ವಾರ ಭವಿಷ್ಯ: ಉದ್ಯೋಗದಲ್ಲಿ ಸೋಲಿನ ಭೀತಿ ಆವರಿಸಬಹುದು, ಶತ್ರು ಮಣಿಸಿದರೆ ಜಯ ಗ್ಯಾರೆಂಟಿ

By Suvarna News  |  First Published Mar 28, 2021, 8:29 AM IST

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ


ಮೇಷ: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಪರಿಸ್ಥಿತಿಯಲ್ಲಿ ತುಸು ಚೇತರಿಕೆ ಇದೆ. ವಾರದ ಮಧ್ಯಭಾಗದಿಂದ ಆರ್ಥಿಕ ಚೈತನ್ಯವೂ ಸಿಗುತ್ತದೆ. ನಿಮ್ಮ ಚಿಂತೆಗಳಿಗೆಲ್ಲ ಪರಿಹಾರ ಕಂಡುಕೊಳ್ಳುವುದರಲ್ಲಿ ಸಫಲರಾಗುವಿರಿ.ಛಲ, ಹಠ, ಕಷ್ಟದಲ್ಲೂ ಜಿಗಿದೇಳುವ ಗುಣ ನಿಮ್ಮನ್ನು ಕಾಯಲಿ.

ವೃಷಭ: ಹಿಂದಿನ ನೋವುಗಳಿಂದ ತುಸು ಚೇತರಿಕೆ ಸಿಗಬಹುದು. ಕಷ್ಟಕಾಲಗಳೆಲ್ಲ ಕಳೆದವು, ಇನ್ನು ನೆಮ್ಮದಿಯಿಂದಿರಿ. ಗೆಳೆಯರ ಸಹಾಯಕ್ಕೆ ಧಾವಿಸುವ ನಿಮನ್ನು ಮಿತ್ರರು ಕೈ ಹಿಡಿದು ದಡ ಸೇರಿಸುತ್ತಾರೆ. ಆದರೂ ವಾಹನ ಚಲಾಯಿಸುವ ಸಂದರ್ಭ, ದೂರ ಪ್ರಯಾಣದ ಸಂದರ್ಭ ಎಚ್ಚರಿಕೆ ಇರಲಿ.

Tap to resize

Latest Videos

undefined

ಮಿಥುನ: ಹೊಸ ಅವಕಾಶ ಕಣ್ಮುಂದಿದೆ. ಆದರೆ ನೀವು ಅದರತ್ತ ಗಮನ ಹರಿಸುತ್ತಿಲ್ಲ. ಒದ್ದಾಟ, ನೋವು ಇದ್ದದ್ದೇ. ಅದನ್ನು ಪಕ್ಕಕ್ಕೆ ಸರಿಸಿ ಹೊಸ ಯೋಚನೆ, ಯೋಜನೆಗಳ ಕಾರ್ಯರೂಪಕ್ಕೆ ಪ್ರಯತ್ನಿಸಿ. ಬೇರೆಯವರ ಮಾತಿಗೆ ಗಮನಕೊಡಿ. ಅವರ ಅನುಭವ, ಕಾಳಜಿ ನಿಮ್ಮ ಸಹಾಯಕ್ಕೆ ಬರಬಹುದು.

ಕಟಕ: ಶರಣಾಗತಿಯಿಂದ ಕೆಲಸಗಳು ಹೇಗೆ ಸಲೀಸಾಗಿ ಆಗುತ್ತವೆ ಅನ್ನೋದು ನಿಮಗೇ ಅಚ್ಚರಿ ತರಬಹುದು. ಆದರೂ ಉದ್ಯೋಗದಲ್ಲಿ ಸೋಲಿನ ಭೀತಿ ಆವರಿಸಬಹುದು. ನಿಮ್ಮಲ್ಲಿ ಸ್ಕಿಲ್ ಇದೆ. ಬುದ್ಧಿಗೇಡಿ ಆತುರವೂ ಇದೆ. ಇದೇ ನಿಮ್ಮ ಶತ್ರು. ಈ ಶತ್ರುವನ್ನು ಮಣಿಸಿದರೆ ಜಯ ಗ್ಯಾರೆಂಟಿ.

ಸಿಂಹ: ಕೆಲಸದ ಜಾಗದಲ್ಲಿ ಕೆಲವರು ಪದೇ ಪದೇ ಕೇಳುವ ಪ್ರಶ್ನೆಗಳು ಕಿರಿಕಿರಿ ಉಂಟು ಮಾಡಬಹುದು. ನೀವು ಕಷ್ಟಪಟ್ಟು ಮಾಡಿದ ಕೆಲಸದ ಕ್ರೆಡಿಟ್ ಇನ್ನೊಬ್ಬರಿಗೆ ಹೋಗಬಹುದು. ಹುಷಾರಾಗಿರಿ. ಸಾಹಸಿ ಕಾರ್ಯಗಳ, ದೂರ ಪ್ರಯಾಣದ ನಿಮ್ಮ ಕನಸು ಈ ವಾರ ನನಸಾಗಬಹುದು.

ಕನ್ಯಾ: ನೀವು ಮಾಡಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಪ್ರಸಂಗ ಬರಬಹುದು. ಮನಸ್ಥಿತಿ ಹದಗೆಡಬಹುದು. ಸಾಧ್ಯವಾದರೆ ನೀವು ಮುಗ್ಧರು ಎಂಬುವುದನ್ನು ಪ್ರೂವ್ ಮಾಡಿ. ಅನವಶ್ಯಕ ಹಠ, ಅಹಂ ಬೇಡ. ಕೆಲಸದಲ್ಲಿ ಪದೇ ಪದೇ ವಿಳಂಬ ಮಾಡುತ್ತೀರಿ, ಇದು ಒಳ್ಳೆಯದಲ್ಲ.

ತುಲಾ: ಅಹಂನಿಂದ ಇನ್ನೊಬ್ಬರನ್ನು ಗೆಲ್ಲುತ್ತೀನಿ ಎನ್ನುವುದನ್ನು ಬಿಟ್ಟು ಪ್ರೀತಿ ವಿಶ್ವಾಸದಿಂದ ಗೆಲ್ಲುತ್ತೀನೆಂದು ಮುಂದೆ ಸಾಗಿ. ಅಹಂ ಎಂಬುದು ನಿಮ್ಮನ್ನು ಸುಟ್ಟು ಹಾಕುತ್ತದಾದರೆ, ವಿಶ್ವಾಸದಿಂದ ಗೆದ್ದರೆ ಎರಡು ಜೀವದ ಜೊತೆಗೆ ಮತ್ತಷ್ಟು ಜೀವಗಳು ಮೆಚ್ಚಿ ನಿಮ್ಮ ಜೊತೆಯಾಗುತ್ತವೆ.

ಏಪ್ರಿಲ್‌ ತಿಂಗಳಲ್ಲಿ ಹುಟ್ಟಿದೋರು ಹೀಗಿರ್ತಾರೆ ನೋಡಿ!

ವೃಶ್ಚಿಕ: ಜೀವನದ ಪ್ರತಿ ಕ್ಷಣವೂ ಒಂದು ಪರೀಕ್ಷೆಯಂತೆ. ಅದನ್ನು ಎದುರಿಸಲು ಹೇಗೆ ತಯಾರಾಗಬೇಕು ಎನ್ನುವುದು ಮನಸ್ಸಿಗೆ ಬಿಟ್ಟಿದ್ದು. ಅದರಿಂದ ಬಂದ ರಿಸಲ್ಟ ಹೇಗಿದ್ದರೂ ಅದನ್ನು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿ. ಆದಷ್ಟು ಪುಸ್ತಕ ಓದಿ, ಮನಸ್ಸಿನ ದುಗುಡ, ಗೊಂದಲಗಳನ್ನು ಅಳಿಸಿಬಿಡಿ. ದೂರ ಪ್ರಯಾಣ ಸಾಧ್ಯತೆ.

ಧನುಸ್ಸು: ಸಂಬಂಧಗಳಲ್ಲಿ ಹಣಕಾಸಿನ ವ್ಯವಹಾರ ಹೆಚ್ಚಾದರೆ ಒಡಕು ಮೂಡಲು ಕಾರಣವಾಗಬಹುದು. ಸಹಾಯವೂ ಎಷ್ಟು ಬೇಕೋ ಅಷ್ಟಿದ್ದರೆ ಒಳ್ಳೆಯದು. ಸಹೋದರರೆಲ್ಲರೂ ಮನೆಯಲ್ಲಿ ಒಟ್ಟಿಗೆ ಸೇರಿವುದರಿಂದ ಸಂಭ್ರಮ ನೆಲೆಸಲಿದೆ.

ಮಕರ: ಅಗತ್ಯ ಎನಿಸಿದ ವಿಚಾರದ ಕಡೆ ಮಾತ್ರ ಗಮನ ಕೊಡಿ. ಅನಾವಶ್ಯಕವಾಗಿ ಯಾರ ವಿಷಯದಲ್ಲೂ ತಲೆಹಾಕಬೇಡಿ. ಇಬ್ಬರ ನಡುವೆ ಮೂರನೇಯವರು ಸಮಸ್ಯೆ ಸರಿ ಮಾಡಲು ಹೋದರೆ ನಿಷ್ಟೂರವಾಗುವುದು ಮೂರನೇಯವರೆಂದು ನೆನಪಿರಲಿ.

ಕುಂಭ: ಸಣ್ಣ ಕೆಲಸಗಳಲ್ಲೂ ಖುಷಿ ಇರುತ್ತದೆ. ಅದನ್ನು ನಾವೇ ಹೆಕ್ಕಿ ಹುಡುಕಬೇಕಷ್ಟೆ. ಇರುವುದರಲ್ಲಿ ತೃಪ್ತಿ ಪಡಿ. ಹೆಚ್ಚಿನ ಆಸೆ ಇಲ್ಲಸಲ್ಲದ ಅಹಂಕಾರಕ್ಕೆ ದಾರಿ ಮಾಡಿಕೊಡುತ್ತದೆ. ಕಷ್ಟ ಬಂದಾಗ ವೆಂಕಟರಮಣ ಎನ್ನುವುದಕ್ಕಿಂತ, ಮುಂದಿನ ದಿನಗಳ ಯೋಚನೆ ಈಗಿನಿಂದಲೇ ಇರಲಿ. ಬಂಧುಗಳ ಆಗಮನ ಸಾಧ್ಯತೆ

ಮೀನ: ಮನೆಯ ಶುಭ ಸಂದರ್ಭಗಳಲ್ಲಿ ಮನಸ್ಸಿನಿಂದ ತೊಡಗಿಕೊಳ್ಳಲಿದ್ದೀರಿ. ಇದರಿಂದ ಮನೆಯವರಿಗೆ ನಿಮ್ಮ ಮೇಲೆ ಗೌರವ ಹೆಚ್ಚಿಸಲಿದೆ. ಎಲ್ಲರಿಂದ ಮೆಚ್ಚುಗೆಯ ಮಾತುಗಳು ಸಿಗಲಿದೆ. ಸಂತೋಷ ಮನೆಮಾಡಲಿದೆ. ಸಿಹಿ ಸುದ್ದಿ ಕೇಳುವಿರಿ.
 

click me!