ಕಾರಿನ ಮೌಲ್ಯ 2 ಕೋಟಿ. ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಈ ಕಾರಿಗೆ 2.8 ಲಕ್ಷ ರೂಪಾಯಿ ದಂಡ. ಕಂಗಾಲಾದ ಮಾಲೀಕ ಇದೀಗ ದಂಡದ ಮೊತ್ತ ಹೊಂದಿಸಲು ಪರದಾಡುವ ಸ್ಥಿತಿ ಎದುರಾಗಿದೆ.
ಅಹಮ್ಮದಾಬಾದ್(ಡಿ.02): ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ದುಬಾರಿ ದಂಡ ಹಾಕಲಾಗುತ್ತಿದೆ. ಈಗಾಗಲೇ ಲಕ್ಷ ಲಕ್ಷ ರೂಪಾಯಿ ದಂಡ ಪಾವತಿಸಿದ ಘಟನೆಗಳೂ ನಡೆದಿದೆ. ಇದೀಗ 2 ಕೋಟಿ ರೂಪಾಯಿ ಮೌಲ್ಯದ ಪೊರ್ಶೆ 911 ಕಾರಿಗೆ ಪೊಲೀಸರು ಬರೋಬ್ಬರಿ 2.8 ಲಕ್ಷ ರೂಪಾಯಿ ದಂಡ ಹಾಕಿದ ಘಟನೆ ನಡೆದಿದೆ.
undefined
ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದವರಿಗೆ 15 ಸಾವಿರ ದಂಡ !
ಗುಜರಾತ್‌ನ ಅಹಮ್ಮದಾಬಾದ್ ನಗರದಲ್ಲಿ ಪೊರ್ಶೆ 911 ಕಾರು ತಿರುಗಾಡುತ್ತಿತ್ತು. ತಪಾಸಣೆ ವೇಳೆ ಪೊಲೀಸರು ಪೊರ್ಶೆ ಕಾರನ್ನು ನಿಲ್ಲಿಸಿದ್ದಾರೆ. ಕಾರಣ ಪೊರ್ಶೆ ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಹೀಗಾಗಿ ದಾಖಲೆ ನೀಡುವಂತೆ ಮಾಲೀಕನಿಗೆ ಪೊಲೀಸರು ಸೂಚಿಸಿದ್ದಾರೆ. ಮಾಲೀಕನ ಬಳಿ ಕಾರಿನ ಸೂಕ್ತ ದಾಖಲೆಗಳು ಕೂಡ ಇಲ್ಲ.
ಇದನ್ನೂ ಓದಿ: ಟ್ರಾಫಿಕ್ ದಂಡ ಕಟ್ಟದವರಿಗೆ ಅರೆಸ್ಟ್ ಶಾಕ್; ಪೊಲೀಸರ ಪ್ಲಾನ್‌ಗೆ ಬೆಚ್ಚಿ ಬಿದ್ದ ಸವಾರರು!
ಹೀಗಾಗಿ ನಿಯಮ ಉಲ್ಲಂಘನೆ, ಸಿಗ್ನಲ್ ಜಂಪ್ ಸೇರಿದಂತೆ ಹಳೇ ಎಲ್ಲಾ ಪ್ರಕರಣಗಳನ್ನು ಲೆಕ್ಕ ಹಾಕಿದ ಪೊಲೀಸರು ಒಟ್ಟು 9,80,000 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ಇಷ್ಟೇ ಅಲ್ಲ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಮಾಲೀಕ ದಂಡ ಕಟ್ಟಿ ರಶೀದಿ ನೀಡಿದರೆ ಮಾತ್ರ ಕಾರು ಬಿಡುಗಡೆ ಮಾಡುವುದಾಗ ಅಹಮ್ಮಬಾದ್ ಪೊಲೀಸರು ಹೇಳಿದ್ದಾರೆ.