ಹಲ್ಲಿ ಮೈ ಮೇಲೆ ಬಿದ್ದರೆ ಶುಭವೇ? ಅಶುಭವೇ?

By Web DeskFirst Published Apr 12, 2019, 4:15 PM IST
Highlights

ಹಲ್ಲಿ ಮೈ ಮೇಲೆ ಬಿದ್ದರೆ ಸಾಕು ಯಾವ ಫಲವೆಂದು ನೋಡಿ, ಸ್ನಾನ ಮಾಡಿ, ಎಣ್ಣೆ ದೀಪ ಹಚ್ಚುತ್ತಿದ್ದ ಕಾಲವೊಂದಿತ್ತು. ಕಾಲ ಬದಲಾದಂತೆ ನಂಬಿಕೆಗಳು ಬದಲಾಗಿರಬಹುದು. ಆದರೆ, ಅವು ಸಂಪೂರ್ಣ ಮರೆಯಾಗಿಲ್ಲ.

ಅಬ್ಬಾ, ಹಲ್ಲಿ ನೋಡಿದರೆ ಸಾಕು, ಅದೇನೋ ಮೈ ಜುಮ್ಮೆನ್ನುವಂಥ ಭಾವ. ಕೆಲವರಿಗಂತೂ ಎಲ್ಲಿಲ್ಲದ ಭಯ. ಕೆಲವರು ಇದನ್ನು ಸಾಯಿಸುತ್ತರಾದರೂ, ಹಲ್ಲಿ ಕೊಲ್ಲವುದು ಪಾಪವೆಂದೇ ನಂಬುತ್ತಾರೆ ಹಿಂದೂಗಳು. ಈ ಜೀವಿಯನ್ನು ಕೊಂದರೆ, ಮುಂದಿನ ಜನ್ಮಕ್ಕೂ ಪಾಪ ಮುಂದುವರಿಯುತ್ತದೆ ಎಂಬ ನಂಬಿಕೆ. 

ಇನ್ನು ಹಲ್ಲಿ ಮೈಮೇಲೆ ಬಿದ್ದರೆ ಶುಭ, ಅಶುಭ ಎರಡೂ ಫಲಗಳಿವೆ. ಎಲ್ಲಿ ಬಿದ್ದರೆ ಶುಭ, ಎಲ್ಲಿ ಬಿದ್ದರೆ ಅಶುಭ? 

  • ತಲೆ ಮೇಲೆ  ಬಿದ್ದರೆ ಏನಾದರೂ ಕೆಟ್ಟದಾಗುತ್ತದೆ. 
  • ಮುಖದ ಮೇಲೆ ಬಿದ್ದರೆ ಯಾರಿಗಾದರೂ ಪ್ರಾಣಾಪಾಯವಾಗಬಹುದು. 
  • ಹುಬ್ಬುಗಳ ಮೇಲೆ ಬಿದ್ದರೆ ಧನಾಗಮನವಾಗುತ್ತದೆ.
  • ಗಲ್ಲದ ಮೇಲೆ ಬಿದ್ದರೆ, ಹಿಂದೆ ಏನಾದರೂ ತಪ್ಪು ಮಾಡಿದ್ದರೆ ಶಿಕ್ಷೆಯಾಗುವ ಸಂಭವವಿದೆ. 
  • ಮೇಲ್ತುಟಿ ಮೇಲೆ ಬಿದ್ದರೆ ಶ್ರೀಮಂತಿಕೆ ಕರಗುವುದು. ಕೆಳ ತುಟಿ ಮೇಲೆ ಬಿದ್ದರೆ ಶ್ರೀಮಂತರಾಗುತ್ತಾರೆ.
  • ಮೂಗಿನ ಮೇಲೆ ಬಿದ್ದರೆ ಆರೋಗ್ಯ ಸಮಸ್ಯೆ ಕಾಡಬಹುದು. 
  • ಬಲಗಿವಿ ಮೇಲೆ ಬಿದ್ದರೆ ಆರೋಗ್ಯ, ಆಯಸ್ಸು ವೃದ್ಧಿಸುತ್ತದೆ. 
  • ಕುತ್ತಿಗೆ ಮೇಲೆ ಬಿದ್ದರೆ ವೈರಿಗಳು ನಶಿಸುತ್ತಾರೆ. 
  • ಎಡಗೈ ಮೇಲೆ ಬಿದ್ದರೆ ನಿಮ್ಮ ಲೈಂಗಿಕ ಜೀವನ ಸುಗಮವಾಗುತ್ತದೆ.
  • ಹೊಕ್ಕುಳ ಮೇಲೆ ಬಿದ್ದರೆ ನಿಮಗೆ ಅಮೂಲ್ಯ ಮಣಿಗಳು ಮತ್ತು ರತ್ನಗಳು ಲಭಿಸಲಿವೆ.
  • ತೊಡೆ ಮೇಲೆ ಬಿದ್ದರೆ ನಿಮ್ಮ ತಂದೆ-ತಾಯಿಯರಿಗೆ ಬೇಸರ, ಅಸಂತೋಷ ಎದುರಾಗಬಹುದು.
  • ಬಲ ಮೊಣಕಾಲಿನ ಗಂಟಿನ ಮೇಲೆ ಬಿದ್ದರೆ ತೀರ್ಥ ಯಾತ್ರೆ, ಎಡ ಮೊಣಕಾಲಿನ ಮೇಲೆ ಬಿದ್ದರೆ ಕೆಲಸ ಸಿದ್ಧಿ. 
  • ಕಾಲುಗಳ ಮೇಲೆ ಬಿದ್ದರೆ ಸುಖ ಪ್ರಯಾಣ ನಿಮ್ಮದಾಗುತ್ತದೆ. 
click me!