
ಹಿಂದು ಧರ್ಮದಲ್ಲಿ ಮದುವೆ ಮಾಡುವಾಗ ಜಾತಕ ನೋಡ್ತಾರೆ. ಈ ಜಾತಕ ಮ್ಯಾಚ್ ಆಗಿಲ್ಲ ಅಂದ್ರೆ ಮದುವೆ ಮಾಡೋದಿಲ್ಲ. ಕೆಲವೊಮ್ಮೆ ಜಾತಕ ಮ್ಯಾಚ್ ಆದರೂ ಕೂಡ ಡಿವೋರ್ಸ್ ಆಗೋದುಂಟು. ಯಾಕೆ? ಈ ಬಗ್ಗೆ All Rounder Akshaya ಯುಟ್ಯೂಬ್ ಚಾನೆಲ್‌ನಲ್ಲಿ ವಿದ್ವಾನ್ ಮೂಗೂರ್ ಮಧುದೀಕ್ಷಿತ್ ಅವರು ಮಾತನಾಡಿದ್ದಾರೆ.
ಜಾತಕ ಕೇಳದೆ ಸೋದರಮಾವನಿಗೆ ಮದುವೆ ಮಾಡ್ತಾರೆ!
ಮದುವೆಯಲ್ಲಿ ದೈವ ವಿವಾಹ ,ರಾಕ್ಷಸ ವಿವಾಹ, ಗಂಧರ್ವ ವಿವಾಹ ಅಂತ ಇದೆ. ಗಂಧರ್ವ ವಿವಾಹ ಅಂದ್ರೆ ಲವ್ ಮ್ಯಾರೇಜ್. ಪರಸ್ಪರ ಅರ್ಥ ಮಾಡಿಕೊಂಡರೆ ಬೇರೆ ವಿಚಾರ ಯಾಕೆ ಬೇಕು? ಮದುವೆ ಬೇಡ ಅಂತ ಶಾಸ್ತ್ರದಲ್ಲಿದೆ. ಸೋದರ ಮಾವ ಹಾಗೂ ಹುಡುಗಿ ಮದುವೆ ಆಗಬೇಕು ಅಂದ್ರೆ ಬೇರೆ ಏನೂ ಮಾಡೋದು ಬೇಡ, ಮದುವೆ ಮಾಡಿ ಅಂತ ಹೇಳಿದ್ರು. ಯಾಕೆಂದರೆ ಸೋದರಮಾವ ಹೇಗೆ? ಹುಡುಗಿ ಹೇಗೆ ಅಂತ ಇಬ್ಬರಿಗೂ ಗೊತ್ತಿರುತ್ತದೆ. ಹಾಗಾಗಿ ಇವರಿಬ್ಬರು ಚೆನ್ನಾಗಿರ್ತಾರೆ ಅಂತ ಹೇಳ್ತಾರೆ. ಯೋನಿಕೂಟ ಅಂತ ಒಂದಿದೆ. ನಕ್ಷತ್ರಗಳ ಮೇಲೆ ಇಡೀ ದಶಾಭುಕ್ತಿಗಳನ್ನ ನಿರ್ಣಯ ಮಾಡಿದ್ದಾರೆ. ಫಿಸಿಕಲ್ ರಿಲೇಷನ್‌ಶಿಪ್ ಚೆನ್ನಾಗಿರಬೇಕು. ಕೊನೇ ಪಕ್ಷ ಇವೆರಡು ಮ್ಯಾಚ್ ಮಾಡಿದ್ರೆ ದಂಪತಿ ಚೆನ್ನಾಗಿರ್ತಾರೆ ಅಂತ ಹೇಳಲಾಗುತ್ತದೆ.
ಜಾತಕ ಮ್ಯಾಚ್ ಆಗಿದ್ರೂ ಡಿವೋರ್ಸ್ ಆಗೋದು ಯಾಕೆ?
ಮನೋಕೂಟ ಮ್ಯಾಚ್ ಆಗ್ತಿಲ್ಲ. ಎಲ್ಲವನ್ನೂ ಮ್ಯಾಚ್ ಮಾಡ್ತಿದೀರಾ. ಆದರೆ ಮನೋಕೂಟನೇ ಮ್ಯಾಚ್ ಮಾಡ್ತಿಲ್ಲ. ಮನೋಕೂಟ ಅಂತಂದ್ರೆ ಇವರಿಬ್ಬರ ಹೊಂದಾಣಿಕೆ ಮಾಡುವಾಗ ನಾವು ಸಾಮಾನ್ಯವಾಗಿ ಜಾತಕ 100ಕ್ಕೆ 90% ಯಾರು ಮಾಡಲ್ಲ. ಸಾಲಾವಳಿ 18ಕ್ಕಿಂತ ಜಾಸ್ತಿ ಬಂದ್ರೆ ಸಾಕು ಮದುವೆ ಮಾಡಿಬಿಡೋಣ ಅಂತ ಹೇಳ್ತಾರೆ ಹುಡುಗ, ಹುಡುಗಿ ಬೆಳೆದಿರೋ ವಾತಾವರಣ ಬೇರೆ ಬೇರೆ. ಅವರಿಬ್ಬರಿಗೂ ಮ್ಯಾಚ್ ಆಗಿರಬೇಕು. ಕೆಟ್ಟ ಕರ್ಮ ಇರಲೀ, ಒಳ್ಳೆಯ ಕರ್ಮ ಇರಲೀ ಅದನ್ನು ತಪ್ಪಿಸಿಕೊಳ್ಳಬಾರದು. ಆರಂಭದಲ್ಲಿ ಗಂಡ-ಹೆಂಡತಿ ತುಂಬ ಜಗಳ ಆಡ್ತಾರೆ, ಆಮೇಲೆ ಒಂದಿನ ಸಮಸ್ಯೆಗಳು ಮುಗಿದು ಒಳ್ಳೆಯ ಜೀವನ ಮಾಡುತ್ತಾರೆ. ಮನಸ್ಥಿತಿಗೆ ಸಂಬಂಧಪಟ್ಟಂತೆ ಇಂದು ಡಿವೋರ್ಸ್ ಆಗ್ತಿದೆ. ಎಷ್ಟೋ ಕಡೆ ಜಾತಕ ಮ್ಯಾಚ್ ಆಗಲ್ಲ ಅಂತ ಮದುವೆ ಮಾಡೋದಿಲ್ಲ. ಆದರೆ ಇದು ಇಂದಿನ ಕಾಲಘಟಕ್ಕೆ ತಪ್ಪು.
ಲವ್ ಮ್ಯಾರೇಜ್ ಅಂತ ಹೇಗೆ ಗೊತ್ತಾಗುತ್ತದೆ?
ಯಾವಾಗ ಪಂಚಮಾಧಿಪತಿ ಸಪ್ತಮಾಧಿಪತಿ ಇಬ್ಬರು ಜಾತಕದಲ್ಲಿ ಒಟ್ಟಿಗೆ ಇರ್ತಾರೋ ಅವರು ಲವ್ ಮ್ಯಾರೇಜ್ ಮಾಡ್ಕೊಂಡು ಚೆನ್ನಾಗಿರ್ತಾರೆ. ಅದೇ ಸಪ್ತಮಾಧಿಪತಿ ಆರು ಎಂಟು 12ನೇ ಸ್ಥಾನಕ್ಕೆ ಹೋಗ್ಬಿಟ್ಟರೆ ಇವರು ಲವ್ ಮಾಡಿ, ಮದುವೆ ಮಾಡ್ಕೊಂಡ್ರು ಚೆನ್ನಾಗಿರಲ್ಲ ಅಂತ ತೋರಿಸುತ್ತದೆ. ಲವ್ ಮಾಡಿದವರೆಲ್ಲರೂ ಯಶಸ್ವಿ ಮದುವೆ ಜೀವನ ನಡೆಸಿಲ್ಲ. ಲವ್ ಮಾಡಿದವರು ಮದುವೆಯೂ ಆಗದೆ ಉದಾಹರಣೆ ಇದೆ. ಯೋಗ ಇದ್ರೆ ಮಾತ್ರ ಲವ್ ಆಗಿ, ಲವ್ ಮ್ಯಾರೇಜ್ ಆಗುತ್ತದೆ. ಅವರು ಲವ್ ಮ್ಯಾರೇಜ್ ಆದ್ರು ಅಂತ ಎಲ್ಲರೂ ಲವ್ ಮ್ಯಾರೇಜ್ ಆಗೋಕೆ ಆಗೋದಿಲ್ಲ. ಅದೆಲ್ಲವೂ ಕರ್ಮಗಳ ಪ್ರಭಾವ.
ಲೈಂಗಿಕ ಸಮಸ್ಯೆಯಿಂದ ಡಿವೋರ್ಸ್ ಆಗುತ್ತದೆ?
ಜಾತಕದಲ್ಲಿ ಎಲ್ಲವೂ ಗೊತ್ತಾಗುತ್ತದೆ. ಲೈಂಗಿಕ ಸಮಸ್ಯೆ ಉಂಟಾಗಿ ಡಿವೋರ್ಸ್ ಆಗುತ್ತದೆ. ಒಂದು ಮಗು ಹುಟ್ಟಿದಾಗ ಆ ಮಗುಗೆ ಸಂತಾನ ಆಗತ್ತೋ ಇಲ್ವೋ ಎಂದು ಕೂಡ ಹೇಳಬಹುದು. ಒಂದೇ ರಾಶಿಯ ಎಲ್ಲ ಜನರ ಜೀವನ ಒಂದೇ ಥರ ಇರೋದಿಲ್ಲ, ರಾಶಿ ನೋಡಿ ಎಲ್ಲರೂ ನಮ್ಮ ಜೀವನ ಹೀಗೆ ಇರುತ್ತದೆ ಅಂತ ಅಂದುಕೊಳ್ಳಬಾರದು. ಜನ್ಮ ಜಾತಕದ ಆಧಾರದ ಮೇಲೆ ನಮ್ಮ ಜೀವನ ಹೀಗಿರುತ್ತದೆ ಅಂತ ಅಂದುಕೊಳ್ಳಬೇಕು. ಜಾತಕವನ್ನು ನಾವು ಮಾರ್ಗದರ್ಶನದ ಥರ ತಗೋಬೇಕು.