ಬೆಂಗಳೂರಲ್ಲಿ ಸುಜುಕಿ ಜಿಕ್ಸರ್ SF ಸ್ಪೋರ್ಟ್ಸ್ ಬೈಕ್ ಬಿಡುಗಡೆ!

By Web DeskFirst Published Jun 5, 2019, 6:58 PM IST
Highlights

ಸುಜುಕಿ ಜಿಕ್ಸರ್ ಬೈಕ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದೀಗ ಅಪ್‌ಗ್ರೇಡ್ ಜಿಕ್ಸರ್ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಬಿಡುಗಡೆಯಾದ ಜಿಕ್ಸರ್ SF 250 ಹಾಗೂ ಜಿಕ್ಸರ್ SF 155 cc ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಇದರ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.
 

ಬೆಂಗಳೂರು(ಜೂ.05) : ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಜನಪ್ರಿಯ ಜಿಕ್ಸರ್ ಮಾದರಿಗಳನ್ನು ಪರಿಚಯಿಸಿರುವ ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇದೀಗ ಅತಿ ನೂತನ 2019ನೇ ಸಾಲಿನ ಜಿಕ್ಸರ್ ಎಸ್ ಎಫ್ 250 ಹಾಗೂ ಜಿಕ್ಸರ್ ಎಸ್‌ಎಫ್ 155ಸಿಸಿ ಮಾದರಿಗಳನ್ನು ಬೆಂಗಳೂರಿನಲ್ಲಿ ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಶಕ್ತಿಶಾಲಿ ಕಾರ್ಯಪ್ರದರ್ಶನ:
ಹೊಸದಾಗಿ ಬಿಡುಗಡೆಯಾಗಿರುವ ಜಿಕ್ಸರ್ ಎಸ್ ಎಫ್ 250 ಸಿಸಿ , 249ಸಿಸಿ ಸುಜುಕಿ ಆಯಿಲ್ ಕೂಲಿಂಗ್ ಸಿಸ್ಟಮ್ (ಎಸ್ ಓ ಸಿ ಎಸ್) ಚಾಲಿತ ಫೊರ್ ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಫ್ಯುಯೆಲ್ ಇಂಜೆಕ್ಷನ್ ಎಸ್ ಒ ಹೆಚ್ ಸಿ ಇಂಜಿನ್ನ ಶಕ್ತಿಯನ್ನು ಹೊಂದಿದ್ದು, ಉನ್ನತ ಕಾರ್ಯ ಪ್ರದರ್ಶನ ನೀಡುತ್ತದೆ. ಈ ಆಧುನಿಕ ಇಂಜಿನ್ 26.5ಪಿಎಸ್ @ 9000 ಆರ್ ಪಿ ಎಂ  ಮತ್ತು 22.6ಎನ್ ಎಂ @7500 ಆರ್ ಪಿ ಎಂ ಉತ್ಪಾದಿಸುತ್ತದೆ. 

ಆರು-ವೇಗದ ಗೇರ್ ಬಾಕ್ಸ್‌ನಿಂದ ಸಲೀಸಾದ ಸವಾರಿಯನ್ನು ಒದಗಿಸುತ್ತದೆ. ಹೊಸ ಎಸ್ ಒ ಸಿ ಎಸ್ ತಂತ್ರಜ್ಞಾನವು, ಅತ್ಯಧಿಕ ವೇಗದಲ್ಲೂ ಸುಲಭವಾದ ಸವಾರಿ ಒದಗಿಸುವುದಕ್ಕಾಗಿ ಇಂಜಿನ್ ಅನ್ನು ಹಗುರಗೊಳಿಸಿ ವೇಗಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಅಗಲವಾದ ಮುಂಬದಿ ಹಾಗು ಹಿಂಬದಿ ಟಯಟರ್ ಗಳು ನಗರದ ರಸ್ತೆಗಳಲ್ಲಿ ತಿರುಗುವಾಗ ಸ್ಥಿರತೆ ಒದಗಿಸುತ್ತದೆ. ಹೊಸ ಡ್ಯಯಲ್ ಚಾನಲ್ ಆಂಟಿ-ಲಾಕ್ ಬ್ರೇಕ್ ಸಿಸ್ಟಮ್(ABS) ತಂತ್ರಜ್ಞಾನ ಹೊಂದಿದೆ. 

ನವೀಕೃತಗೊಂಡ, ಸಂಪೂರ್ಣ ಫೇರ್ ಆಗಿರುವ ಹೊಸ ಜಿಕ್ಸರ್ ಎಸ್ ಎಫ್ , ಕಾರ್ಯಪ್ರದರ್ಶನ-ಕೇಂದ್ರಿತ ಮೋಟಾರುಸೈಕಲ್ ಆಗಿದ್ದು155ಸಿಸಿ ಸುಜುಕಿ ಆಯಿಲ್ ಕೂಲಿಂಗ್ ಸಿಸ್ಟಮ್ (ಎಸ್ ಒ ಸಿ ಎಸ್) ಚಾಲಿತ ಫೊರ್ ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಫ್ಯುಯೆಲ್ ಇಂಜೆಕ್ಷನ್ ಎಸ್ ಒ ಹೆಚ್ ಸಿ ಇಂಜಿನ್ ಹೊಂದಿದ್ದು ಇದರ ಎಸ್ ಇಪಿ ತಂತ್ರಜ್ಞಾನವು 14.1PS @8000  ಮತ್ತು 14.0 NM @6000ಆರ್ ಪಿ ಎಂ ಒದಗಿಸುತ್ತದೆ.  ಸಲೀಸಾದ ಬ್ರೇಕಿಂಗ್ ಖಾತರಿಪಡಿಸುವುದಕ್ಕಾಗಿ ಜಿಕ್ಸರ್ ಎಸ್ ಎಫ್ ನಲ್ಲಿ ಆಂಟಿ-ಲಾಕ್ ಬ್ರೇಕ್ ಸಿಸ್ಟಮ್(ABS) ಅಳವಡಿಸಲಾಗಿದೆ.

ಸುಲಭವಾಗಿ ನಿಭಾಯಿಸುವುದಕ್ಕಾಗಿ ಹೊಸ ಜಿಕ್ಸರ್ ಎಸ್ ಎಫ್ ಸರಣಿಯನ್ನು ಉತ್ಕೃಷ್ಟ ಗಟ್ಟಿತನ ನೀಡುವುದಕ್ಕಾಗಿ ಹಗುರವಾದ ಫ್ರೇಮ್ ನಿಂದ ನಿರ್ಮಿಸಲಾಗಿದ್ದು, ಸವಾರಿಯುದ್ದಕ್ಕೂ ಉತ್ತಮ ಸಮತೋಲನ ಕಾಯ್ದುಕೊಳ್ಳುತ್ತದೆ. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ, ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿರುವ ಮುಂಬದಿ ಸಸ್ಪೆನ್ಶನ್, ಬಂಪ್ ಗಳಿರುವ ರಸ್ತೆಗಳು ಮತ್ತು ಮೊನಚಾದ ತಿರುವುಗಳಲ್ಲಿ ಬ್ರೇಕ್ ಹಾಕುವಾಗಿ ಮತ್ತು ತಿರುಗಿಸುವಾಗ, ಸ್ಥಿರತೆ ಒದಗಿಸುತ್ತದೆ. 

ಸ್ಟೈಲಿಂಗ್ ಮತ್ತು ಅಂಶಗಳು: 
ಅಮೋಘವಾದ ಜಿಕ್ಸರ್ ಎಸ್ ಎಫ್ ಸರಣಿಯು ಪ್ರಖರವಾದ ಸ್ಟೈಲಿಂಗ್ ಹೊಂದಿದ್ದು, ಒಂದೇ ಬಾರಿಗೆ ಕಾರ್ಯಕ್ಷಮತೆ ಮತ್ತು ಸ್ಟೈಲನ್ನು ನಿರೀಕ್ಷಿಸುವ ಯುವ ಸವಾರರನ್ನು ಆಕರ್ಷಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಐರೋಪ್ಯ ಟ್ರೆಂಡ್ ಗಳನ್ನು ಅಳವಡಿಸಿಕೊಂಡಿದೆ. ಸಮಕಾಲೀನ ವಿನ್ಯಾಸ ಮತ್ತು ಪ್ರಬುದ್ಧ ಇಂಜಿನಿಯರಿಂಗ್ನ ನಿಖರ ಸಂಯೋಜನೆಯೊಂದಿಗೆ ಜಿಕ್ಸರ್ ಎಸ್ ಎಫ್ ಸರಣಿಯು, ಪ್ರಬಲ ಫೇಸೆಟ್ಸ್, ಮತ್ತು ನೀಳ ಕ್ಯಾರಕ್ಟರ್ ಗೆರೆಗಳೊಂದಿಗೆ ತಗ್ಗಾಗಿ ಮುಂಬಾಗಿದ ಸಿಲ್ಹೂಟ್ನೊಂದಿಗೆ ಬರುತ್ತವೆ. 

ರಾತ್ರಿ ವೇಳೆಗಳಲ್ಲಿ ಉತ್ತಮ ಸವಾರಿಯ ಅನುಭವಕ್ಕಾಗಿ ಎರಡೂ ಮೋಟಾರುಸೈಕಲ್ ಗಳು ಹಿಂಬದಿ ಸಂಯೋಜಿತ ಬೆಳಕಿನ ಜೊತೆಗೆ, ಸಂಕೀರ್ಣವಾದ ಮತ್ತು ತೆಳುವಾದ ಎಲ್ಇಡಿ ಹೆಡ್ಲೈಟನ್ನು ಹೊಂದಿವೆ. ಹೆಚ್ಚುವರಿಯಾಗಿ ಜಿಕ್ಸರ್ ಎಸ್ ಎಫ್ 250 ಸಿಸಿ , ಒತ್ತಡ ಮುಕ್ತ ಇಗ್ನಿಶನ್ ಇರುವುದನ್ನು ಖಾತರಿಪಡಿಸಲು ಈಸಿ ಸ್ಟಾರ್ಟ್ ಸಿಸ್ಟಮ್ ಒದಗಿಸುತ್ತದೆ. ಇದು, ಹೊಸದಾಗಿ ಅಭಿವೃದ್ಧಿಪಡಿಸಲಾದ ಸಾಧನ ಸಮೂಹದಿಂದ ಸಜ್ಜಾಗಿದ್ದು, ಇದಕ್ಕೆ ಹೆಚ್ಚು ಮೋಜಿನ ಮತ್ತು ಪ್ರೀಮಿಯಮ್ ನೋಟ ಒದಗಿಸುತ್ತದೆ. 

ಹೊಸ ಕಂಚಿನ ಕವರ್, ಕೆಳಗಿರುವ ಕೌಲ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಚಕ್ರಗಳು ಮಶಿನ್ ಫಿನಿಶ್ ನ ಜೊತೆ ಸೇರಿ ಮೋಟಾರುಸೈಕಲ್ ನ ಸ್ಟೈಲ್ ಮತ್ತು ನೋಟವನ್ನು ವರ್ಧಿಸುತ್ತದೆ.ಹೊಚ್ಚ ಹೊಸ ಜಿಕ್ಸರ್ ಎಸ್ ಎಫ್ 250 ಎರಡು ವರ್ಣ ವರ್ಗಗಳಲ್ಲಿ ಬರುತ್ತದೆ- ಮೆಟಾಲಿಕ್ ಮ್ಯಾಟ್ಟ್ ಪ್ಲಾಟಿನಮ್ ಸಿಲ್ವರ್ ಮತ್ತು ಮೆಟಾಲಿಕ್ ಮ್ಯಾಟ್ಟ ಬ್ಲ್ಯಾಕ್. ಇವುಗಳ ಬೆಲೆ ರೂ. 1,70,655 (ಬೆಂಗಳೂರು ಶೋರೂಮ್ ) ಮತ್ತು ಜಿಕ್ಸರ್ ಎಸ್ ಎಫ್ , ಕೂಡ ಎರಡು ವರ್ಣ ಆಯ್ಕೆಗಳಲ್ಲಿ ಲಭ್ಯವಿದೆ- ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸೋನಿಕ್ ಸಿಲ್ವರ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್. ಇವುಗಳ ಬೆಲೆ ರೂ. 1,09,870 (ಬೆಂಗಳೂರು ಶೋರೂಮ್ )

ಹೊಸ ಉತ್ಪನ್ನಗಳ ಬಿಡುಗಡೆಯ ಬಗ್ಗೆ ಮಾತನಾಡಿದ, ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈ ಲಿ.,ದ ಕಂಪನಿ ಮುಖ್ಯಸ್ಥರಾದ ಶ್ರೀ ಕೋಯ್ಚಿರೋ ಹಿರಾವೊ, ಭಾರತೀಯ ಮಾರುಕಟ್ಟೆಗೆ ನಮ್ಮ ನಿರಂತರ ಬದ್ಧತೆಯ ಭಾಗವಾಗಿ ಪ್ರೀಮಿಯಮ್ ಮೋಟಾರುಸೈಕಲ್ ವರ್ಗದಲ್ಲಿ ಹೊಚ್ಚ ಹೊಸ ಸುಜುಕಿ ಜಿಕ್ಸರ್ ಈ ಸರಣಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ನಮಗೆ ಅತ್ಯಂತ ಸಂತೋಷವೂ ಉತ್ಸಾಹವೂ ಆಗುತ್ತಿದೆ. ಜಿಕ್ಸರ್, ಭಾರತದಲ್ಲಿ ಸುಜುಕಿಯ ಅತಿ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದ್ದು,  ಅತ್ಯಾಧುನಿಕ ಸ್ಟೈಲ್ ಮತ್ತು ಸರಿಸಾಟಿಯಿಲ್ಲದ ಶಕ್ತಿಯಿಂದಾಗಿಯೇ ಪ್ರತ್ಯೇಕವಾಗಿರುವಂತೆ ವಿನ್ಯಾಸಗೊಳಿಸಲಾಗಿರುವ ಜಿಕ್ಸರ್ , ಕ್ರೀಡಾ ಮನೋಭಾವ ಉತ್ಸಾಹೀ ಸವಾರರ ಹೃದಯವನ್ನು ಗಲ್ಲಲು ಬಂದಿದೆ. ಎಂದರು.

ಬಿಡುಗಡೆ ಮಾಡಿ ಮಾತನಾಡಿದ  ಎಸ್ ಎಂ ಐ ಪಿ ಎಲ್ ನ  ಉಪಾಧ್ಯಕ್ಷರಾದ  ಶ್ರೀ  ದೇವಶೀಶ್ ಹಾಂಡಾ ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದ್ದು ಈಗ ಈ ಮಾರುಕಟ್ಟೆಯು ಪ್ರೀಮಿಯಮ್ ಉತ್ಪನ್ನಗಳನ್ನು, ಅದರಲ್ಲೂ ವಿಶೇಷವಾಗಿ 200ಸಿಸಿ ಮೇಲ್ಪಟ್ಟ ಇಂಜಿನ್ ಡಿಸ್ಪ್ಲೇಸ್ ಮೆಂಟ್ ಇರುವ ಉತ್ಪನ್ನಗಳನ್ನು ಕೇಳಲಾರಂಭಿಸಿದೆ. ಜಿಕ್ಸರ್ ಸರಣಿಯು ಕ್ರೀಡಾ ಪ್ರವಾಸಕ್ಕಾಗಿ ಎದುರುನೋಡುತ್ತಿರುವ ಗ್ರಾಹಕರಿಗೆ ನಿಖರವಾದ ಪರಿಹಾರವಾಗಿದೆ ಎಂದರು.

click me!