ಹನುಮಂತನಿಗೆ ಸಿಂದೂರ ಅಂದರೆ ಯಾಕೆ ಅಷ್ಟೊಂದು ಇಷ್ಟ?

Published : Jul 11, 2025, 08:07 PM IST
anjaneya

ಸಾರಾಂಶ

ಆಂಜನೇಯನಿಗೆ ಕುಂಕುಮ ಅಥವಾ ಸಿಂದೂರ ಅರ್ಪಿಸುವುದು ತುಂಬಾ ಫಲಪ್ರದ ಆಚರಣೆ. ಇದರ ಮಹತ್ವ ಹಾಗೂ ಇದರ ಹಿಂದಿರುವ ಪುರಾಣ ಕತೆ ಇಲ್ಲಿ ತಿಳಿಯಬನ್ನಿ. 

ಸಿಂದೂರ ಅಥವಾ ಕುಂಕುಮ ಎಂದರೆ ಆಂಜನೇಯನಿಗೆ ತುಂಬಾ ಇಷ್ಟವಂತೆ. ಆಂಜನೇಯನನ್ನು ಪೂಜಿಸುವಾಗ ಮೂರ್ತಿಗೆ ಕುಂಕುಮ ಹಚ್ಚುವುದು ಹಿಂದೂ ಧರ್ಮದಲ್ಲಿ ಒಂದು ಪದ್ಧತಿ. ಇದು ಹನುಮಂತನಿಗೆ ತೋರುವ ಭಕ್ತಿ ಮತ್ತು ಪ್ರೀತಿಯ ಸಂಕೇತ.

ಇದರ ಹಿಂದೊಂದು ದಂತಕಥೆ ಇದೆ. ಒಂದು ದಿನ ಸೀತಾದೇವಿ ಹಣೆಗೆ ಕುಂಕುಮ ಹಚ್ಚಿಕೊಳ್ಳುವುದನ್ನು ಹನುಮಂತ ನೋಡುತ್ತಾನೆ. ಕುತೂಹಲದಿಂದ ಅವನು ಅವಳನ್ನು ಇದು ಯಾಕೆ ಎಂದು ಕೇಳುತ್ತಾನೆ. ʼನನ್ನ ಪತಿ ಶ್ರೀರಾಮ ದೀರ್ಘಾಯುಷ್ಯವನ್ನು ಹೊಂದಲಿ ಮತ್ತು ಚೆನ್ನಾಗಿರಲಿ ಎಂದು ನಾನು ಸಿಂದೂರ ಹಚಚಿಕೊಳ್ಳುತ್ತೇನೆ.ʼ ರಾಮನ ಭಕ್ತನಾದ ಹನುಮಂತ ಇದನ್ನು ಕೇಳಿದಾಗ ತುಂಬಾ ಭಾವುಕನಾದ. ಹಾಗಾದರೆ, ರಾಮನಿಗೆ ಯೋಗಕ್ಷೇಮ ದೊರೆಯುವುದಾದರೆ, ನಾನು ಕೂಡ ಅದನ್ನು ನನ್ನ ದೇಹದಾದ್ಯಂತ ಹಚ್ಚಿಕೊಳ್ಳುತ್ತೇನೆ. ಹೀಗೆಂದುಕೊಂಡು ಆಂಜನೇಯ ದೇಹದಾದ್ಯಂತ ಸಿಂದೂರವನ್ನು ಹಚ್ಚಿಕೊಂಡ.

ರಾಮ ಸಿಂದೂರವನ್ನು ಹಚ್ಚಿದ ಹನುಮನನ್ನು ನೋಡಿದ. ವಿಚಿತ್ರವೆನಿಸಿತು. ಯಾಕೆಂದು ಕೇಳಿದ. ಆಗ ಸೀತೆ ರಾಮನಿಗೆ ವಿಷಯವನ್ನು ವಿವರಿಸಿದಳು. ಹನುಮನ ಶುದ್ಧ, ನಿಸ್ವಾರ್ಥ ಭಕ್ತಿಗೆ ಅವನ ಹೃದಯವು ಭಾವುಕವಾಯಿತು. ನಂತರ ಶ್ರೀರಾಮ, ಇನ್ನು ಮುಂದೆ ಹನುಮಂತನಿಗೆ ಭಕ್ತಿಯಿಂದ ಸಿಂದೂರವನ್ನು ಅರ್ಪಿಸುವವರಿಗೆ ಅವನ ಆಶೀರ್ವಾದ ಸಿಗಲಿ ಎಂದು ಆಶೀರ್ವದಿಸಿದ. ಹೀಗಾಗಿ, ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವ ಈ ಸುಂದರ ಸಂಪ್ರದಾಯ ಪ್ರಾರಂಭವಾಯಿತು.

ಶನಿವಾರ ಆಂಜನೇಯನಿಗೆ ಕುಂಕುಮ ಅರ್ಪಿಸುವುದರಿಂದ ನೀವು ಬೇಡಿದ್ದು ಈಡೇರುತ್ತದೆ. ಶನಿ ದೋಷ ನಿವಾರಣೆಗೆ ನೀವು ಹನುಮಂತನ ಪೂಜೆಯನ್ನು ಶನಿವಾರ ಮಾಡಬಹುದು. ಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಪುರುಷರು ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ. ಹುರಿದ ಧಾನ್ಯಗಳೊಂದಿಗೆ ಹನುಮನಿಗೆ ಬೆಲ್ಲವನ್ನು ನೀಡಬೇಕು. ಗೋಧಿ ಮತ್ತು ಬೆಲ್ಲದಿಂದ ಮಾಡಿದ ಖಾದ್ಯಗಳನ್ನು ಅರ್ಪಿಸಬಹುದು.

ಹಾಗೇ ಮಂಗಳವಾರವೂ ಪವಿತ್ರ. ಅಂದು ಅರಳಿ ಎಲೆಗಳನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಕುಂಕುಮ ಅಥವಾ ಶ್ರೀಗಂಧದಿಂದ ಶ್ರೀರಾಮ ಎಂದು ಅದರ ಮೇಲೆ ಬರೆದು ಆ ಎಲೆಗಳಿಂದ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಿದರೆ ಅದು ಹಣಕಾಸಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಲಡ್ಡುಗಳಲ್ಲಿ ತುಳಸಿ ಎಲೆಗಳನ್ನು ಹಾಕಿ ಹನುಮಂತನ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಭೋಗವನ್ನು ಅರ್ಪಿಸಿ. ಬಜರಂಗಬಲಿ ಲಡ್ಡುಗಳನ್ನು ತುಂಬಾ ಇಷ್ಟಪಡುತ್ತಾನೆ. ಈ ಪರಿಹಾರವು ಗ್ರಹಗಳ ಶಾಂತಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಪರಿಹಾರ ಕ್ರಮವನ್ನು ಮಾಡುವುದರಿಂದ ನಿಮ್ಮ ಗ್ರಹ ದೋಷ ದೂರವಾಗಿ ಗ್ರಹ ಶಾಂತಿಯಾಗುತ್ತದೆ.

Chanakya Niti: ಬ್ರಹ್ಮಚರ್ಯದ ಗುಟ್ಟುಗಳು: ಚಾಣಕ್ಯ ನೀತಿ ಏನ್‌ ಹೇಳುತ್ತೆ?

ನೀವು ಮಾಡಲು ಹೊರಟ ಯಾವುದೋ ಒಂದು ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದಿದ್ದರೆ ಅಥವಾ ಯಾವುದೇ ನಿರ್ದಿಷ್ಟ ಕೆಲಸಕ್ಕೆ ಹೋಗುವ ಮೊದಲು, ಮಂಗಳವಾರ ಹನುಮಂತನಿಗೆ ಎಲೆ ಅಡಿಕೆ ಅರ್ಪಿಸಿ. ಇದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇದು ನಿಮ್ಮ ಪ್ರಗತಿಗೆ ಪೂರಕವಾಗಿರುತ್ತದೆ. ಪ್ರತಿ ಮಂಗಳವಾರ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ ಹನುಮಂತನಿಗೆ ಮಲ್ಲಿಗೆ ಎಣ್ಣೆ ಮತ್ತು ಮಲ್ಲಿಗೆ ಹೂವುಗಳನ್ನು ಅರ್ಪಿಸಿ ಇದರಿಂದ ಬಜರಂಗ ಬಲಿಯು ಸಂತೋಷಪಡುತ್ತಾನೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯೂ ನೆಲೆಸುತ್ತದೆ. ಇದು ನಿಮಗೆ ಹನುಮಂತನ ಅನುಗ್ರಹವನ್ನು ಪಡೆಯುವಲ್ಲಿ ಸಹಕರಿಸುತ್ತದೆ.

ಮಂಗಳವಾರದಂದು ಉಪವಾಸ ಮಾಡಿಕೊಂಡು ಹನುಮಂತ ದೇವರನ್ನು ಪ್ರಾರ್ಥಿಸಬಹುದು. ದಿನದಲ್ಲಿ ಒಂದು ಊಟವನ್ನು ಮಾಡಿ ಹನುಮಂತ ದೇವರ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು. ಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. "ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ, ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮ ದೂತಂ ಮನಸಾ ಸ್ಮರಾಮಿ" ಈ ಮಂತ್ರವನ್ನು ಪಠಿಸಿ ಹನುಮಂತ ದೇವರನ್ನು ಪೂಜಿಸಬಹುದಾಗಿದೆ.

ಈ ಚಿತ್ರಗಳು ಮನೆಯಲ್ಲಿದ್ದರೆ ಹಣ ಹೋಗುತ್ತೆ? ವಾಸ್ತು ತಜ್ಞರ ಎಚ್ಚರಿಕೆ!

 

 

PREV
Read more Articles on
click me!

Recommended Stories

ಇನ್ಮುಂದೆ ಗಂಡ-ಹೆಂಡತಿ ಮಧ್ಯೆ ಜಗಳವೇ ಇರಲ್ಲ.. ಇಲ್ಲಿದೆ ಅನ್ಯೋನ್ಯತೆ ಹೆಚ್ಚಿಸುವ ರಹಸ್ಯ ಪರಿಹಾರ!
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ