ನೂತನ ಬಜಾಜ್ ಪ್ಲಾಟಿನ 110 ಬೈಕ್ ಬಿಡುಗಡೆ-ಬೆಲೆ ಎಷ್ಟು?

Published : Dec 17, 2018, 07:34 PM IST
ನೂತನ ಬಜಾಜ್ ಪ್ಲಾಟಿನ 110 ಬೈಕ್ ಬಿಡುಗಡೆ-ಬೆಲೆ ಎಷ್ಟು?

ಸಾರಾಂಶ

ಬಜಾಜ್ ಪ್ಲಾಟಿನ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹೊಸ ಫೀಚರ್ಸ್ ಹಾಗೂ ಹೆಚ್ಚು ದಕ್ಷತೆ ಹೊಂದಿರುವ ನೂತನ ಪ್ಲಾಟಿನ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ಡಿ.17): ಬಜಾಜ್ ಆಟೋ ನೂತನ ಪ್ಲಾಟಿನ 110 ಬೈಕ್ ಬಿಡುಗಡೆ ಮಾಡಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ  ಈ ಮೂಲಕ ಹೀರೋ ಪ್ಯಾಶನ್ ಪ್ರೋ, ಹೊಂಡಾ ಸಿಡಿ110, ಡ್ರೀಮ್ ಡಿಎಕ್ಸ್ ಸೇರಿದಂತೆ 110 ಸಿಸಿ ಎಂಜಿನ್ ಬೈಕ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿದೆ. 

ಇದನ್ನೂ ಓದಿ: ಭಾರತದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ ಲ್ಯಾಂಬಿ ಸ್ಕೂಟರ್!

ಟ್ಯೂಬ್‌ಲೆಸ್ ಟೈಯರ್, ಆ್ಯಂಟಿ ಸ್ಕಿಡ್ ಬ್ರೇಕ್ ಸೇರಿದಂತೆ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ನೂತನ ಪ್ಲಾಟಿನ 115 ಸಿಸಿ , ಸಿಂಗಲ್ ಸಿಲಿಂಡರ್, ಏರ್ ಕೂಲ್‌ಡ್ ಎಂಜಿನ್ ಹೊಂದಿದೆ. 8.4 bhp ಪವರ್ ಹಾಗೂ 9.81 ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಕಾರುಗಳಿಗೆ ಪೈಪೋಟಿ- ಬಿಡುಗಡೆಯಾಗಲಿದೆ 4 ಎಲೆಕ್ಟ್ರಿಕ್ ಕಾರು!

4 ಸ್ಪೀಡ್ ಗೇರ್‌ಬಾಕ್ಸ್, 135mm ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್(CBS),ನೂತನ  ಗ್ರಾಫಿಕ್ಸ್, ಎಲ್ಇಡಿ ಲೈಟ್ಸ್, ಬ್ಲಾಕ್ ಆಲೋಯ್ ವೀಲ್ಹ್ಸ್ ಕೂಡ ನೂತನ ಪ್ಲಾಟಿನ ಬೈಕ್ ವಿಶೇಷತೆ. ಈ ಬೈಕ್ ಬೆಲೆ 49,147 ರೂಪಾಯಿ(ಎಕ್ಸ್ ಶೋ ರೂಂ).

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ಕೇವಲ 5,000 ರೂಪಾಯಿಗೆ ಮನೆಗೆ ತನ್ನಿ ನೂತನ ಇವಿ ಸ್ಕೂಟರ್: 4 ಗಂಟೆಗಳಲ್ಲಿ ಫುಲ್ ಚಾರ್ಜ್, 145 ಕಿ.ಮೀ ಮೈಲೇಜ್!
ಡುಯಲ್ ಸಿಲಿಂಡರ್ ಸಿಎನ್‌ಜಿ, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ: ಟಾಟಾ ಏರಿಸ್ ಕಾರಿನ ಆಕರ್ಷಕ ಫೀಚರ್ಸ್ ಇಲ್ಲಿದೆ