ಮೊದಲ ಎಲೆಕ್ಟ್ರಿಕ್ ಮಿನಿಬಸ್ ಬಿಡುಗಡೆ ಮಾಡಿದ ಹ್ಯುಂಡೈ!

By Suvarna News  |  First Published Jun 29, 2020, 2:35 PM IST

ಭಾರತದ ಎರಡನೇ ಅತೀ ದೊಡ್ಡ ಆಟೋಮೇಕರ್ ಹ್ಯುಂಡೈ ಭಾರತದಲ್ಲಿ ಪ್ಯಾಸೇಂಜರ್ ವಾಹನ ಮೂಲಕ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಸೌತ್ ಕೊರಿಯಾದ ಹ್ಯುಂಡೈ ಆಟೋಮೊಬೈಲ್ ಕಂಪನಿ ಇದೀಗ ತನ್ನ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆ ಮಾಡಿದೆ. ನೂತನ ಬಸ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ನವದೆಹಲಿ(ಜೂ.29): ಸೆಡಾನ್, ಹ್ಯಾಚ್‌ಬ್ಯಾಕ್, SUV ಕಾರುಗಳ ಮೂಲಕ ವಿಶ್ವದ ಕಾರು ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿರುವ ಹ್ಯುಂಡೈ, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಎಲೆಕ್ಟ್ರಿಕ್ SUV ಕೋನಾ ಕಾರು ಬಿಡುಗಡೆ ಮಾಡಿದ ಹ್ಯುಂಡೈ ಇದೀಗ ಬಸ್ ಉತ್ಪಾದನೆಗೆ ಲಗ್ಗೆ ಇಟ್ಟಿದೆ. ಹ್ಯುಂಡೈ ಮೊತ್ತ ಮೊದಲ ಎಲೆಕ್ಟ್ರಿಕ್ ಬಸ್ ಬಿಡುಗಡೆ ಮಾಡಿದೆ.

ಒಂದೇ ವರ್ಷದಲ್ಲಿ ದಾಖಲೆ ಬರೆದ ಹ್ಯುಂಡೈ ವೆನ್ಯೂ ಕಾರು!..

Tap to resize

Latest Videos

ಕಂಟ್ರಿ ಮಿನಿಬಸ್ 7,710mm ಉದ್ದವಿದೆ. 128kwH ಲಿಥಿಯಂ ಐಯಾನ್ ಪಾಲಿಮರ್ ಬ್ಯಾಟರಿ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಮೈಲೇಜ್ ನೀಡಲಿದೆ. ವಿಶೇಷ ಅಂದರೆ ಫಾಸ್ಟ್ ಚಾರ್ಜಿಂಗ್ ಮೂಲಕ 72 ನಿಮಿಷದಲ್ಲಿ  ಫುಲ್ ಚಾರ್ಜ್ ಆಗಲಿದೆ. 

 

[] launches minibus for the Korean market ▶ https://t.co/43BSdke80G pic.twitter.com/Rd89oqMSwx

— Hyundai Motor Group (@HMGnewsroom)

ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು

15 ರಿಂದ 33 ಸೀಟಿನ ಸಾಮರ್ಥ್ಯ ಹೊಂದಿರುವ ಈ ಬಸ್ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂದು ಕಂಪನಿ ಹೇಳಿದೆ. ರೇರ್ ಪಾರ್ಕಿಂಗ್ ಅಸಿಸ್ಟ್, ಪಾದಾಚಾರಿಗಳ ಅಪಘಾತ ಅಲರ್ಟ್ ಸೇರಿದಂತೆ ಹಲವು ಸುರಕ್ಷತೆ ಸೌಲಭ್ಯಗಳು ಇದರಲ್ಲಿದೆ.

ಹ್ಯುಂಡೈ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆ ಮಾಡಿರುವುದು ಸೌತ್ ಕೊರಿಯಾದಲ್ಲಿ. ಶೀಘ್ರದಲ್ಲೇ ಹ್ಯುಂಡೈ ಭಾರತ ಸೇರಿದಂತೆ ಇತರ ದೇಶಗಳಲ್ಲೂ ಮಿನಿ ಎಲೆಕ್ಟ್ರಿಕ್ ಬಸ್ ಬಿಡುಗಡೆ ಮಾಡಲಿದೆ.
 

click me!