ಕೊರೋನಾ ಕಾರಣ ಆನ್‌ಲೈನ್ ಬುಕಿಂಗ್; 1ರ ಬದಲು 28 ಕಾರು ಬುಕ್ ಮಾಡಿದ ಗ್ರಾಹಕ ಕಂಗಾಲು!

By Suvarna News  |  First Published Jun 29, 2020, 3:16 PM IST

ಕೊರೋನಾ ವೈರಸ್ ಕಾರಣ ಬಹುತೇಕ ಕೆಲಸಗಳು ಆನ್‌ಲೈನ್, ಮನೆಯಲ್ಲೇ ನಡೆಯುತ್ತಿದೆ. ದಿನಸಿ, ತರಕಾರಿ, ಹಾಲು ಎಲ್ಲವೂ ಕೂಡ ಅನ್‌ಲೈನ್. ಇತ್ತ ವಾಹನ ಖರೀದಿ ಕೂಡ ಅನ್‌ಲೈನ್ ಆಗಿದೆ. ವೈರಸ್ ಭೀತಿಯಿಂದ ಗ್ರಾಹಕನೋರ್ವ ಟೆಸ್ಲಾ ಕಾರು ಖರೀದಿಸಲು ಆನ್‌ಲೈನ್ ಮೊರೆ ಹೋಗಿದ್ದಾರೆ. 1 ಕಾರು ಬುಕ್ ಮಾಡುವ ಬದಲು ಎಡವಟ್ಟಿನಿಂದ 28 ಕಾರು ಬುಕ್ ಮಾಡಿದ್ದಾನೆ. ಇಷ್ಟೇ ಅಲ್ಲ, ಈತ ಉಳಿಸಿದ್ದ ಹಣವೆಲ್ಲಾ ಕ್ಷಣ ಮಾತ್ರದಲ್ಲಿ ಆವಿಯಾಗಿದೆ.


ಜರ್ಮನಿ(ಜೂ.29): ಟೆಸ್ಲಾ ಕಾರಿಗೆ ವಿಶ್ವದಲ್ಲೇ ಬಾರಿ ಬೇಡಿಕೆ ಇದೆ. ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಇಷ್ಟೇ ಕೊಂಚ ದುಬಾರಿ ಕಾರಾಗಿರುವುದರಿಂದ ಈ ಕಾರು ಖರೀದಿಸುವುದು ಪ್ರತಿಷ್ಠೆ ಕೂಡ ಹೌದು.  ಜರ್ಮನಿ ವಕ್ತಿ ತನ್ನ ಫೋರ್ಡ್ ಕಾರಿನ ಬದಲು ಟೆಸ್ಲಾ 3  ಕಾರು ಖರೀದಿಸಲು ಮುಂದಾಗಿದ್ದಾನೆ. ಕೊರೋನಾ ಕಾರಣ ಶೋಂ ರೂಂಗೆ ತೆರಳಿ ಕಾರು ಬುಕ್ ಮಾಡುವುದು ಉಚಿವಲ್ಲ ಎಂದು ಆನ್‌ಲೈನ್ ಮೂಲಕ ಬುಕ್ ಮಾಡಲು ನಿರ್ಧರಿಸಿದ್ದಾನೆ.

ಅಂಬಾನಿ to ರಿತೇಶ್ ದೇಶ್‌ಮುಖ್: ಅಮೆರಿಕಾದ ಟೆಸ್ಲಾ ಕಾರು ಖರೀದಿಸಿದ ಭಾರತೀಯರು!.

Tap to resize

Latest Videos

undefined

ಟೆಸ್ಲಾ ವೆಬ್‌ಸೈಟ್ ತೆರೆದು ಕಾರಿನ ಕುರಿತು ಪರಿಶೀಲಿಸಿದ್ದಾನೆ. ಕೊನೆಗೆ ಟೆಸ್ಲಾ 3 ಕಾರು ಬುಕ್ ಮಾಡಿದ್ದಾನೆ. ಬುಕಿಂಗ್ ವೇಳೆ, ವಿಳಾಸ, ಫೋನ್ ನಂಬರ್ ಸೇರಿದಂತೆ ಇತರ ದಾಖಲೆ ನಮೂದಿಸಿದ್ದಾನೆ. ಬಳಿಕ ಹಣ ಪಾವತಿಸಲು ತನ್ನ ಬ್ಯಾಂಕ್ ಖಾತೆ ವಿವರ ದಾಖಲಿಸಿದ್ದಾನೆ.  ಅಗತ್ಯ ದಾಖಲೆ, ವಿವರ ನೀಡಿದ ಬಳಿಕ ಅಂತಿಮ ಕನ್‌ಫರ್ಮ್ ಬಟನ್ ಕ್ಲಿಕ್ ಮಾಡಿದ್ದಾನೆ.

ಡ್ರೈವರ್‌ ನಿದ್ದೆ ಮಾಡಿದ್ರೂ 90 ಕಿ.ಮೀ. ವೇಗದಲ್ಲಿ ಚಲಿಸಿದ ಟೆಸ್ಲಾ ಕಾರು

ಕನ್‌ಫರ್ಮ್ ಬಟನ್ ಕ್ಲಿಕ್ ಮಾಡಿದ ಬೆನ್ನಲ್ಲೇ ಪ್ರೊಸೆಸಿಂಗ್ ಎಂದು ಸಂದೇಶ ಕಾಣಿಸಿದೆ. ಮರುಕ್ಷಣದಲ್ಲೇ ಎರರ್(ತಪ್ಪಾಗಿದೆ) ಎಂದು ತೋರಿಸಿದೆ. ಹೀಗಾಗಿ ಮತ್ತೆ ಕನ್‌ಫರ್ಮ್ ಬಟನ್ ಕ್ಲಿಕ್ ಮಾಡಿದ್ದಾನೆ. ಈ ವೇಳೆಯೂ ಎರರ್ ಎಂದು ತೋರಿಸಿದೆ. ಪದೇ ಪದೇ ಕ್ಲಿಕ್ ಮಾಡಿದ ಈತ 28 ಬಾರಿ ಕ್ಲಿಕ್ ಬಟನ್ ಒತ್ತಿದ್ದಾನೆ. ಬಳಿಕ ಕೆಲ ಹೊತ್ತಿನ ಬಳಿಕ ಪ್ರಯತ್ನಿಸಲು ಮುಂದಾಗಿದ್ದಾನೆ. 2 ನಿಮಿಷದ ಬೆನ್ನಲ್ಲೇ ಈತನ ಮೊಬೈಲ್‌ಗೆ 11.89 ಕೋಟಿ ರೂಪಾಯಿ ಕಡಿತವಾಗಿರುವ ಸಂದೇಶ ಬಂದಿದೆ. 

ತಕ್ಷಣವೇ ತನ್ನ ಬುಕಿಂಗ್ ನೋಡಿದಾಗ 28 ಟೆಸ್ಲಾ 3 ಕಾರು ಬುಕ್ ಆಗಿದೆ. ಇದಕ್ಕಾಗಿ 11,89,47,322 ರೂಪಾಯಿ ಕಡಿತಗೊಂಡಿದೆ. ತಲೆ ಚಚ್ಚಿಕೊಂಡ ಗ್ರಾಹಕ ಒಂದು ಕ್ಷಣ ಎನು ಮಾಡಬೇಕು ಎಂದು ತೋಚದೆ ಸುಮ್ಮನೆ ಕುಳಿತಿದ್ದಾನೆ. ಕಾರಣ ಟೆಸ್ಲಾ ಕಾರು ಬುಕಿಂಗ್ ಮಾಡಿದಾಗ ಪಾವತಿಸುವ ಹಣ ಹಿಂತಿರುಗಿಸುವುದಿಲ್ಲ. ಇದು ಕಂಪನಿ ನಿಯಮ. ಬಳಿಕ ಟೆಸ್ಲಾ ಕಂಪನಿಗೆ ಕರೆ ಮಾಡಿ ಈ ರೀತಿ ಎಡವಟ್ಟು ಮಾಡಿರುವುದನ್ನು ತಿಳಿಸಿದ್ದಾನೆ.

ಟೆಸ್ಲಾ ಕಂಪನಿ, ಗ್ರಾಹಕನ ಎಡವಟ್ಟು ಗಮನಿಸಿ, ಆತನಿಗೆ 27  ಕಾರುಗಳ ಹಣ ಹಿಂತಿರುಗಿಸಿದೆ. ಹೀಗಾಗಿ ಹೋದ ಜೀವ ಬಂದಂತಾಗಿದೆ. ಮೊದಲೇ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಕಂಗಾಲಾಗಿರುವ ವೇಳೆ 28 ಕಾರು ಹಾಗೂ ತನ್ನ 11.89 ಕೋಟಿ ರೂಪಾಯಿ ಕಡಿತದಿಂದ ಕಂಗಾಲಾಗಿ ಹೋಗಿದ್ದ.

click me!