ನವೆಂಬರ್‌ನಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಕಾರು- ಸ್ವಿಫ್ಟ್‌ಗೆ ಅಗ್ರಸ್ಥಾನ!

By Web Desk  |  First Published Dec 25, 2018, 6:16 PM IST

ನವೆಂಬರ್ 2018ರಲ್ಲಿ ಕಾರು ಕಂಪೆನಿಗಳು ರಿಯಾಯಿತಿ ಸೇರಿದಂತೆ ಹಲವು ಆಫರ್ ನೀಡಿ ಗ್ರಾಹಕರನ್ನ ಸೆಳೆಯೋ ಪ್ರಯತ್ನ ಮಾಡಿದೆ. ಇದೀಗ ನವೆಂಬರ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರಿನ ಪಟ್ಟಿ ಬಹಿರಂಗವಾಗಿದೆ. ಇಲ್ಲಿಗೆ ಲಿಸ್ಟ್ ವಿವರ. 
 


ನವದೆಹಲಿ(ಡಿ.25): ಭಾರತದ ಕಾರು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ.  ಹೊಸ ಹೊಸ ಕಾರುಗಳು, ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಇದೀಗ ತೀವ್ರ ಪೈಪೋಟಿ ಎದುರಿಸಿದರೂ ಮಾರುತಿ ಸುಜುಕಿ ಮಾರಾಟದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ.

ಇದನ್ನೂ ಓದಿ: ಮಹೀಂದ್ರ XUV300 ಕಾರಿನ ಬುಕಿಂಗ್ ಆರಂಭ-ಮಾರುತಿ ಬ್ರಿಜಾಗೆ ಪೈಪೋಟಿ!

Tap to resize

Latest Videos

undefined

ಕಳೆದ ನವೆಂಬರ್‌ನಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯ 6 ಕಾರುಗಳು ಆಗ್ರಸ್ಥಾನದಲ್ಲಿದೆ. 2018ರಲ್ಲಿ ಬಿಡುಗಡೆಯಾದ ನೂತನ ಮಾರುತಿ ಸ್ವಿಫ್ಟ್ ಕಳೆದ ನವೆಂಬರ್‌ ತಿಂಗಳಲ್ಲೂ ಮಾರಾಟದಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ: 2018ರಲ್ಲಿ ಸಂಚಲನ ಮೂಡಿಸಿದ ಬೈಕ್-ಜಾವಾಗೆ ಮೊದಲ ಸ್ಥಾನ!

2018- ನವೆಂಬರ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರು!

ಮಾಡೆಲ್ ನವೆಂಬರ್- 2018
ಮಾರುತಿ ಸ್ಪಿಫ್ಟ್ 22,191
ಮಾರುತಿ ಡಿಸೈರ್ 21,037
ಮಾರುತಿ ಬಲೆನೊ 18,649
ಮಾರುತಿ ಅಲ್ಟೋ 18,643
ವಿಟಾರ ಬ್ರಿಜಾ 14,378
ವ್ಯಾಗನ್ ಆರ್ 11,311
ಎಲೈಟ್ ಐ20 10,555
ಹ್ಯುಂಡೈ ಕ್ರೆಟಾ 9,677
ಗ್ರ್ಯಾಂಡ್ ಐ10 9,252
ಸ್ಯಾಂಟ್ರೋ 9,009


 

click me!