Latest Videos

ಇದು ಸ್ವದೇಶಿ ಅಲ್ಲ ಸಂಪೂರ್ಣ ವಿದೇಶಿ: ಲ್ಯಾಂಡ್ ರೋವರ್ ಡಿಫೆಂಡರಲ್ಲಿ ರಾಮ್‌ದೇವ್ ಸವಾರಿ

By Anusha KbFirst Published Jul 25, 2023, 5:59 PM IST
Highlights

ಪತಂಜಲಿ ಪ್ರಾಡಕ್ಟ್ ಹಾಗೂ ಯೋಗದ ಮೂಲಕ ದೇಶಾದ್ಯಂತ ಹೆಸರುವಾಸಿಯಾದವರು ಬಾಬಾ ರಾಮ್‌ದೇವ್. ಈಗ ಅವರು 1.5 ಕೋಟಿ ಮೊತ್ತದ ಲ್ಯಾಂಡ್ ರೋವರ್ ಡಿಫೆಂಡರ್‌ನ್ನು ಚಲಾಯಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಲಕ್ನೋ: ಪತಂಜಲಿ ಪ್ರಾಡಕ್ಟ್ ಹಾಗೂ ಯೋಗದ ಮೂಲಕ ದೇಶಾದ್ಯಂತ ಹೆಸರುವಾಸಿಯಾದವರು ಬಾಬಾ ರಾಮ್‌ದೇವ್. ಈಗ ಅವರು 1.5 ಕೋಟಿ ಮೊತ್ತದ ಲ್ಯಾಂಡ್ ರೋವರ್ ಡಿಫೆಂಡರ್‌ನ್ನು ಚಲಾಯಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಪ್ರಸ್ತುತ ರಾಮ್ ದೇವ್ ಎಂದೇ ಫೇಮಸ್ ಆಗಿರುವ ಯೋಗ ಗುರುವಿನ ಮೂಲ ಹೆಸರು ರಾಮಕೃಷ್ಣ ಯಾದವ್, ಇವರ ಬಳಿ ಮೊದಲು ಮಹೀಂದ್ರಾ (Mahindra XUV700) ಗಾಡಿ ಇತ್ತು. ಈಗ ಅದರ ಬದಲು ಲ್ಯಾಂಡ್ ರೋವರ್ ಡಿಫೆಂಡರ್ 130 ಗಾಡಿ  ಬಂದಿದ್ದು, ಅದನ್ನು ರಾಮ್‌ದೇವ್ ಅವರು ಡ್ರೈವ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.  ಹೊಸ ಗಾಡಿಯಂತೆ ಇದು ಕಾಣಿಸುತ್ತಿದ್ದು, ಇದರಲ್ಲಿ ನಂಬರ್ ಪ್ಲೇಟ್ ಕೂಡ ಇಲ್ಲ.  ಡ್ರೈವಿಂಗ್ ಸೀಟ್‌ನಲ್ಲಿ ರಾಮ್ ದೇವ್ ಇದ್ದು ಪಕ್ಕದಲ್ಲಿ ಸಿಬ್ಬಂದಿಯೊಬ್ಬರು ಕುಳಿತಿದ್ದಾರೆ. 

 Land Rover Defenderನ ಸೆಡೊನಾ ರೆಡ್ ಬಣ್ಣದ ಕಾರು ಇದಾಗಿದ್ದು, ಬೇರೆ 110 ರೂಪಾಂತರದಲ್ಲಿ ಇದು ಲಭ್ಯವಿಲ್ಲ. ಈ ವರ್ಷದ ಆರಂಭದಲ್ಲಷ್ಟೇ ಈ ಗಾಡಿ (Defender 130 ) ಭಾರತದಲ್ಲಿ ಲಾಂಚ್ ಆಗಿತ್ತು.  ಅಲ್ಲದೇ  ಇತ್ತೀಚೆಗಷ್ಟೇ ಡೆಲಿವರಿ  ನೀಡಲು ಶುರುವಾಗಿದೆ. ಡಿಫೆಂಡರ್ 130 ಕಾರಿನ ಬೆಲೆ 1.3 ಕೋಟಿ ರೂ.ಗಳಿಂದ ಆರಂಭವಾಗಿ 1.41 ಕೋಟಿ ರೂ. ವರೆಗೆ ಇದ್ದು, ಇದನ್ನು ರಾಮ್‌ದೇವ್ ಅವರು ಸ್ವತಃ ಖರೀದಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ..

ಡಿಫೆಂಡರ್ 130  ಕಾರು ಡಿಫೆಂಡರ್ 110 ರ ವಿಸ್ತೃತ ಆವೃತ್ತಿಯಾಗಿದ್ದು, ಇದರ ಹಿಂಭಾಗ ಮೂರನೇ ಸಾಲಿನ ಆಸನಗಳನ್ನು ಸರಿಹೊಂದಿಸಲು ಒಟ್ಟಾರೆ 340 ಎಂಎಂ ಉದ್ದ ಹೆಚ್ಚಳ ಮಾಡಲಾಗಿದೆ. ಆದರೆ ಅದೇ ವೀಲ್‌ಬೇಸ್ ಹೊಂದಿದ್ದು,  ಕಾರಿನ ಭಾಗ ಸ್ವಲ್ಪ ಉದ್ದವಾಗಿದೆ.  ಬಾಹ್ಯ ವಿನ್ಯಾಸ ಮತ್ತು ಕ್ಯಾಬಿನ್ ವಿನ್ಯಾಸವು ಡಿಫೆಂಡರ್ 110 ರಂತೆ ಇದೆ. ಸಿಂಗಲ್-ಪಾಡ್ ಎಲ್‌ಇಡಿ (single-pod LED), ಹಗಲಿನ ವೇಳೆ ಉರಿಯುವ ಲೈಟ್, ಸುಂದರವಾದ ಸನ್‌ರೂಫ್ ( panoramic sunroof), ಇದರ ಜೊತೆ 20 ಇಂಚಿನ ಮಿಶ್ರಲೋಹದ ಹೊಂದಿರುವ ಟಯರ್‌ಗಳು ಹಾಗೂ  ಟೈಲ್ ಲ್ಯಾಂಪ್ ಈ ಎಸ್‌ಯುವಿ ಗಾಡಿಯ ವೈಶಿಷ್ಟ್ಯವಾಗಿದೆ. 

ಅಲೋಪತಿಯಲ್ಲಿ ಕ್ಯಾನ್ಸರ್, ಹೈ ಬಿಪಿ, ಮಧುಮೇಹಕ್ಕೆ ಔಷಧಿ ಇಲ್ಲ: ಮತ್ತೆ ವಿವಾದ ಸೃಷ್ಟಿಸಿದ ಬಾಬಾ ರಾಮ್‌ದೇವ್‌..!

ಒಳಗೆ ಕಾಲಿಡುತ್ತಿದ್ದಂತೆ ನಿಮಗೆ ಈ  ಡಿಫೆಂಡರ್ 130 ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 11.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 4-ಜೋನ್ ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, 14-ವೇ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು 360-ಡಿಗ್ರಿ ಕ್ಯಾಮೆರಾದಂತಹ ಸೌಲಭ್ಯಗಳನ್ನು ನೀಡುತ್ತದೆ.  ಭಾರತೀಯ ಮಾರುಕಟ್ಟೆಗೆ, ಲ್ಯಾಂಡ್ ರೋವರ್ ಡಿಫೆಂಡರ್ 130 ಎರಡು ಎಂಜಿನ್ ಆಯ್ಕೆಗಳನ್ನು ನೀಡಿದೆ. ಮೊದಲನೆಯದು 3.0 ಲೀಟರ್ ಪೆಟ್ರೋಲ್ ಎಂಜಿನ್ (P400) 394 BHP ಮತ್ತು 550 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಎರಡನೆಯದು 3.0-ಲೀಟರ್ ಡೀಸೆಲ್ ಎಂಜಿನ್ (D300) ಇದು 2960 BHP ಹಾಗೂ 600 ಎಂಎಂ ಟಾರ್ಕ್ ನೀಡುತ್ತದೆ. 

ಕೈಗಾರಿಕೋದ್ಯಮಿ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ಅವರು ಸಾವಿರಾರು ಕೋಟಿ ಮೌಲ್ಯದ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ.  ಅವರು ಕೆಲ ದಿನಗಳ ಹಿಂದಷ್ಟೇ  ಹೊಚ್ಚಹೊಸ ಮಹೀಂದ್ರಾ XUV700 ಖರೀದಿಸಿದ್ದರು. ಆದರೆ ಈಗ ಬಾಬಾ ರಾಮ್‌ದೇವ್ ಅವರು ಡ್ರೈವ್ ಮಾಡ್ತಿರುವ ಈ ಅತ್ಯಂತ ದುಬಾರಿ ವಾಹನ ಅವರದೇ ಅಥವಾ ಬೇರೆಯವರದೇ ಎಂಬುದು ಗೊತ್ತಿಲ್ಲ. ರಾಮ್‌ದೇವ್ ಸ್ವತಃ ಯಾವುದೇ ಐಷಾರಾಮಿ ಕಾರುಗಳನ್ನು ಹೊಂದಿಲ್ಲದಿದ್ದರೂ, ಈ ಹಿಂದೆ ಜಾಗ್ವಾರ್ ಎಕ್ಸ್‌ಜೆ ಎಲ್‌ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು  ಅವರ ಆಪ್ತ ಸಹಾಯಕ ಬಾಲಕೃಷ್ಣ ಅವರು ಲ್ಯಾಂಡ್ ರೋವರ್ ರೇಂಜ್ ರೋವರ್ ಹೊಂದಿದ್ದಾರೆ.

ಕೊರೋನಾ ಬಳಿಕ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದ ಬಾಬಾ ರಾಮ್‌ದೇವ್‌!

ಇದಕ್ಕೂ ಮೊದಲು ಬಾಬಾ ರಾಮ್‌ದೇವ್ ಸೈಕಲ್‌ನಲ್ಲಿ ಓಡಾಡುತ್ತಿರುವುದನ್ನು ಜನ ನೋಡಿದ್ದರು. ಆದರೆ ಈಗ ಕಾರು ಚಲಾಯಿಸುತ್ತಿರುವ ವೀಡಿಯೋ ವೈರಲ್ ಆಗಿದೆ.  ಅದೇನೆ ಇರಲಿ ರಾಮ್‌ದೇವ್ ಅವರ ಸ್ವದೇಶಿ ಉತ್ಪನ್ನದ ಕರೆಗೆ ಓಗೊಟ್ಟು ದೇಶದ ಲಕ್ಷಾಂತರ ಜನ ಇಂದು ಪತಂಜಲಿ ಉತ್ಪನ್ನವನ್ನೇ ತಮ್ಮ ದಿನ ಬಳಕೆಯಲ್ಲಿ ಬಳಸುತ್ತಿದ್ದು, ಇದರ ಪರಿಣಾಮ ಅಚಾರ್ಯ ಬಾಲಕೃಷ್ಣ ಮಾಲೀಕತ್ವದ ಪತಂಜಲಿ ನಿವ್ವಳ ಮೌಲ್ಯ 3 ಸಾವಿರ ಕೋಟಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಾಬಾ ರಾಮ್ ದೇವ್‌ ವಿಮಾನದಲ್ಲಿ ಓಡಾಡಿದರು ಅಚ್ಚರಿ ಏನಿಲ್ಲ ಬಿಡಿ.

 

click me!