ಬಜಾಜಾ ಅವೆಂಜರ್ ಬೈಕ್ ಶೀಘ್ರದಲ್ಲೇ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ನೂತನ ಅವೆಂಜರ್ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.
ನವದೆಹಲಿ(ಡಿ.25): ಕ್ರೂಸರ್ ಬೈಕ್‌ನಲ್ಲಿ ಜನರನ್ನ ಮೋಡಿ ಮಾಡಿದ ಬಜಾಜ್ ಅವೆಂಜರ್ ಇದೀಗ ಹೊಸ ಅವತಾರದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ. ಅವೆಂಜರ್ 220 ಕ್ರ್ಯೂಸ್ ಹಾಗೂ ಸ್ಟ್ರೀಟ್ ಬೈಕ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ABS) ತಂತ್ರಜ್ಞಾನದೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.
undefined
ಇದನ್ನೂ ಓದಿ: ನವೆಂಬರ್‌ನಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಕಾರು- ಸ್ವಿಫ್ಟ್‌ಗೆ ಅಗ್ರಸ್ಥಾನ!
2019ರ ಎಪ್ರಿಲ್‍ನಿಂದ 125 ಸಿಸಿಗಿಂತ ಹೆಚ್ಚಿನ ಎಲ್ಲಾ ಬೈಕ್‌ಗಳು ABS ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಇದೀಗ ಬಜಾಜ್ 125 ಸಿಸಿಗಿಂತ ಹೆಚ್ಚಿರುವ ಎಲ್ಲಾ ಬೈಕ್‌ಗಳಲ್ಲಿ ABS ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಈಗಾಗಲೇ ಪಲ್ಸಾರ್ ಸೇರಿದಂತೆ ಇತರ ಬೈಕ್‌ಗಳಲ್ಲಿ ಬಜಾಜ್ ABS ಅಳವಡಿಸಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: 2018ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಬೈಕ್!
ಇದೀಗ ಬಜಾಜ್ ಅವೆಂಜರ್ ಬೈಕ್ ಕೂಡ ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ABSನಿಂದಾಗಿ ಬಜಾಜ್ ಅವೆಂಜರ್ ಬೈಕ್ ಬೆಲೆ 6,000 ದಿಂದ 8,000 ರೂಪಾಯಿ ವರೆಗೆ ಹೆಚ್ಚಾಗಲಿದೆ ಎಂದು ಕಂಪೆನಿ ಹೇಳಿದೆ. ಸದ್ಯ ಬಜಾಜ್ ಅವೆಂಜರ್ ಬೆಲೆ 96,922 ರೂಪಾಯಿ(ಎಕ್ಸ್ ಶೋ ರೂಂ).
ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಕಾರುಗಳಿಗೆ ಪೈಪೋಟಿ- ಬಿಡುಗಡೆಯಾಗಲಿದೆ 4 ಎಲೆಕ್ಟ್ರಿಕ್ ಕಾರು!