
ಶನಿಯು ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಇದರಿಂದ ನರೇಂದ್ರ ಮೋದಿ, ಡೊನಲ್ಡ್ ಟ್ರಂಪ್ ಜೀವನದ ಮೇಲೆ ಏನು ಪರಿಣಾಮ ಬೀರುವುದು ಎಂಬುದರ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕುಂಭ ರಾಶಿಗೆ ಶನಿ ಪ್ರವೇಶ ಮಾಡುತ್ತಾನೆ. 2022 ಏಪ್ರಿಲ್ ತಿಂಗಳಿನಿಂದ 2022 ಜುಲೈ ತಿಂಗಳವರೆಗೆ ಮೊದಲ ಹಂತ ಇರುತ್ತದೆ. ಈ ಮಧ್ಯೆ ವಕ್ರಗತಿ ಬಂದು 2023 ಜನವರಿಯಿಂದ 2025 ಮಾರ್ಚ್‌ವರೆಗೆ ಪುನಃ ಕುಂಭ ರಾಶಿಗೆ ಬರುತ್ತಾನೆ. 2025 ಜುಲೈ 12 ರಿಂದ 2025 ನವೆಂಬರ್ 28 ರವರೆಗೆ ಶನಿಯ ವಕ್ರಗತಿ ಕುಂಭದತ್ತ ಮುಖ ಮಾಡಿರುತ್ತದೆ. ಶನಿಯು ಯಾವುದೇ ಒಂದು ರಾಶಿಯಲ್ಲಿ 17° ಕ್ರಮಿಸುವ ವರೆಗೆ ಹಿಂದಿನ ರಾಶಿಯ ಫಲವನ್ನೂ ಕೊಡುತ್ತಾನೆ ಏಕೆಂದರೆ ಚಂದ್ರ ,ಬುಧ, ಕುಜ, ಗುರು, ಶುಕ್ರರಿಗಿಂತ ದೊಡ್ಡ ಗ್ರಹ ಶನಿ ಆಗಿದೆ. ಇನ್ನೊಂಡೆ ಭೂ ಚಕ್ರವು ಒಂದು ಕಾಲ್ಪನಿಕ ಪತಗಳ ರಾಶಿ. ನಾವು ಸಾಮಾನ್ಯವಾಗಿ ಚಂದ್ರರಾಶಿಯಿಂದ ಗಣನೆ ಮಾಡುತ್ತೇವೆ. ಆದರೆ ಶನಿಯ ಕೆಲವೊಂದು ಅಂಶಗಳನ್ನು ಯಾವ ರಾಶಿಯಿಂದ ಗಣನೆ ಮಾಡುತ್ತೇವೆಯೋ ಆ ರಾಶಿಯಲ್ಲಿದ್ದ ಚಂದ್ರ, ಲಗ್ನದ ಅಂಶದಿಂದ ಗಣನೆ ಮಾಡಬೇಕಾಗಿ ಬರುವುದು. ಉದಾಹರಣೆಗೆ ಕರ್ಕದಲ್ಲಿ ಚಂದ್ರನು 10° ಕ್ರಮಿಸಿದ್ದರೆ ಅಲ್ಲಿಂದಲೇ ಗ್ರಹರ ಗಣನೆ ಮಾಡಬೇಕು. ಇದು ಲಗ್ನಕ್ಕೂ ಕೂಡ ಅನ್ವಯ ಆಗುವುದು. ಇದರಲ್ಲಿ ಶನಿಯದ್ದು ಇನ್ನೊಂದು ವಿಶೇಷವೂ ಇದೆ. ಶನಿಯನ್ನು ಶನಿಯಿಂದಲೇ ಗಣನೆ ಮಾಡಬೇಕು. ಇಲ್ಲೂ ಎಷ್ಟು ಕ್ರಮಿಸಿದ್ದಾನೋ ಅಲ್ಲಿಂದಲೇ ನೋಡಬೇಕು. ಇದು ಗೋಚರ ಫಲ ನಿರ್ಣಯದ ಸ್ವರೂಪ, ವಿಧಾನ.
ಸ್ವಾತಂತ್ರ್ಯ ಸಿಕ್ಕಾಗ ಶನಿಯು ಕರ್ಕದಲ್ಲಿ 22° ಗೋಚರದಲ್ಲಿ ಅಷ್ಟಮ ಕುಂಭ ದಾಟಿದರೂ ಈಗ ಮತ್ತೆ ಕುಂಭಕ್ಕೆ ಅಷ್ಟಮ. ಸಮಗತಿಗೆ ಬಂದರೂ ಕೂಡ ಮೀನದಲ್ಲಿ 22° ವರೆಗೆ ಮಂದಾಷ್ಟಮವೇ ಆಗುತ್ತದೆ. 2027 ಜನವರಿವರೆಗೆ ಕರ್ಕದ ಅಷ್ಟಮ ಶನಿಗೆ ಗೋಚರದ ಅಷ್ಟಮ ಶನಿಯ ಫಲ ಇದ್ದೇ ಇರುತ್ತದೆ. ಕುಂಭ ದಾಟಿಬಿಟ್ಟ ಎನ್ನುವ ಹಾಗಿಲ್ಲ. ಇದು ಕರ್ಕದ 22° ಶನಿಯ ಸ್ಥಿತಿಗೆ ಆಗುವುದು.
ಅಮೆರಿಕ ಅಧ್ಯಕ್ಷ ಟ್ರಂಪ್‌ಗೂ ಕರ್ಕ ಶನಿ.(0°.ಬುದ್ದಿ ಹೀನ) ಕುಂಭದಲ್ಲಿ ಇರುವಾಗ ಮರಣ ಸಮಾನ ಯೋಗ ಬರುವುದು (ಗುಂಡು ಹಾರಾಟ ಆಗುವುದು). ಮೀನಕ್ಕೆ ಹೋದಾಗ ಅಧ್ಯಕ್ಷನೂ ಆಗಿದ್ದರು. ಮತ್ತೆ ವಕ್ರನಾದಾಗ ಅಧಿಕ ಪ್ರಸಂಗೀತನ ಶುರುವಾಗಿದ್ದು, ಅದನ್ನೀಗ ಕಾಣಬಹುದು.
ಮತ್ತೊಬ್ಬರು ಕರ್ಕ ಲಗ್ನ ಜಾತರಾಗಿದ್ದು, ಮತಕಳ್ಳತನದ ಅಭಿಯಾನ ಆರಂಭಿಸಿ ಸೋತರು. ಇದು ಶನಿಯ ವಕ್ರತ್ವದ ಫಲವಾಗಿದೆ. ಇನ್ನು ಸಮಗತಿಗೆ ಬಂದಾಗ ನನಗೇನೂ ಆಗೋದಿಲ್ಲ. ನಾನು ಸರಿಯಾಗಿಯೇ ಇದ್ದೇನೆ ಎನ್ನುವವರನ್ನೂ ಬೀಳಿಸುತ್ತಾನೆ ಶನಿ. ಸಿಂಹಸ್ತ ಶನಿ ಇರುವಾಗ ಜನಿಸಿದವರಿಗೆ ತೊಂದರೆ ಆಗುವುದು. ಹಾಗೆ ನೋಡಿದರೆ ಮೋದಿಯವರಿಗೂ ಸಿಂಹಸ್ತ ಶನಿಯೆ ಆಗಿದೆ. ಅವರಿಗೂ ಅಪವಾದ ಹಿಂಸೆ ಆಗುವುದು. ಆದರೆ ಏನೇ ತೊಂದರೆಗಳಾದರೂ ಅದನ್ನು ತೊಂದರೆ, ನಷ್ಟ, ಸಮಸ್ಯೆ, ಕಷ್ಟ ಎಂದು ಹೇಳಬೇಕಾದರೆ ಅದನ್ನು ನಿಭಾಯಿಸುವುದು ಎನ್ನೋದರ ಮೇಲೆ ಇರುವುದು. ಯಾರಿಗೆ ಗುರು ಬಲ ಇದೆಯೋ, ಬಲಿಷ್ಟ ಶನಿ ಇರುತ್ತದೆಯೋ ಅವರ ಕೀರ್ತಿ ಹೆಚ್ಚಾಗಲು ಅಪವಾದವೂ ಬೇಕು. ಯಾರಿಗೆ ದುರ್ಬಲವೋ ಅವರಿಗೆ ಅಪವಾದಗಳಾಗಲೀ, ಕೀರ್ತಿಯಾಗಲೀ ಮಾರಕವೇ ಆಗಿರುವುದು.