Chanakya Niti: ತಂದೆಯಿಂದ ಮಗನಿಗೆ ಚಾಣಕ್ಯ ನೀತಿ: ಈ ಸಂಗತಿಗಳು ಗೊತ್ತಿರಲೇಬೇಕು!

Published : Sep 03, 2025, 08:00 PM IST
chanakya

ಸಾರಾಂಶ

ಮಗನಿಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಅತ್ಯಗತ್ಯವಾದ ಮಾರ್ಗದರ್ಶನವನ್ನು ಅಪ್ಪ ಮಾಡಬೇಕು. ಅಪ್ಪ ತನ್ನ ಮಾತು ಹಾಗೂ ಕೃತಿಗಳ ಮೂಲಕ ಈ ಅಂಶಗಳನ್ನು ಮಗನ ಮನಸ್ಸಿಗೆ ದಾಟಿಸಬೇಕಂತೆ. ಈ ವಿಷಯದಲ್ಲಿ ಆಚಾರ್ಯ ಚಾಣಕ್ಯರು ಹೇಳೋದು ಇಷ್ಟು.

ಆಚಾರ್ಯ ಚಾಣಕ್ಯರು ಮನುಷ್ಯ ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು ಎಂದು ಸೂತ್ರರೂಪವಾಗಿ ಬಹಳಷ್ಟನ್ನು ಹೇಳಿದ್ದಾರೆ. ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ಮನಶ್ಶಾಸ್ತ್ರಜ್ಞರೂ ಆಗಿದ್ದರು. ಚಾಣಕ್ಯ ತಿಳಿಸಿದ ವಿಚಾರಗಳು ಇಂದಿಗೂ ಜನರಿಗೆ ಅವರ ಜೀವನದಲ್ಲಿ ಹೊಸ ಮಾರ್ಗವನ್ನು ತೋರಿಸಲು ಕೆಲಸ ಮಾಡುತ್ತವೆ. ಚಾಣಕ್ಯರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜನರು ಯಶಸ್ವಿಯಾಗುತ್ತಾರೆ. ಅಪ್ಪ- ಮಗನ ಸಂಭಂಧ ಬಹಳ ಟ್ರಿಕ್ಕೀ ಮತ್ತು ನಾಜೂಕು ಹಾಗೇ ಭಾವುಕ ಕೂಡ. ಅಪ್ಪನಿಂದ ಮಗ ಬಹಳಷ್ಟನ್ನು ನಿರೀಕ್ಷಿಸುತ್ತಾನೆ. ಹೀಗಾಗಿ ಅಪ್ಪ ತನ್ನ ಮಾತು ಹಾಗೂ ಕೃತಿಗಳ ಮೂಲಕ ಈ ಅಂಶಗಳನ್ನು ಮಗನ ಮನಸ್ಸಿಗೆ ದಾಟಿಸಬೇಕಂತೆ.

1. ನಿನ್ನ ಜೀವನದಲ್ಲಿ ಎಲ್ಲವೂ ನೀನು ನಿರೀಕ್ಷಿಸಿದಂತೆ ನಡೆಯುವುದಿಲ್ಲ. ಅದಕ್ಕಾಗಿಯೇ ನಿರೀಕ್ಷೆಗಳನ್ನು ಬಿಟ್ಟು ಜೀವನದ ಹರಿವಿನೊಂದಿಗೆ ಹೋಗಬೇಕು.

2. ನೀನು ಯಶಸ್ವಿಯಾಗಲು ಬಯಸಿದರೆ, ಒಂದು ನಿಯಮವನ್ನು ಗೌರವಿಸಬೇಕು - ಎಂದಿಗೂ ನಿನಗೆ ನೀನು ಸುಳ್ಳು ಹೇಳಿಕೊಳ್ಳಬೇಡ.

3. ನಿನ್ನ ಗುರಿಗಳನ್ನು ಬೆನ್ನಟ್ಟು, ಜನರನ್ನು ಅಲ್ಲ. ನಿನ್ನ ಮೊದಲಿನ 20 ವರ್ಷಗಳು ಸ್ವಾರ್ಥಿಯಾಗಿರು. ನಿನ್ನನ್ನು ನೀನು ನಿರ್ಮಿಸಿಕೊಂಡು, ಏನೇ ಆದರೂ ಮೊದಲು ನಿನ್ನನ್ನು ಆಯ್ಕೆ ಮಾಡಿಕೋ.

4. ನಿನ್ನ ಮಾತುಗಳು ಮೌನಕ್ಕಿಂತ ಹೆಚ್ಚು ಸುಂದರವಾಗಿದ್ದಾಗ ಮಾತ್ರ ಮಾತನಾಡು. ನಿರ್ಲಿಪ್ತತೆಯೇ ಶಕ್ತಿ. ನಿನಗೆ ಖುಷಿ ತರದ ಯಾವುದನ್ನೂ ಮಾಡಬೇಡ.

5. ನಿನ್ನ ಲುಕ್‌ನಲ್ಲಿ ಹೂಡಿಕೆ ಮಾಡು. ನೀನು ಚೆನ್ನಾಗಿ ಕಾಣುವಾಗ ಒಳ್ಳೆಯವನಾಗಿರುತ್ತೀಯಾ. ಚೆನ್ನಾಗಿ ಡ್ರೆಸ್ಸಿಂಗ್ ಮಾಡಿಕೋ.

6. ಕೆಲವು ಜನರು ನಿನ್ನಿಂದ ತಪ್ಪಾಗುವುದನ್ನು ನೋಡಲು ಬಯಸುತ್ತಾರೆ. ಏಕೆಂದರೆ ಅವರಲ್ಲಿ ಯಾವುದೂ ಸರಿ ಇರುವುದಿಲ್ಲ. ಅಂಥವರಿಗೆ ಗಮನ ಕೊಡಬೇಡ.

7. ಸದಾ ಒಳ್ಳೆಯ, ಸಜ್ಜನ ವ್ಯಕ್ತಿಯಾಗಿರುವುದು ಒಳ್ಳೆಯದಲ್ಲ. ಜನ ನಿನ್ನನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ.

8. ಅನುಪಯುಕ್ತ ಜನರನ್ನು ಕಳೆದುಕೊಳ್ಳಲು ಭಯಪಡಬೇಡ. ನಿನ್ನ ಸುತ್ತಲಿನ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ.

9. ನಿನ್ನ ಮುಂದಿನ ನಡೆಯನ್ನು ಖಾಸಗಿಯಾಗಿ ಇಟ್ಟುಕೊ. ಅಕಾಲಿಕ ಪ್ರಕಟಣೆಗಳು ದುಷ್ಟಶಕ್ತಿಗಳನ್ನು ಆಕರ್ಷಿಸುತ್ತವೆ. ನೀನು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಜನರಿಗೆ ಹೇಳುವುದನ್ನು ನಿಲ್ಲಿಸುವುದು.

10. ನೀನು ಸಂಸಾರಕ್ಕೆ ಸಿದ್ಧನಾಗಿದ್ದರೆ ಮಾತ್ರ ಮದುವೆಯಾಗು, ನೀನು ಒಂಟಿಯಾಗಿರುವೆ ಅನಿಸಿದಾಗ ಅಲ್ಲ.

11. ಆಲೋಚನೆಗಳು ತುಂಬಾ ಶಕ್ತಿಯುತ. ಅವುಗಳನ್ನು ಯಾವಾಗಲೂ ಸಕಾರಾತ್ಮಕವಾಗಿರಿಸಿಕೊಳ್ಳಿ. ನಕಾರಾತ್ಮಕ ಯೋಚನೆಗಳು ಶಕ್ತಿಯನ್ನು ಹೀರುತ್ತವೆ.

12. ನಿಮ್ಮನ್ನು ನೋಯಿಸುವವರನ್ನು ನೀವು ಪ್ರೀತಿಸಬೇಕಿಲ್ಲ. ನೀವೇ ನಿಮ್ಮ ಸ್ವಂತ ಆತ್ಮೀಯ ಸ್ನೇಹಿತ. ನಿಮ್ಮನ್ನು ನೀವು ಪ್ರೀತಿಸಲು ಅಂಜಬೇಕಿಲ್ಲ. ಎಂದಿಗೂ ನಿಮ್ಮನ್ನು ಕೆಳಮಟ್ಟಕ್ಕೆ ಇಳಿಸಿಕೊಳ್ಳಬೇಡಿ.

13. ಕೆಲವೊಮ್ಮೆ ನೀನು ಇನ್ನೂ ಮೂರ್ಖನಾಗಿದ್ದೀಯಾ ಎಂದು ಪರಿಶೀಲಿಸಲು ಜನ ನಿನ್ನ ಬೀಗೆ ಬರುತ್ತಾರೆ. ಅಂಥವರನ್ನು ಎಂಟರ್‌ಟೇನ್‌ ಮಾಡಬೇಡ.

14. ನೀನು ಯಾರು ಜೊತೆ ಊಟ ಮಾಡಬಾರದು ಎಂದು ನೀನು ಬೇಗನೆ ಕಂಡುಕೊಂಡಷ್ಟೂ, ನಿನ್ನ ಊಟವು ಹೆಚ್ಚು ಆರೋಗ್ಯಯುತ, ಶಾಂತಿಯುತವಾಗಿರುತ್ತದೆ.

15. ನೀನು ಓಡಲು ಬಯಸಿದರೆ, ಮೊದಲು ನಡೆಯಲು ಕಲಿಯಬೇಕು. ಹೌದು, ಕನಸುಗಳು ದೊಡ್ಡದಾಗಿರುತ್ತವೆ. ಆದರೆ ನೀನು ಮೊದಲು ಪ್ರಾರಂಭಿಸಬೇಕು. ಸಣ್ಣದಾಗಿ ಪ್ರಾರಂಭಿಸು, ಸ್ಥಿರವಾಗಿ ನಡೆಸು.

16. ಬೇರೆಯವರಿಗೆ ಹಣ ಖರ್ಚು ಮಾಡುವ ಮೊದಲು, ನಿನ್ನ ಕುಟುಂಬದ ಸ್ಥಿತಿ ಉತ್ತಮವಾಗಿದೆಯಾ ಎಂದು ಖಚಿತಪಡಿಸಿಕೊ.

17. ಸುಲಭವಾಗಿ ಬರುವಂಥದ್ದು ಶಾಶ್ವತವಲ್ಲ. ದೀರ್ಘಕಾಲ ಉಳಿಯುವಂಥದ್ದು ಸುಲಭವಾಗಿ ಬರುವುದಿಲ್ಲ.

18. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುವ ಜನರಿಗೆ ಸುಳ್ಳು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ.

19. ಮೋಸ ಮಾಡುವ ಪಾಲುದಾರರನ್ನು ಕ್ಷಮಿಸಬೇಡ. ಅದರಿಂದ ಒಂದು ದಿನ ಸರ್ವನಾಶ ಕಟ್ಟಿಟ್ಟ ಬುತ್ತಿ.

20. ಕೆಲವರನ್ನು ಮಧ್ಯದಲ್ಲೇ ಬಿಟ್ಟುಬಿಟ್ಟದ್ದಕ್ಕೆ ಮುಂದೆ ಎಂದೂ ವಿಷಾದಪಡಬೇಡ. ಅವರು ಎಷ್ಟೇ ಎತ್ತರಕ್ಕೆ ಏರಿದ್ದರೂ ಅದಕ್ಕಾಗಿ ಕೊರಗಬೇಡ.

21. ಗೆಳೆಯರ ಒತ್ತಡವನ್ನು ತಪ್ಪಿಸು. ಮಹಿಳೆಯರನ್ನು ನಿಂದಿಸಬೇಡ. ಅವರನ್ನು ಗೌರವಿಸು, ಆ ಮೂಲಕ ನಿನ್ನನ್ನೂ ಗೌರವಿಸಿಕೊ.

22. ನಿನ್ನ ಕೆಲಸದ ಸ್ಥಳದಲ್ಲಿ ಎಲ್ಲರೂ ನಿನ್ನ ಸ್ನೇಹಿತರಲ್ಲ. ನಿನ್ನ ಕೆಲಸ ಮಾಡು, ಸಂಬಳ ಪಡೆ, ಮನೆಗೆ ಬಾ.

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 6 ರಂದು ದ್ವಿಪುಷ್ಕರ ಯೋಗ, 5 ರಾಶಿ ಜನರು ಅದೃಷ್ಟವಂತರು, ಲಾಭ ಡಬಲ್
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ