ಸಿಎಂ ಜಗನ್ ಮೋಹನ್ ರೆಡ್ಡಿಗೆ ಸಪೋರ್ಟ್- ಬೆಂಬಲಿಗರ ಕಾರು ಸೀಝ್!

By Web Desk  |  First Published Jun 6, 2019, 7:41 PM IST

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಬೆಂಬಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದರ ಬೆನ್ನಲ್ಲೇ ಜಗನ್ ಬೆಂಬಲಿಗರ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. 


ಕಡಪ(ಜೂ.06): ಲೋಕಸಭಾ ಚುನಾವಣೆ ಬಳಿಕ ಆಂಧ್ರಪ್ರದೇಶ ದೇಶದಲ್ಲೇ ಸುದ್ದಿಯಾಗುತ್ತಿದೆ. YSR ಕಾಂಗ್ರೆಸ್ ಪಾರ್ಟಿ ಮುಖಂಡ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜಗನ್ ಮುಖ್ಯಮಂತ್ರಿಯಾಗುತ್ತಿದ್ದಂತೆ, ಆಂಧ್ರಪ್ರದೇಶದಲ್ಲಿ ಸಂಭ್ರಮಾಚರಣೆ ಮುುಗಿಲು ಮುಟ್ಟಿದೆ. ಜಗನ್ ಬೆಂಬಲಿಸೋ ನಿಟ್ಟಿನಲ್ಲಿ ಕೆಲವರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇದರಿಂದ ಪೊಲೀಸರು ಕಾರುಗಳನ್ನೇ ಸೀಝ್ ಮಾಡಿದ್ದಾರೆ.

ಇದನ್ನೂ ಓದಿ: 50 ಸಾವಿರಕ್ಕೆ ಬುಕ್ ಮಾಡಿ MG ಹೆಕ್ಟರ್ ಕಾರು!

Tap to resize

Latest Videos

undefined

ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗುತ್ತಿದ್ದಂತೆ, ಬೆಂಬಲಿಗರು ತಮ್ಮ ಕಾರಿನ ನಂಬರ್ ಪ್ಲೇಟ್ ತೆಗೆದು ಹೊಸ ನಂಬರ್ ಪ್ಲೇಟ್ ಹಾಕಿದ್ದಾರೆ. ಈ ನಂಬರ್ ಪ್ಲೇಟ್ ಮೇಲೆ ರಿಜಿಸ್ಟ್ರೇಶನ್ ನಂಬರ್ ಬದಲು ಜೈ ಜಗನ್, ಎಪಿ ಸಿಎಂ ಜಗನ್ ಎಂದು ಬರೆದಿದ್ದಾರೆ. ಇದು ಕಾನೂನು ಬಾಹಿರವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!

ಫೋಕ್ಸ್‌ವ್ಯಾಗನ್ ಪೋಲೋ, ಹ್ಯುಂಡೈ ಐ20 ಹಾಗೂ ಹ್ಯುಂಡೈ ವರ್ನಾ ಕಾರುಗಳ ನಂಬರ್ ಪ್ಲೇಟ್ ಬದಲಾಯಿಸಲಾಗಿದೆ. ನಂಬರ್ ಪ್ಲೇಟ್ ಸ್ಪಷ್ಟವಾಗಿ ಗೋಚರಿಸಬೇಕು. ಪ್ಲೇಟ್ ಮೇಲೆ ಇತರ ಯಾವುದೇ ಬರಹಗಳಿಗೆ ಆಸ್ಪದವಿಲ್ಲ. ಹೀಗಾಗಿ ಪೊಲೀಸರು ಈ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

click me!