ಬೊಯಿಂಗ್ 777 ವಿಮಾನ ಎಳೆದೊಯ್ದ ಮಿನಿ ಕೂಪರ್ ಕಾರು!

By Web DeskFirst Published Jun 5, 2019, 9:03 PM IST
Highlights

150 ಟನ್ ತೂಕದ ಬೋಯಿಂಗ್ 777 ವಿಮಾನವನ್ನು ಮಿನಿ ಕೂಪರ್ ಕಾರು ಎಳೆಯೋ ಮೂಲಕ ದಾಖಲೆ ಬರೆದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಲಂಡನ್(ಜೂ.05): ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ BMW ಮಿನಿ ಕೂಪರ್ ಕಾರು ಅತ್ಯಂತ ಬಲಿಷ್ಠ ಎಂಜಿನ್ ಹೊಂದಿದ ಕಾರು. ಇಷ್ಟೇ ಅಲ್ಲ ದುಬಾರಿ ಕಾರು ಕೂಡ ಹೌದು. ಇದೀಗ ಇದೇ BMW ಮಿನಿ ಕೂಪರ್ ಕಾರು ಬೊಯಿಂಗ್ 777 ವಿಮಾನ ಎಳೆದೊಯ್ದಿದು ಅಚ್ಚರಿ ಮೂಡಿಸಿದೆ. ಈ ಮೂಲಕ ಮಿನಿ ಕೂಪರ್ ಕಾರು ಅತ್ಯಂತ ಬಲಿಷ್ಠ ಅನ್ನೋದನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ: ಫೋರ್ಡ್ ಇಕೋಸ್ಪೋರ್ಟ್ ಥಂಡರ್ ಎಡಿಶನ್ ಕಾರು ಬಿಡುಗಡೆ!

ಬೋಯಿಂಗ್ 777 ವಿಮಾನವನ್ನು ಎಳೆದೊಯ್ದ ಮಿನಿ ಕೂಪರ್ ಎಲೆಕ್ಟ್ರಿಕ್ ಕಾರು 184 PS ಪವರ್ ಹಾಗೂ 250 Nm  ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬೊಯಿಂಗ್ 777F ವಿಮಾನದ ತೂಕ ಬರೊಬ್ಬರಿ 150 ಟನ್. ಈ ವಿಮಾನವನ್ನು ಸಲೀಸಾಗಿ ಮಿನಿ ಕೂಪರ್ ಕಾರು ಎಳೆದೊಯ್ದಿದೆ.

ನೂತನ ಎಲೆಕ್ಟ್ರಿಕ್ ಮಿನಿ ಕೂಪರ್ ಕಾರು ಇದೀಗ ವಿಶ್ವದ ಗಮನಸೆಳೆದಿದೆ.  ಮಿನಿ ಕೂಪರ್ ಕಾರಿನ ಬೆಲೆ 29 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ ಬೆಲೆ 43.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  


 

click me!