Latest Videos

6 ಟನ್ ತೂಕದ 'ಬುಜ್ಜಿ' ರೈಡ್‌ ಮಾಡಿದ ಆನಂದ್ ಮಹೀಂದ್ರ: ವೀಡಿಯೋ ಸಖತ್ ವೈರಲ್

By Anusha KbFirst Published Jun 13, 2024, 4:53 PM IST
Highlights

ಮಹೀಂದ್ರ ಗ್ರೂಪ್‌ನ ಮಾಲೀಕ ಉದ್ಯಮಿ ಆನಂದ್ ಮಹೀಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್. ಅವರು ಕಳುಹಿಸುವ ಪೋಸ್ಟ್‌ಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಈ ಬಾರಿ ಮಾತ್ರ ಅವರೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.

ಮುಂಬೈ: ಮಹೀಂದ್ರ & ಮಹೀಂದ್ರ ಗ್ರೂಪ್‌ನ ಮಾಲೀಕ ಉದ್ಯಮಿ ಆನಂದ್ ಮಹೀಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್. ಅವರು ಕಳುಹಿಸುವ ಪೋಸ್ಟ್‌ಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಈ ಬಾರಿ ಮಾತ್ರ ಅವರೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.   

ಭವಿಷ್ಯವನ್ನು ಸೊಬಗುಗೊಳಿಸುವ ಹಲವು ವಾಹನಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಮಹೀಂದ್ರ ಅವರು ಕೆಲ ದಿನಗಳಲ್ಲಿ ತೆರೆ ಕಾಣಲಿರುವ ತೆಲುಗು ಸಿನಿಮಾ,  'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬುಜ್ಜಿ ಹೆಸರಿನ ಐಷಾರಾಮಿ ಗಾಡಿಯಲ್ಲಿ ಕುಳಿತು ರೈಡ್ ಮಾಡಿದ್ದಾರೆ. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕಲ್ಕಿ 2898 ಎಡಿ ಸಿನಿಮಾವನ್ನು ನಾಗ್ ಅಶ್ವಿನ್ ಅವರು ನಿರ್ದೇಶಿಸುತ್ತಿದ್ದಾರೆ. 

ಕಲ್ಕಿ ಸಿನಿಮಾ ಟೀಂನಿಂದ ಯಶ್-ರಾಧಿಕಾ ಮಕ್ಕಳಿಗೆ ಬಂತು ಕ್ಯೂಟ್ ಗಿಫ್ಟ್

ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಬುಜ್ಜಿ ಹೆಸರಿನ 6 ಟನ್ ತೂಕದ ಐಷಾರಾಮಿ ಗಾಡಿಯನ್ನು ಆನಂದ್ ಮಹೀಂದ್ರಾ  ರೈಡ್ ಮಾಡಿದ್ದು, ಅದರ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಿನಿಮಾದಲ್ಲಿ ಐಷಾರಾಮಿ ಕಾರು ಬುಜ್ಜಿ ಎಂಬ ಪಾತ್ರದಲ್ಲಿ ಮಿಂಚಲಿದೆ. ಈ ಬುಜ್ಜಿ ಹೆಸರಿನ ಇಲೆಕ್ಟ್ರಿಕ್ ಕಾರು ಕ್ರೇನ್‌ಗೆ ಬಳಸುವಂತಹ ಚಕ್ರಗಳನ್ನು ಹೊಂದಿದೆ. 6075 ಮಿಲಿ ಮೀಟರ್ ಉದ್ದ,  3,380 ಮಿಲಿ ಮೀಟರ್ ಅಗಲ 2186 ಮಿಲಿ ಮೀಟರ್ ಎತ್ತರವನ್ನು ಹೊಂದಿದೆ. 

ಜೊತೆಗೆ 6 ಟನ್ ಅಂದರೆ ಆರು ಸಾವಿರ ಟನ್ ಎತ್ತರವನ್ನು ಹೊಂದಿರುವ ಇದು ಸಂಪೂರ್ಣ ಎಲೆಕ್ಟ್ರಿಕ್ ಗಾಡಿ ಆಗಿದೆ. 94 KW ಸಾಮರ್ಥ್ಯದ ಎರಡು ಮೋಟಾರ್‌ಗಳನ್ನು ಇದು ಹೊಂದಿದ್ದು, 9,800 ಎನ್ಎಂ ನ ಅಚ್ಚರಿಗೊಳಿಸುವ ಟಾರ್ಕ್‌ನ್ನು ಹೊಂದಿದೆ. ಮಹೀಂದ್ರ ಟೀಮ್ ಹಾಗೂ ಜಯೇಂ ಆಟೋಮೋಟಿವ್ ಕೊಯಂಬತ್ತೂರ್‌ ಜೊತೆಯಾಗಿ ಈ ಬೃಹತ್ ಗಾಡಿಯನ್ನು ನಿರ್ಮಿಸಿದ್ದಾರೆ. ಕಲ್ಕಿ 2898 ಎಡಿ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ಅವರು ಈ ಸಿನಿಮಾಕ್ಕಾಗಿ ಈ ರೀತಿಯ ದೈತ್ಯ ಗಾಡಿಯನ್ನು ತಯಾರಿಸಿ ಕೊಡುವಂತೆ ಆನಂದ್ ಮಹೀಂದ್ರ ಅವರನ್ನು ಸಂಪರ್ಕಿಸಿದ ನಂತರ ಈ ಬೃಹತ್ ಗಾಡಿ ಸಿದ್ಧವಾಗಿದೆ. 

ಮುಂಗಡ ಬುಕಿಂಗ್‌ನಲ್ಲಿ ಆರ್‌ಆರ್‌ಆರ್ ದಾಖಲೆ ಮುರಿದ ಕಲ್ಕಿ 2898 AD

ಈ ಗಾಡಿಯನ್ನು ಈಗ ಆನಂದ್ ಮಹೀಂದ್ರ ಅವರು ಚಾಲನೆ ಮಾಡಿದ್ದು, ವೀಡಿಯೋ ವೈರಲ್ ಆಗಿದೆ. ಕಲ್ಕಿ 2898 ಎಡಿ ಸಿನಿಮಾದಲ್ಲಿ ನಟ ಪ್ರಭಾಸ್ ಬೈರವನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾವೂ ಇದರ ಹೈ ಬಜೆಟ್‌ನ ಕಾರಣಕ್ಕೆ ಸುದ್ದಿಯಾಗಿತ್ತು. ವೈಜಯಂತಿ ಸಿನಿಮಾದಡಿ ಈ ಚಿತ್ರ ತೆರೆ ನಿರ್ಮಾಣವಾಗುತ್ತಿದ್ದು ಜೂನ್ 27 ರಂದು ಭಾರತದ ವಿವಿಧ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ, ಕೂಡ ತಾರಾಗಣದಲ್ಲಿದ್ದಾರೆ. 

 

 

click me!