ವಾರ ಭವಿಷ್ಯ: ಈ ರಾಶಿಯವರ ಖರ್ಚಿನಲ್ಲಿ ಏರುಪೇರಾಗುವ ಸಾಧ್ಯತೆ

By Suvarna News  |  First Published Apr 4, 2021, 8:22 AM IST

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ


ಮೇಷ: ದೂರದಲ್ಲಿರುವ ಮಕ್ಕಳು ಮನೆಗೆ ಬರಲಿದ್ದಾರೆ. ಪುರೋಹಿತರ ಆದಾಯದಲ್ಲಿ ಇಳಿಕೆ. ರೈತರಿಗೆ ಉತ್ತಮ ಮಳೆಯಿಂದ ಅನುಕೂಲವಾಗಲಿದೆ. ಮಾತಿನಲ್ಲಿ ಸ್ಪಷ್ಟತೆ ಇರಲಿ. ಹಿರಿಯರ ಮಾತಿಗೆ ಗೌರವ ನೀಡಿ.ಅದರ ಜೊತೆಗೆ ನಿಮ್ಮ ನಿರ್ಧಾರವನ್ನೂ ಗಟ್ಟಿ ಮಾಡಿಕೊಳ್ಳುವುದು ಸೂಕ್ತ. ಸ್ನೇಹಿತರ ವಲಯದಿಂದ ಪ್ರಶಂಸೆ ಸಿಗಲಿದೆ

ವೃಷಭ: ಆಸಕ್ತಿಯ ಕ್ಷೇತ್ರಗಳಲ್ಲಿ ಪ್ರಗತಿ ದೊರೆಯಲಿದೆ. ಯುವಕರಿಗೆ ಉದ್ಯೋಗ ದೊರೆಯಲಿದೆ. ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ತಂದೆ ತಾಯಿಯ ಸಲಹೆ ಪಡೆಯಿರಿ. ಈ ವಾರ ಸಕಾರಾತ್ಮಕವಾಗಿರುವಿರಿ. ಆಟೋಟಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮನೆಗೆ ಹೊಸ ಅತಿಥಿಗಳ ಆಗಮನ. ಸೂಕ್ತ ನಿರ್ಧಾರಗಳಿಂದ ಅಧಿಕ ಲಾಭ.

Tap to resize

Latest Videos

undefined

ಮಿಥುನ: ಶಿಕ್ಷಕರಿಗೆ ಶುಭ ಸುದ್ದಿ ತಿಳಿಯಲಿದೆ. ವಿವಿಧ ಕ್ಷೇತ್ರದ ಗಣ್ಯರನ್ನು ಭೇಟಿ ಮಾಡುವ ಅವಕಾಶ. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣಿ. ಒಮ್ಮೆ ತೆಗೆದುಕೊಂಡ ನಿರ್ಧಾರದಿಂದ ಮತ್ತೆ ಹಿಂದೆ ಸರಿಯುವುದು ಬೇಡ. ಆಹಾರ ಸೇವನೆಯಲ್ಲಿ ಮಿತಿ ಇರಲಿ. ಹೆಚ್ಚಿನ ಕೆಲಸದ ಒತ್ತಡ. ಆರೋಗ್ಯದಲ್ಲಿ ಸ್ಥಿರತೆ ಏರ್ಪಡಲಿದೆ.

ಕಟಕ : ವೈದ್ಯರ ಸಲಹೆಯನ್ನು ಸರಿಯಾಗಿ ಪಾಲನೆ ಮಾಡಿ.ವ್ಯಾಪಾರಿಗಳಿಗೆ ಕೊಂಚ ನಷ್ಟ. ನಗರ ವಾಸಿಗಳಿಗೆ ಹೊಸ ಉದ್ಯೋಗಾವಕಾಶಗಳ ಬಾಗಿಲು ತೆರೆಯಲಿದೆ. ಆಷಾಢ ಮಾಸ ಮುಗಿದ ನಂತರ ಮದುವೆ ಯೋಗ, ಮೆಚ್ಚಿದ ಸಂಗಾತಿಯೊಂದಿಗೆ ಬಾಳುವೆ. ಕಣ್ಣಿನ ಆರೋಗ್ಯದಲ್ಲಿ ಕೊಂಚ ವ್ಯತ್ಯಯ ಉಂಟಾಗಲಿದೆ.

ಸಿಂಹ: ತಮ್ಮನೊಂದಿಗೆ ಹಣಕಾಸಿನ ವಿಚಾರದಲ್ಲಿ ಗೊಂದಲ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ದೂರದ ಬಂಧುಗಳು ಹತ್ತಿರವಾಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಹೆಚ್ಚಾಗಲಿವೆ. ಖರ್ಚಿನಲ್ಲಿ ಏರುಪೇರು. ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ಶೀಘ್ರ ಪ್ರಗತಿ.

ಜೆ ಅಕ್ಷರದಿಂದ ಶುರುವಾಗೋ ಹೆಸರಿನವರು ಗುಪ್ತ್‌ ಗುಪ್ತ್‌!

ಕನ್ಯಾ: ಆರೋಗ್ಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಹಿರಿಯರ ಆಶೀರ್ವಾದದಿಂದ ಪ್ರಗತಿ. ಬಂಧು ಬಳಗವೆಲ್ಲಾ ಒಟ್ಟಿಗೆ ಸೇರುವುದು. ಸಂತಸಕ್ಕೆ ಸಾಕಷ್ಟು ಕಾರಣಗಳು ಸಿಕ್ಕಲಿವೆ. ಬದ್ಧತೆಯಿಂದ ಮಾಡುವ ಕೆಲಸದಿಂದ ಹೆಚ್ಚು ಪ್ರಸಿದ್ಧಿ ಹೊಂದು ವಿರಿ. ಮಾತಿನ ಮೇಲೆ ಹೆಚ್ಚು ಹಿಡಿತವಿರಲಿ. ನೆಮ್ಮದಿಯು ಹೆಚ್ಚಾಗಲಿದೆ.

ತುಲಾ: ಸ್ನೇಹಿತರ ಜೊತೆಗೂಡಿ ಒಳ್ಳೆಯ ಕೆಲಸಕ್ಕೆ ಮುಂದಾಗುವಿರಿ. ನಿಮ್ಮಿಂದ ಇನ್ನೊಬ್ಬರ ಜೀವನದಲ್ಲಿ ಸಂತಸ ಮೂಡಲಿದೆ. ಕಂಕಣ ಭಾಗ್ಯ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಅಧ್ಯಾತ್ಮದಲ್ಲಿ ಹೆಚ್ಚು ಒಲವು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಮಕ್ಕಳಿಂದ ನೆಮ್ಮದಿ ನೆಲೆಸಲಿದೆ.

ವೃಶ್ಚಿಕ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕು. ಹಿರಿಯರ ಮಾರ್ಗದರ್ಶನ ಸಿಗಲಿದ್ದು, ಈ ವಾರ ನೀವು ಅಂದುಕೊಂಡ ಕೆಲಸಗಳು ಸೂಸೂತ್ರವಾಗಿ ನೆರವೇರಲಿವೆ. ಮನಸ್ಸಿನಲ್ಲಿ ಗೊಂದಲ. ಮಹಿಳೆಯರಿಗೆ ಉತ್ತಮ ಲಾಭ ಸಿಗಲಿದೆ.

ಧನಸ್ಸು: ಯಾವುದೇ ಗೊಂದಲಕ್ಕೆ ಒಳಗಾಗದೇ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸಿ. ಮಾತಿಗೆ ಕಡಿವಾಣ ಹಾಕಬೇಕು. ಆದಾಯದಲ್ಲಿ ಏರಿಕೆ. ಖರ್ಚುಗಳ ಮೇಲೆ ಹಿಡಿತ ಸಾಧಿಸಿದರೆ ಒಳ್ಳೆಯದು. ಅವಕಾಶಗಳು ಹೆಚ್ಚಾಗಲಿವೆ. ತಾಳ್ಮೆಯಿಂದ ಮುಂದೆ ಸಾಗಿ.

ಮಕರ: ಪ್ರೀತಿ ಪಾತ್ರರ ಆಗಮನದಿಂದ ಮನೆಯಲ್ಲಿ ಸಂತೋಷ ನೆಲೆಸಲಿದೆ. ಸ್ನೇಹಿತರೊಂದಿಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳದಿರಿ. ದೂರ ಪ್ರಯಾಣ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪೋಷಕರ ಸಲಹೆ, ಸಹಕಾರ ಅಗತ್ಯವಾಗಲಿದೆ.

ಕುಂಭ: ಸಣ್ಣ ವಿಚಾರಗಳಿಂದ ಮನೆಯಲ್ಲಿ ಗೊಂದಲ ಎದುರಾಗಬಹುದು. ಆದಷ್ಟು ತಾಳ್ಮೆ ಕಂಡುಕೊಳ್ಳಿ. ನಿಮ್ಮ ನೇರ ಮಾತುಗಳೇ ನಿಮಗೆ ಮುಳುವಾಗಬಹುದು. ಮಹಿಳೆಯರಿಂದ ಮನೆ ನಿರ್ವಹಣೆ ಈ ವಾರ ಉತ್ತಮವಾಗಿ ನಡೆಯಲಿದೆ. ಹಿರಿಯರೊಂದಿಗೆ ದೇವಸ್ಥಾನ ಭೇಟಿ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಮೀನ: ನಿಮ್ಮದಲ್ಲದ ತಪ್ಪಿಗೆ ನೀವು ಹೊಣೆರರಾಗಲಿದ್ದೀರಿ. ವಾರಾಂತ್ಯದಲ್ಲಿ ಎಲ್ಲವೂ ಸರಿಯಾಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಲಿದ್ದು, ಹೆಚ್ಚು ನೀರು ಕುಡಿಯಿರಿ. ಹೊಸ ಕೆಲಸಗಳು ಬಂದಾಗ ಅದನ್ನು ತಿರಸ್ಕರಿಸದಿರಿ. ಹಿರಿಯರ ಸಲಹೆ ನಿಮಗೆ ಮಾರ್ಗದರ್ಶನ ತೋರಲಿದೆ. ಜಯ ಸುಲಭಕ್ಕೆ ಸಿಗದು.
 

click me!