
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಭಾರಿ ಚರ್ಚೆ ನಡೆಯುತ್ತಿದೆ. ಚುನಾವಣೆ ಬಳಿಕ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ, ಕೊನೆಯ ಎರಡೂವರೆ ವರ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕುರಿತು ಒಪ್ಪಂದ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಇಲ್ಲ. ಆದರೂ ಇದೀಗ ಕಳೆದ ಕೆಲವು ದಿನಗಳಿಂದ ಡಿ.ಕೆ.ಶಿವಕುಮಾರ್ ಅವರ ನಡೆಯಿಂದಾಗಿ ಈ ವಿಷಯ ಮತ್ತಷ್ಟು ಕುತೂಹಲದ ಚರ್ಚೆಗೆ ಕಾರಣವಾಗಿದೆ. ಡಿಕೆಶಿ ಹಾಗೂ ಮಗಳು ಐಶ್ವರ್ಯ ಅವರು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿರುವುದು, ಅದಕ್ಕಿಂತಲೂ ಹೆಚ್ಚಾಗಿ ಶಿವಕುಮಾರ್ ಅವರು, ಸದ್ಗುರು ಜಗ್ಗಿ ವಾಸುದೇವ ಅವರನ್ನು ಶಿವರಾತ್ರಿಯ ಸಂದರ್ಭದಲ್ಲಿ ಭೇಟಿಯಾಗಿರುವುದು... ಹೀಗೆ ರಾಜಕಾರಣದಲ್ಲಿ ಒಳಗೊಳಗೇ ಏನೋ ನಡೆಯುತ್ತಿದೆ ಎಂಬ ಬಗ್ಗೆ ಭಾರಿ ಸದ್ದು ಮಾಡುತ್ತಿದೆ. ಇದರ ನಡುವೆಯೇ ಇದೀಗ ಡಿಕೆಶಿ ಅವರ ಮಗಳು ಐಶ್ವರ್ಯ ಡಿಕೆಎಸ್ ಹೆಗ್ಡೆ ಅವರು, ಸುವರ್ಣ ಚಾನೆಲ್ ಜೊತೆ ನೀಡಿದ್ದ ಸಂದರ್ಶನದಲ್ಲಿಯೂ ತಮ್ಮ ಅಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು.
ಇದು ಒಂದೆಡೆಯಾದರೆ, ಸದ್ಯ ಕೊ*ಲೆ ಕೇಸ್ನಲ್ಲಿ ಸಿಲುಕಿರುವ ನಟ ದರ್ಶನ್ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಕೇಸು ಏನೇ ಆಗಿರಲಿ ಅವರ ಅಭಿಮಾನಿಗಳ ಸಂಖ್ಯೆಯೇನೂ ಕಮ್ಮಿಯಾಗಲಿಲ್ಲ. ಇಂದಿಗೂ ದರ್ಶನ್ ಅವರನ್ನು ಆರಾಧ್ಯ ದೈವ ಎಂದೇ ಅಭಿಮಾನಿಗಳು ಹೇಳುತ್ತಿದ್ದಾರೆ. ಅದೇ ಮತ್ತೊಂದೆಡೆ ಈಚೆಗಷ್ಟೇ ನಟ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ನಿಂದ ಗುಣಮುಖರಾಗಿ ಮತ್ತೆ ಮರಳಿದ್ದಾರೆ. ಅದೇ ಎನರ್ಜಿ ಜೊತೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಖ್ಯಾತ ಗುರೂಜಿ ವಿದ್ವಾನ್ ಮುಗುರು ಮಧುದೀಕ್ಷಿತ್ (Vidwan Muguru Madhudixith)ಅವರು ಇಬ್ಬರು ನಟರ ಬಗ್ಗೆ ಹಾಗೂ ಮುಂದಿನ ಸಿಎಂ ಕುರಿತಾಗಿ ಮೆಟ್ರೋಸಾಗಾ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಮೊದಲಿಗೆ ದರ್ಶನ್ ಕುರಿತು ಹೇಳಿರುವ ಗುರೂಜಿ, ದರ್ಶನ್ ಅವರಿಗೆ ಸಾಡೇಸಾಥಿ ರೀಸೆಂಟ್ ಆಗಿ ಮುಗಿದಿದೆ. ಸಾಡೇಸಾಥಿ ಸಮಯದಲ್ಲಿಯೇ ಅವರಿಗೆ ಕಾಟೇರಾ ಚಿತ್ರ ತುಂಬಾ ಹಿಟ್ ಕೊಟ್ಟಿತು. ಅದೇ ಸಮಯದಲ್ಲಿ ಅವರು ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುವಂತಾಯಿತು. ಆದರೆ ಮುಂದೆ ಅವರು ಎಕ್ಸ್ಪೆಕ್ಟೇಷನ್ಗಿಂತಲೂ ಉತ್ತಮ ಸಾಧನೆ ಮಾಡುತ್ತಾರೆ.. ಈಗಲೇ ಅವರು ದೊಡ್ಡ ಸ್ಟಾರ್. ಜೀವನ ಅವರಿಗೆ ದೊಡ್ಡ ಪಾಠ ಕಲಿಸಿದೆ. ಇನ್ನು ದೊಡ್ಡ ಮಟ್ಟಕ್ಕೆ ಹೋಗುತ್ತಾರೆ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ವಿಷಯವನ್ನು ಕೇಳಿದಾಗ, ಗುರೂಜಿ, ಡಿ.ಕೆ.ಶಿವಕುಮಾರ್ ಅವರ ಜಾತಕ ತುಂಬಾ ಬಲಿಷ್ಠವಾಗಿದೆ. ಮುಂದಿನ ದಿನಗಳಲ್ಲಿ ಅವರು ರಾಜನಾದರೂ ಡೌಟ್ ಇಲ್ಲ ಎಂದು ಹೇಳುತ್ತಲೇ ಮುಂದಿನ ಮುಖ್ಯಮಂತ್ರಿ ಅವರೇ ಆಗಲಿದ್ದಾರೆ ಎನ್ನುವ ಸುಳಿವನ್ನು ನೀಡಿದ್ದಾರೆ. ಸರ್ಕಾರ ಖಂಡಿತವಾಗಿಯೂ ಐದು ವರ್ಷಗಳನ್ನು ಪೂರೈಸುತ್ತದೆ. ಡೌಟೇ ಬೇಡ ಎಂದಿದ್ದಾರೆ.
ಇನ್ನು ಶಿವರಾಜ್ಕುಮಾರ್ ಕುರಿತು ಕೇಳಿದ ಪ್ರಶ್ನೆಗೆ ಅವರು, ಶಿವಣ್ಣ ಅವರು ಸಾಡೇಸಾಥಿ ಮುಗಿದಿದೆ. ಅವರ ಜಾತಕ ಕೂಡ ಚೆನ್ನಾಗಿದೆ. ಆದರೆ ಶಿವ ಎಂದರೆ ತುಂಬಾ ಸ್ಟ್ರಗಲ್ ನೋಡಬೇಕಾಗುತ್ತದೆ. ಜಾತಕದಲ್ಲಿ ಎಷ್ಟೇ ಫೇಮಸ್ ಇದ್ದರು ಕೂಡ ಸುತ್ತಲೂ ತುಂಬಾ ನೋವನ್ನು ತುಂಬಿಕೊಂಡಿರುತ್ತಾರೆ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.