾಗೂ ದಕ್ಷತೆಯ ಹೀರೋ Xtreme 160R ಬೈಕ್ ಬಿಡುಗಡೆ!...

ಹೀರೋ ಎಲೆಕ್ಟ್ರಿಕ್ ಮತ್ತು ಆಟೋವರ್ಟ್ ಪಾಲುದಾರಿಕೆ ಹಿಂದಿನ ಪ್ರಮುಖ ಉದ್ದೇಶವೆಂದರೆ ಗ್ರಾಹಕರಲ್ಲಿ ಆಗುತ್ತಿರುವ ಡಿಜಿಟಲ್ ಫಸ್ಟ್ ಅನುಭವದಲ್ಲಿನ ಬದಲಾವಣೆಗೆ ಆದ್ಯತೆ ನೀಡುವುದಾಗಿದೆ. ಇದರಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಸೇರ್ಪಡೆ ಮಾಡಿದಂತಾಗುತ್ತದೆ. ಆಟೋವರ್ಟ್ ಆಟೋವರ್ಟ್ ಪ್ಲಗ್ ಎಂಬ ಐಒಟಿ ಆಧಾರಿತ ತಂತ್ರಜ್ಞಾನ ಪ್ಲಾಟ್ ಫಾರ್ಮ್ ಅನ್ನು ಬಳಕೆ ಮಾಡಿಕೊಂಡು ಸಬ್ ಸ್ಕ್ರೈಬರ್ ಕೈಲಿರುವ ವಾಹನವನ್ನು ಜೀವಿತಾವಧಿವರೆಗೆ ನಿರ್ವಹಣೆ ಮಾಡಲಿದೆ. ಆಟೋವರ್ಟ್ ಪ್ಲಗ್ ಸಬ್ ಸ್ಕ್ರಿಪ್ಶನ್ ಯೋಜನೆಯು ಪೈಲಟ್ ಆಧಾರದಲ್ಲಿ ಬೆಂಗಳೂರಿನ ಆಯ್ದ ಡೀಲರ್ ಶಿಪ್ ಗಳಲ್ಲಿ ಜಾರಿಗೆ ಬಂದಿದೆ. ಸದ್ಯದಲ್ಲಿಯೇ ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ಬರಲಿದೆ.

ಸುಲಭವಾದ ಬಳಕೆಯ ಜತೆಯಲ್ಲೇ ಗ್ರಾಹಕರು ಪರ್ಯಾಯ ಮಾಲೀಕತ್ವದ ಆಯ್ಕೆಗಳನ್ನು ಎದುರು ನೋಡುತ್ತಿದ್ದಾರೆ. ಕೈಗೆಟುಕುವ ವೈಯಕ್ತಿಕ ಚಲನಶೀಲತೆಯ ಭವಿಷ್ಯವು ವಿದ್ಯುತ್ ಚಾಲಿತವಾಗಿರುತ್ತದೆ. ಈ ದಿಸೆಯಲ್ಲಿ ನಾವೂ ಗಮನಹರಿಸಿದ್ದೇವೆ. ಎಲೆಕ್ಟ್ರಿಕ್ ವಾಹನ ಖರೀದಿಯ ವಿಚಾರದಲ್ಲಿ ಹೊಸ ಪೀಳಿಗೆಯ ಖರೀದಿದಾರದು ಸುಲಭ ಮತ್ತು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ನಾವು ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ನಮ್ಮ ಸೇವೆಗಳನ್ನು ನೀಡಲಿದ್ದೇವೆ. ಹೀರೋ ಎಲೆಕ್ಟ್ರಿಕ್ ನಾವೀನ್ಯತೆ ಮತ್ತು ಹೊಸ ಹೊಸ ಆವಿಷ್ಕಾರಗಳು ಹಾಗೂ ಖರೀದಿಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಸುಲಭ ಹಣಕಾಸು ಸೌಲಭ್ಯಗಳನ್ನು ಬಳಕೆದಾರರಿಗೆ ನೀಡುವ ಬದ್ಧತೆಯನ್ನು ಹೊಂದಿದೆ. ಇದರ ಉದ್ದೇಶ ಸುಲಭವಾಗಿ ಖರೀದಿ, ಚಾಲನೆ ಮತ್ತು ನಿರ್ವಹಣೆಯಾಗಿದೆ ಎಂದು  ಆಟೋವರ್ಟ್ ಟೆಕ್ನಾಲಾಜಿಸ್ ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಸಚಿನ್ ಮೆಹ್ತಾ ಹೇಳಿದರು.

ಯಾವುದೇ ವಾಹನ ಖರೀದಿ ಪ್ರಕ್ರಿಯೆಯಲ್ಲಿ ಸುಲಭ ಮತ್ತು ಅನುಕೂಲತೆಗಳಿಗೆ ಆದ್ಯತೆ ನೀಡಲಾಗುತ್ತದೆ. ಇವು ಹೆಚ್ಚು ಮೌಲ್ಯಯುತವಾದ ಅಂಶಗಳಾಗಿವೆ. ದುರದೃಷ್ಠವಶಾತ್, ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಹಣಕಾಸು ವಿಚಾರದಲ್ಲಿ ಇದು ಸುಲಭವಾದ ಅನುಭವವಾಗಿಲ್ಲ. ಹಣಕಾಸು ಸೌಲಭ್ಯ ಪಡೆಯುವುದು ಗ್ರಾಹಕರಿಗೆ ಕಷ್ಟಕರವಾಗಿತ್ತು. ಈ ದಿಸೆಯಲ್ಲಿ ನಾವು ಆಟೋವರ್ಟ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇದರ ಮೂಲಕ ಹೆಚ್ಚು ಗೊಂದಲಗಳಿಲ್ಲದೇ ಗ್ರಾಹಕರಿಗೆ ಹೀರೋ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವುದು ಮತ್ತು ಮಾಲೀಕತ್ವ ಹೊಂದುವುದನ್ನು ಸಾಕಷ್ಟು ಸುಲಭ ಮಾಡುತ್ತಿದ್ದೇವೆ. ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಗಣನೀಯ ಹೆಚ್ಚಳವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದಾಗಿ ನಾವು ನಮ್ಮ ಗ್ರಾಹಕರು ಯಾವುದೇ ಅಡೆತಡೆಗಳಿಲ್ಲದೇ ಎಲೆಕ್ಟ್ರಿಕ್ ವಾಹನ ಖರೀದಿಯನ್ನು ಸುಲಭವಾಗುವ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆ. ಮಾರಾಟ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೆ, ಆಟೋವರ್ಟ್ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ಹೀರೋ ಎಲೆಕ್ಟ್ರಿಕ್ ಖರೀದಿದಾರರಿಗೆ ಖರೀದಿ ಪ್ರಕ್ರಿಯೆಯನ್ನು ಸಾಕಷ್ಟು ಸುಲಭ ಮಾಡುತ್ತಿದ್ದೇವೆ. ಐಒಟಿ ಆಧಾರಿತ ತಂತ್ರಜ್ಞಾನ ಬಳಸಿಕೊಂಡು ಹಣಕಾಸು ಸೇವೆಗಳ ನಿರ್ವಹಣೆ ಸೇರಿದಂತೆ ಇನ್ನಿತರೆ ಸೇವೆಗಳ ನಿರ್ವಹಣೆ ಮಾಡುವ ಆಟೋವರ್ಟ್ ನೊಂದಿಗೆ ಸಹಭಾಗಿತ್ವ ಹೊಂದಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ ಎಂದು ಹೀರೋ ಎಲೆಕ್ಟ್ರಿಕ್ ನ ಸಿಇಒ ಸೋಹಿಂದರ್ ಗಿಲ್ ಹೇಳಿದರು.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯ ಕ್ಷೇತ್ರದಲ್ಲಿ ಹೀರೋ ಎಲೆಕ್ಟ್ರಿಕ್ ಮತ್ತು ಆಟೋವರ್ಟ್ ನ ಸಹಭಾಗಿತ್ವವು ಹೊಸ ಅಧ್ಯಾಯವನ್ನು ಆರಂಭಿಸಿದೆ. ಈ ಉಪಕ್ರಮದೊಂದಿಗೆ ಎರಡೂ ಬ್ರ್ಯಾಂಡ್ ಗಳು ಎಲೆಕ್ಟ್ರಿಕ್ ವಾಹನಗಳ ಖರೀದಿ ಪ್ರಕ್ರಿಯೆಯನ್ನು ತಡೆರಹಿತವಾಗಿ ನಡೆಯುವಂತೆ ಮಾಡಲಿವೆ. ಹೀರೋ ಎಲೆಕ್ಟ್ರಿಕ್ ಗ್ರಾಹಕರ ಅನುಭವವನ್ನು ಪುನಾರಚನೆಗೆ ಹಲವಾರು ಆಕರ್ಷಕ ಯೋಜನೆಗಳನ್ನು ರೂಪಿಸಿದ್ದು ಈ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.

click me!