Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!

Published : Jan 15, 2026, 09:37 PM IST
zodiac love secret

ಸಾರಾಂಶ

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಜನ್ಮರಾಶಿಯ ವ್ಯಕ್ತಿಗೂ ಸಂಗಾತಿಗೆ ಪ್ರೀತಿಯನ್ನು (Zodiac love) ವ್ಯಕ್ತಪಡಿಸಲು ತನ್ನದೇ ಆದ ವಿಶಿಷ್ಟ ಶೈಲಿ ಇರುತ್ತದೆ. 12 ರಾಶಿಚಕ್ರದವರ ಪ್ರೀತಿಯ ಭಾಷೆ, ಅವರ ಶೈಲಿ, ಅವರ ನಿರೀಕ್ಷೆ ಹೀಗಂತೆ- ವಿವರ ಇಲ್ಲಿದೆ.

ಪ್ರೀತಿಯನ್ನು ಹೇಳದೇ ಇದ್ದರೆ, ವ್ಯಕ್ತಪಡಿಸದೆ ಇದ್ದರೆ ಅದು ಗೊತ್ತಾಗುವುದಿಲ್ಲ. “ಗುಡ್‌ ಮಾರ್ನಿಂಗ್” ಮೆಸೇಜ್ ಕಳಿಸುವುದು, ಧೈರ್ಯ ತುಂಬಿಸುವ ಮಾತು ಹೇಳುವುದು, ಪ್ರತಿದಿನ ಆಫೀಸ್‌ನಿಂದ ಮನೆಗೆ ಕರೆತರುವುದು – ಇವೆಲ್ಲವೂ ಪ್ರೀತಿಯನ್ನು ತೋರಿಸುವ ವಿಧಾನಗಳು. ಜ್ಯೋತಿಷ್ಯರ ಪ್ರಕಾರ, ಪ್ರತಿಯೊಂದು ರಾಶಿಗೂ ಪ್ರೀತಿಯನ್ನು ವ್ಯಕ್ತಪಡಿಸುವ ತಮ್ಮದೇ ಆದ ಶೈಲಿ ಇದೆ. ಹಾಗಾದರೆ ನಿಮ್ಮ ರಾಶಿಯ ಪ್ರೀತಿಯ ಭಾಷೆ ಯಾವುದು ನೋಡೋಣ.

ಮೇಷ (Aries)

ಮೇಷ ರಾಶಿಯವರು ಪ್ರೀತಿಯನ್ನು ಕೆಲಸಗಳಲ್ಲಿ ತೋರಿಸುತ್ತಾರೆ. ಡಿನ್ನರ್ ಡೇಟ್ ಪ್ಲಾನ್ ಮಾಡುವುದು, ಕಷ್ಟದ ಸಮಯದಲ್ಲಿ ಸಂಗಾತಿಯ ಪರ ನಿಲ್ಲುವುದು ಇವರ ಶೈಲಿ. ತಮ್ಮ ಪ್ರಯತ್ನಗಳನ್ನು ಗಮನಿಸಿ ಮೆಚ್ಚಿದಾಗ ಇವರಿಗೆ ಹೆಚ್ಚು ಪ್ರೀತಿ ಅನ್ನಿಸುತ್ತದೆ.

ವೃಷಭ (Taurus)

ಸ್ಪರ್ಶವೇ ವೃಷಭ ರಾಶಿಯವರ ಪ್ರೀತಿಯ ಭಾಷೆ. ಕೈ ಹಿಡಿಯುವುದು, ಅಪ್ಪಿಕೊಳ್ಳುವುದು, ಸಂಗಾತಿಗೆ ಇಷ್ಟವಾದ ಊಟ ಮಾಡಿಕೊಡುವುದು, ಕಾಳಜಿ ತೋರಿಸುವುದು ಇವರಿಗೆ ಬಹಳ ಮುಖ್ಯ.

ಮಿಥುನ (Gemini)

ಮಿಥುನರಿಗೆ ಮಾತುಕತೆಯೇ ಪ್ರೀತಿ. ಎಲ್ಲಿ ಹೋಗ್ತಿದ್ದಾರೆ, ಏನು ಮಾಡ್ತಿದ್ದಾರೆ ಅನ್ನೋದನ್ನ ಸಂಗಾತಿಗೆ ಹೇಳಿಕೊಳ್ಳುತ್ತಾರೆ. ಇದರಿಂದ ಇವರಿಗೆ ಮನಸ್ಸಿನ ನೆಮ್ಮದಿ ಸಿಗುತ್ತದೆ.

ಕಟಕ (Cancer)

ಕಟಕ ರಾಶಿಯವರು ರಕ್ಷಕರು. ಸಂಗಾತಿಯನ್ನು ಕಾಪಾಡುವುದು, ಭಾವನಾತ್ಮಕ ಬೆಂಬಲ ನೀಡುವುದು, ಸಂತೋಷದ ವಾತಾವರಣ ನಿರ್ಮಿಸುವುದೇ ಇವರ ಪ್ರೀತಿಯ ಭಾಷೆ.

ಸಿಂಹ (Leo)

ಸಿಂಹ ರಾಶಿಯವರು ಸಂಗಾತಿಯನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಹೊಗಳಿಕೆ, ಮೆಚ್ಚುಗೆ, ಸಂಪೂರ್ಣ ಗಮನ ಕೊಡುವುದು, ಸಂಕಷ್ಟದ ಸಮಯದಲ್ಲಿ ಭರವಸೆ ತುಂಬುವುದು ಇವರ ಪ್ರೀತಿಯನ್ನು ತೋರಿಸುವ ವಿಧಾನ.

ಕನ್ಯಾ (Virgo)

ಕನ್ಯಾ ರಾಶಿಯವರು ಪ್ರಾಯೋಗಿಕವಾಗಿ ಪ್ರೀತಿಯನ್ನು ತೋರಿಸುತ್ತಾರೆ. ಸಮಸ್ಯೆ ಪರಿಹರಿಸುವುದು, ಸಲಹೆ ನೀಡುವುದು, ಸಣ್ಣ ಸಣ್ಣ ವಿಚಾರಗಳನ್ನೂ ಗಮನಿಸುವುದು ಇವರ ಶೈಲಿ. ತಮ್ಮ ಪ್ರಯತ್ನಗಳಿಗೆ ಗೌರವ ಬೇಕೆಂದು ಬಯಸುತ್ತಾರೆ.

ತುಲಾ (Libra)

ತುಲಾ ರಾಶಿಯವರು ಸದಾ ರೋಮ್ಯಾಂಟಿಕ್. ಒಟ್ಟಿಗೆ ಸಮಯ ಕಳೆಯುವುದು, ಚಿಕ್ಕ ಚಿಕ್ಕ ಕಾಳಜಿಯ ಕೆಲಸಗಳು, ಸ್ಪರ್ಶ, ಪಿಸುಮಾತು, ಏಕಾಂತ, ಒಟ್ಟಿಗೆ ನಡಿಗೆ ಇವೆಲ್ಲ ಇವರಿಗೆ ಇಷ್ಟ. ಸಂಬಂಧದಲ್ಲಿ ಸಮತೋಲನ ಮತ್ತು ಶಾಂತಿ ಇರಬೇಕು ಎಂದು ಬಯಸುತ್ತಾರೆ.

ವೃಶ್ಚಿಕ (Scorpio)

ನಿಷ್ಠೆಯೇ ವೃಶ್ಚಿಕರ ಪ್ರೀತಿಯ ಭಾಷೆ. ಆಳವಾದ ಭಾವನಾತ್ಮಕ ಸಂಪರ್ಕ ಮತ್ತು ಬದ್ಧತೆಯ ಮೂಲಕ ಪ್ರೀತಿಯನ್ನು ತೋರಿಸುತ್ತಾರೆ. ಇವರು ಇತರ ಯಾವುದೇ ಆಮಿಷ ಎದುರಾದರೂ ತಮ್ಮ ಸಂಗಾತಿಯನ್ನು ಬಿಟ್ಟು ಬೇರೆ ಕಡೆ ಕಣ್ಣು ಹಾಯಿಸಲಾರರು.

ಧನು (Sagittarius)

ಧನು ರಾಶಿಯವರು ತಮ್ಮ ಸಂತೋಷದ ಕ್ಷಣಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ನಗು, ಸಾಹಸ, ಹೊಸ ಅನುಭವ – ಎಲ್ಲದಲ್ಲೂ ಸಂಗಾತಿ ಜೊತೆಯಲ್ಲಿರಬೇಕು ಎನ್ನುವುದು ಇವರ ಪ್ರೀತಿ.

ಮಕರ (Capricorn)

ಮಕರ ಜಾತಕದವರು ಜವಾಬ್ದಾರಿಯಿಂದ ಪ್ರೀತಿಯನ್ನು ತೋರಿಸುತ್ತಾರೆ. ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುವುದು ಇವರ ಶೈಲಿ. ತೋರುವಿಕೆಗಿಂತ ಕೆಲಸದಲ್ಲಿ ಪ್ರೀತಿ ತೋರಿಸುತ್ತಾರೆ. ಆಡದೆಯೇ ಮಾಡುವನು ರೂಢಿಯೊಳಗುತ್ತಮ ಎನ್ನುವವರು ಇವರು.

ಕುಂಭ (Aquarius)

ಭಾವನಾತ್ಮಕ ಅರ್ಥಮಾಡಿಕೊಳ್ಳುವಿಕೆಯೇ ಕುಂಭ ರಾಶಿಯವರ ಪ್ರೀತಿಯ ಭಾಷೆ. ಮನಸಾರೆ ಮಾತನಾಡುವುದು, ಪರಸ್ಪರ ಗೌರವ ನೀಡುವುದು, ಸನ್ನೆ ಸೂಕ್ಷ್ಮಗಳನ್ನು ಪಕ್ಕನೆ ತಿಳಿಯುತ್ತಾರೆ. ಮಾತಾಡದಿದ್ದರೂ ಸಂಗಾತಿಯ ಸಂಕೋಚ ಹಾಗೂ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಾರೆ.

ಮೀನ (Pisces)

ಮೀನ ರಾಶಿಯವರು ಪ್ರೀತಿಯನ್ನು ಚೆನ್ನಾಗಿ, ವೈಭವಪೂರ್ಣವಾಗಿ ತೋರಿಸೋಕೆ ಇಷ್ಟಪಡುತ್ತಾರೆ. ರೋಮ್ಯಾಂಟಿಕ್ ಡೇಟ್ ಪ್ಲಾನ್ ಮಾಡುವುದು, ಭರ್ಜರಿ ಊಟ ರೆಡಿ ಮಾಡಿಕೊಡುವುದು, ಉಡುಗೊರೆ ನೀಡುವುದು ಇವರ ಪ್ರೀತಿಯ ಅಭಿವ್ಯಕ್ತಿ.

PREV
Read more Articles on
click me!

Recommended Stories

ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
ಮೇಷ ರಾಶಿ ಜೊತೆ ಈ 3 ರಾಶಿಗೆ ಸಾಡೇ ಸಾತಿ ಆನಂದ, ಪಂಚ ಮಹಾಪುರುಷದ ಜೊತೆಗೆ ಹಲವಾರು ರಾಜಯೋಗ