ಒಂದೇ ದಿನ ಒಂದು ಸಾವಿರ ಬೈಕ್ ಡೆಲಿವರಿ; ದಾಖಲೆ ಬರೆದ ರಾಯಲ್ ಎನ್‌ಫೀಲ್ಡ್!

By Suvarna NewsFirst Published Aug 31, 2020, 3:55 PM IST
Highlights

ಕಳೆದ ವರ್ಷ ಆಟೋ ಮಾರುಕಟ್ಟೆ ಕುಸಿತಗೊಂಡು ಚಿಂತೆಗೀಡಾಗಿದ್ದ ಕಂಪನಿಗಳಿಗೆ ಈ ವರ್ಷ ಕೊರೋನಾ ಕಾಟ ತೀವ್ರ ಹೊಡೆತ ನೀಡಿದ್ದು. ಲಾಕ್‌ಡೌನ್ ಸಡಿಲಿಕೆಯಾದರೂ ಕೊರೋನಾ ಹಾವಳಿ ಕಡಿಮೆಯಾಗದ ಕಾರಣ ವಾಹನ ಮಾರಾಟ ಕ್ಷೀಣಿಸಿತ್ತು. ಆದರೆ ಒಂದೇ ದಿನ 1,000 ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ.

ಕೇರಳ(ಆ.31);  ಒಂದೇ ದಿನ ಒಂದು ಸಾವಿರ ರಾಯಲ್ ಎನ್‌ಫೀಲ್ಡ್ ಬೈಕ್ ಗ್ರಾಹಕರಿಗೆ ಡೆಲಿವರಿ ಮೂಲಕ ದಾಖಲೆ. ಇದು ಕೇರಳದ ಅಂಕಿ ಅಂಶ. ಕೊರೋನಾ ಬಳಿಕ ಕೇರಳದಲ್ಲಿ ಆಟೋಮೊಬೈಲ್ ಚೇತರಿಕೆ ನಿರೀಕ್ಷೆಯಲ್ಲಿದ್ದ ರಾಯಲ್ ಎನ್‌ಫೀಲ್ಡ್‌ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಒಣಂ ಹಬ್ಬದ ಕಾರಣ ಕೇರಳದಲ್ಲಿ ವಾಹನ ಮಾರಾಟ ಚೇತರಿಕೆ ಕಂಡಿದೆ. ರಾಯಲ್ ಎನ್‌ಫೀಲ್ಡ್ ಕೇರಳದಲ್ಲಿ ಒಂದೇ ಬರೋಬ್ಬರಿ 1,000 ಬೈಕ್ ಡೆಲಿವರಿ ಮಾಡಲಾಗಿದೆ. 

BS6 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್: ಫಸ್ಟ್ ಲುಕ್ ರಿವ್ಯೂವ್!

ಕ್ಲಾಸಿಕ್ 350, ಬುಲೆಟ್ 350, ಹಿಮಾಲಯನ್ ಹಾಗೂ ರಾಯಲ್ ಎನ್‌ಫೀಲ್ಡ್ ಟ್ವಿನ್ಸ್ ಬೈಕ್‌ಗಳು ಸೇರದಂತೆ ಒಟ್ಟು 1,000 ಬೈಕ್ ಡೆಲಿವರಿ ಆಗಿದೆ.  ಕೊರೋನಾ ವೈರಸ್ ಕಾರಣದಿಂದ ಕುಂಟಿತಗೊಂಡಿದ್ದ ವಾಹನ ಮಾರಟಕ್ಕೆ ಇದೀಗ ಚೇತರಿಕೆ ಕಾಣುವ ದಿನಗಳು ಆಗಮಿಸುತ್ತಿದೆ.  ಇದೀಗ ಭಾರತದಲ್ಲಿ ಸಾಲು ಸಾಲು ಹಬ್ಬಗಳಿವೆ. ಪ್ರತಿ ವರ್ಷ ಹಬ್ಬದ ದಿನಗಳಲ್ಲಿ ದಾಖಲೆಯ  ವಾಹನ ಮಾರಾಟವಾಗುತ್ತದೆ. ಆದರೆ ಈ ಬಾರಿ ದಾಖಲೆಗಿಂತ ಚೇತರಿಕೆ ಕಾಣುವ ನಿರೀಕ್ಷೆಯಲ್ಲಿ ಆಟೋಮೊಬೈಲ್ ಕಂಪನಿಗಳಿವೆ.

ಕೊಂಚ ಬದಲಾವಣೆಯೊಂದಿಗೆ ಬಿಎಸ್‌6 ಇಂಜಿನ್‌ನ ರಾಯಲ್‌ ಬೈಕು!

ಕೇರಳದ ಬಹುದೊಡ್ಡ ಹಬ್ಬ ಒಣಂಗೆ ಇದೀಗ ರಾಯಲ್ ಎನ್‌ಫೀಲ್ಡ್ ದಾಖಲೆ ಮಾರಾಟ ಕಂಡಿದೆ. ರಾಯಲ್ ಎನ್‌ಫೀಲ್ಡ್ ತನ್ನ ಬೈಕ್‌ಗಳನ್ನು BS6 ಎಂಜಿನ್‌ಗೆ ಅಪ್‌ಗ್ರೇಡ್ ಮಾಡಿದೆ. ABS ಬ್ರೇಕ್ ಸೇರಿದಂತ ಹಲವು ಫೀಚರ್ಸ್ ಸೇರಿಸಲಾಗಿದೆ.  ದಕ್ಷಿಣ ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದ್ದ ರಾಯಲ್ ಎನ್‌ಫೀಲ್ಡ್ ಕೊರೋನಾ ಬಳಿಕ ಚೇತರಿಕ ಕಾಣುತ್ತಿದೆ. ಇದು ಸಂತಸದ ವಿಚಾರ ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ.

click me!