ಕೊರೋನಾ ವೈರಸ್ ಹಾಗೂ ಲಡಾಖ್ ಗಡಿ ಸಮಸ್ಯ ಭಾರತದ ಉತ್ಪಾದನಾ ಕ್ಷೇತ್ರದ ಮೇಲೆ ತೀವ್ರ ಹೊಡೆತ ನೀಡಿದೆ. ಚೀನಿ ವಸ್ತು ಬಹಿಷ್ಕಾರ ಸೇರಿದಂತೆ ಹಲವು ಆಂದೋಲನಗಳು ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಕಷ್ಟ ತಂದೊಡ್ಡಿದೆ. ಇದೀಗ ಚೀನಾದಿಂದ ಬಿಡಿ ಭಾಗಗಳ ಆಮದು ಸಮಸ್ಯೆಯಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹೊಡೆತ ನೀಡಿದೆ.
ನವದೆಹಲಿ(ಜೂ.29): ಕೊರೋನಾ ವೈರಸ್ ಬಳಿಕ ಲಡಾಖ್ ಗಡಿ ಬಿಕ್ಕಟ್ಟು ಭಾರತ ಹಾಗೂ ಚೀನಾ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಇದು ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಡೆತ ನೀಡಿದೆ. ಭಾರತದ ಆಟೋಮೊಬೈಲ್ ಕ್ಷೇತ್ರ ಬಿಡಿ ಭಾಗಕ್ಕಾಗಿ ಚೀನಾ ಅವಲಂಬಿಸಿದೆ. ಒಂದೆಡೆ ಚೀನಾ ವಸ್ತುಗಳ ಬಹಿಷ್ಕಾರ ಮತ್ತೊಂದೆಡೆ ಕೊರೋನಾ ವೈರಸ್ ಚೀನಾ ವಸ್ತುಗಳ ಆಮದಿಗೆ ಹಿನ್ನಡೆಯಾಗಿದೆ.
ಸ್ಥಳೀಯರಿಗೆ ಉದ್ಯೋಗ; ಭಾರತದಲ್ಲಿರುವ ಚೀನಾ ಕಂಪನಿಗಳ ಪ್ಲಾನ್!..
ಕೊರೋನಾ ವೈರಸ್ ಕಾರಣ ಭಾರತ ಸದ್ಯ ಎಲೆಕ್ಟ್ರಿಕ್ ವಾಹನಗಳ ಬಿಡಿ ಭಾಗಗಳು ಕೊರತೆ ಎದುರಿಸುತ್ತಿದೆ. ಚೀನಾದಿಂದ ಆಮದು ಮಾಡಿಕೊಂಡಿರುವ ಬಹುತೇಕ ಬಿಡಿಭಾಗಗಳೆಲ್ಲಾ ಭಾರತದ ಬಂದರುಗಳಲ್ಲಿ ಬಿದ್ದಿವೆ. ಕೊರೋನಾ ವೈರಸ್ ಕಾರಣ ಬಂದರುಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಆಮದು ಆಗಿರುವ ಬಿಡಿ ಭಾಗಗಳು ಸಾಗಿಸಲು ಸಾಧ್ಯವಾಗುತ್ತಿಲ್ಲ.
ಚೀನಾ ವಸ್ತು ಬಹಿಷ್ಕರಿಸಲು ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೇಟು!..
ಬಂದರಿನಿಂದ ಬಿಡಿ ಭಾಗಗಳು ಕ್ಲೀಯರೆನ್ಸ್ ಆಗದೇ ಹಾಗೇ ಉಳಿದುಕೊಂಡಿದೆ. ಚೀನಾಗೂ ಬಿಡಿ ಭಾಗಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ವೈರಸ್ ಕಾರಣ ಕೆಲ ಮಾರ್ಗಸೂಚಿಗಳು, ನಿಯಮಿತ ನೌಕರರ ಕಾರಣ ರಫ್ತು ವಿಳಂಬವಾಗುತ್ತಿದೆ. ಈ ಸಮಸ್ಯೆಯಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ತೀವ್ರ ಹೊಡೆತ ನೀಡಿದೆ. ಲಿಥಿಯಂ ಐಯಾನ್ ಬ್ಯಾಟರಿ ಸೇರಿದಂತೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಬಹುತೇಕ ಎಲ್ಲಾ ರಾಷ್ಟ್ರಗಳು ಚೀನಾವನ್ನೇ ನೆಚ್ಚಿಕೊಂಡಿದೆ.
ಬ್ಯಾಟರಿ ಸಮಸ್ಯೆಯಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ವಿಳಂಬವಾಗುತ್ತಿದೆ.