ಮಹೀಂದ್ರ XUV 500 ಆಟೋಮ್ಯಾಟಿಕ್ ಕಾರು ಬಿಡುಗಡೆ!

By Suvarna News  |  First Published Aug 30, 2020, 8:41 PM IST

ಮಹೀಂದ್ರ XUV 500 ಡೀಸೆಲ್ ಆಟೋಮ್ಯಾಟಿಕ್ ಕಾರು ಬಿಡುಗಡೆಯಾಗಿದೆ. ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ, ಎಂಜಿ ಮೋಟಾರ್ಸ್, ಕಿಯಾ ಸೆಲ್ಟೊಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ  ಮಹೀಂದ್ರ XUV 500 ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ.


ಮುಂಬೈ(ಆ.30): ಹೊಚ್ಚ ಹೊಸ ಮಹೀಂದ್ರ XUV 500 ಡೀಸೆಲ್ ವೇರಿಯೆಂಟ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು ಬಿಡುಗಡೆಯಾಗಿದೆ. BS6 ಎಮಿಶನ್ ಎಂಜಿನ್ ಹೊಂದಿದ್ದು, ಪ್ರಿಮೀಯಂ ವೇರಿಯೆಂಟ್‌ಗಿಂತ 1.21 ಲಕ್ಷ ರೂಪಾಯಿ ಅಧಿಕವಾಗಿದೆ. ನೂತನ ಮಹೀಂದ್ರ XUV 500 ಕಾರಿನ ಬೆಲೆ 15.65 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಆರಂಭಗೊಳ್ಳುತ್ತಿದೆ.

ಆತ್ಮನಿರ್ಭರ್‌ ಭಾರತಕ್ಕೆ ಪುಷ್ಠಿ ನೀಡಿದ ನೂತನ ಮಹೀಂದ್ರ ಥಾರ್!

Tap to resize

Latest Videos

undefined

ಮಹೀಂದ್ರ XUV 500 ಆಟೋಮ್ಯಾಟಿಕ್ ಕಾರಿನ ಬೆಲೆ
ಮಹೀಂದ್ರ XUV 500 W7  = 15.65
ಮಹೀಂದ್ರ XUV 500 W9  = 17.36
ಮಹೀಂದ್ರ XUV 500 W11(OPT) = 18.88 

ವೆಂಟಿಲೇಟರ್ ಬಳಿಕ ಕೊರೋನಾ ವೈರಸ್ ಹೋರಾಟಕ್ಕೆ ಮಹೀಂದ್ರ ಆ್ಯಂಬುಲೆನ್ಸ್!

ನೂತನ ಮಹೀಂದ್ರ XUV 500 ಡೀಸೆಲ್ ವೇರಿಯೆಂಟ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು 2.2 ಲೀಟರ್ mHawk ಡೀಸೆಲ್ ಎಂಜಿನ್ ಹೊಂದಿದ್ದು, 155PS ಪರ್ ಹಾಗೂ   360Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

click me!