ಮಹೀಂದ್ರ XUV300 ಕಾರಿನ ಬುಕಿಂಗ್ ಆರಂಭ-ಮಾರುತಿ ಬ್ರಿಜಾಗೆ ಪೈಪೋಟಿ!

Published : Dec 24, 2018, 07:07 PM IST
ಮಹೀಂದ್ರ XUV300 ಕಾರಿನ ಬುಕಿಂಗ್ ಆರಂಭ-ಮಾರುತಿ ಬ್ರಿಜಾಗೆ ಪೈಪೋಟಿ!

ಸಾರಾಂಶ

ಮಹೀಂದ್ರ ಕಂಪೆನಿಯ ನೂತನ XUV300 ಕಾರಿನ ಬುಕಿಂಗ್ ಆರಂಭಗೊಂಡಿದೆ. ಕೆಲ ಡೀಲರ್‌ಗಳು ಈಗಲೇ ಬುಕಿಂಗ್ ಶುರುಮಾಡಿದ್ದಾರೆ. ಈ ಮೂಲಕ ಗ್ರಾಹಕರಿಗೆ ಶೀಘ್ರದಲ್ಲೇ ವಾಹನ ತಲುಪಿಸಲು ಡೀಲರ್‌ಗಳು ಮುಂದಾಗಿದ್ದಾರೆ.

ನವದೆಹಲಿ(ಡಿ.24): ಮಾರುತಿ ಬ್ರಿಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿರುವ ಮಹೀಂದ್ರ XUV300 ಕಾರಿನ ಬುಕಿಂಗ್ ಆರಂಭಗೊಂಡಿದೆ. ಆಧೀಕೃತ ಬುಕಿಂಗ್ ಇನ್ನೂ ಆರಂಭಗೊಂಡಿಲ್ಲ. ಆದರೆ ಕೆಲ ಡೀಲರ್‌ಗಳು ಈಗಲೇ ಬುಕಿಂಗ್ ಶುರುಮಾಡಿದ್ದಾರೆ. 2019ರ ಜನವರಿಯಲ್ಲಿ ನೂತನ XUV300 ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಸೆಪ್ಟೆಂಬರ್ 2019ರ ವರೆಗಿನ ಜಾವಾ ಬೈಕ್ ಸೋಲ್ಡ್ ಔಟ್!

ದೆಹಲಿ ಹಾಗೂ ಮುಂಬೈನಲ್ಲಿನ ಡೀಲರ್‌ಗಳು ಮಹೀಂದ್ರ XUV300 ಕಾರಿನ ಬುಕಿಂಗ್ ಆರಂಭಿಸಿದ್ದಾರೆ. ಬೆಲೆ 8 ರಿಂದ 9 ಲಕ್ಷ (ಎಕ್ಸ್ ಶೋ ರೂಂ)ಎಂದು ಅಂದಾಜಿಸಲಾಗಿದೆ. ಅಧೀಕೃತ ಬುಕಿಂಗ್ 2019ರ ಫೆಬ್ರವರಿಯಲ್ಲಿ ಆರಂಭವಾಗೋ ಸಾಧ್ಯತೆ ಇದೆ.  

ಇದನ್ನೂ ಓದಿ: ನಿದ್ದೆ ಕಣ್ಣಿನಲ್ಲಿ BMW ಕಾರನ್ನ ವಿಮಾನ ತರ ಹಾರಿಸಿದ ಭೂಪ-ವೀಡಿಯೋ ವೈರಲ್!

ಮಹೀಂದ್ರ XUV300 ಕಾರು ಹಲವು ವಿಶೇಷತೆಗಳನ್ನೊಳಗೊಂಡಿದೆ.  ಆಕರ್ಷಕ ವಿನ್ಯಾಸ, ಹೆಡ್‌ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್‌ಗಳಲ್ಲಿ ಹೊಸತನ ತರಲಾಗಿದೆ. 17 ಇಂಚಿನ ಅಲೋಯ್ ವೀಲ್ಹ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್, ಬೀಫಿ ರೇರ್ ಬಂಪರ್, ಜೊತೆಗೆ ಸನ್‌ರೂಫ್ ಕೂಡ ನೂತನ ಮಹೀಂದ್ರ XUV 300 ಕಾರಿನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಫಾರ್ಚುನರ್ ಪ್ರತಿಸ್ಪರ್ಧಿ ಮಹೀಂದ್ರ ಅಲ್ಟುರಾಸ್ G4 ಬಿಡುಗಡೆ!

ಒಳಭಾಗದ ಕ್ಯಾಬಿನ್, ಡ್ಯಾಶ್‌ಬೋರ್ಡ್ ಹೆಚ್ಚು ಕಡಿಮೆ  ಮಹೀಂದ್ರ XUV 500 ಕಾರಿನ್ನೇ ಹೋಲುತ್ತಿದೆ. ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪಾರ್ಕಿಂಗ್ ಕ್ಯಾಮರ  ಹಾಗೂ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳು ನೂತನ ಕಾರಿನಲ್ಲಿದೆ. .5 ಲೀಟರ್ ಡೀಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್‌ಗಳಲ್ಲಿ ನೂತನ ಕಾರು ಲಭ್ಯವಿದೆ. ಮಾರತಿ ಬ್ರಿಜಾ ಕಾರಿಗೆ ತೀವ್ರ ಪೈಪೋಟಿ ನೀಡಬಲ್ಲ ಎಲ್ಲಾ ಲಕ್ಷಣಗಳು ಈ ಕಾರಿನಲ್ಲಿದೆ. 
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ