ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಅನುಕೂಲವಿದೆ?

Published : Apr 28, 2019, 07:25 AM IST
ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಅನುಕೂಲವಿದೆ?

ಸಾರಾಂಶ

ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಅನುಕೂಲವಿದೆ?

ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಅನುಕೂಲವಿದೆ?

ಮೇಷ : ಕತ್ತಿ ಅಲುಗಿನ ನಡೆಗೆ ಸಿದ್ಧರಾಗಿ. ಸ್ವಲ್ಪ
ಯಾಮಾರಿದರೂ ಕಷ್ಟ. ಕೆಲಸದಿಂದ ಪಲಾಯನ
ಮಾಡಬೇಡಿ. ಎಂಥಾ ಸವಾಲೇ ಆದರೂ
ಎದುರಿಸಿ. ಸಂಸಾರದ ಜವಾಬ್ದಾರಿ ಹೆಚ್ಚಬಹುದು. ಹೆಚ್ಚಿನ
ತಾಳ್ಮೆ ಬೇಕು. ನಿಮ್ಮ ಸ್ವಭಾವದಲ್ಲಿರುವ ಸಿಟ್ಟನ್ನು ಈ ವಾರ
ನಿಯಂತ್ರಿಸಿ. ಜೂನ್ ನಂತರ ಎಲ್ಲ ಒಳ್ಳೆಯದಾಗುತ್ತೆ. 

ವೃಷಭ: ಮೈ ನವಿರೇಳಿಸುವ ಅನುಭವಗಳಿಗೆ ಸಿದ್ಧರಾಗಿ.
ಲೈಫ್‌ಅನ್ನು ತಿರುಗಿ ನೋಡುವ ಸಂದರ್ಭ
ಬರುತ್ತೆ. ಎಲ್ಲ ಬಗೆಯ ಸಂಬಂಧಗಳಲ್ಲೂ
ಹರ್ಷವಿದೆ. ಪ್ರವಾಸ ಹೋಗಲು, ಸಾಹಸದಲ್ಲಿ
ಪಾಲ್ಗೊಳ್ಳುವ ಅವಕಾಶ ಬರುತ್ತೆ. ಓದು, ವೃತ್ತಿಯ
ವಿಷಯಗಳಲ್ಲಿ ಬದಲಾವಣೆ ಆಗಬಹುದು

ಮಿಥುನ : ಹಣದ ವಿಚಾರದಲ್ಲಿ ಕಲಹಗಳಾಗಬಹುದು.
ಆರೋಗ್ಯದಲ್ಲಿ ಒಳಿತಾಗಬಹುದು. ನಿಮ್ಮ
ಫ್ರೆಂಡ್ಲಿ ಗುಣಕ್ಕೆ ಸಾಕಷ್ಟು ಪ್ರಶಂಸೆ ಬರಬಹುದು.
ಆದರೆ ನರಿಯಂಥ ಸ್ವಭಾವದವರು ಎದುರಿನಿಂದ ಚೆನ್ನಾಗಿ
ಮಾತನಾಡಿ ಹಿಂದಿಂದ ಬರೆ ಹಾಕಬಹುದು, ಎಚ್ಚರ.
ಆತ್ಮಸಾಕ್ಷಿಯಂತೆ ನಡೆಯಿರಿ. 

ಕಟಕ : ನಿಮ್ಮೊಳಗೆ ನೀವು ಬಂಧಿಯಾಗಿದ್ದರೆ ಜಗತ್ತನ್ನು
ನೋಡಲಿಕ್ಕಾಗಲ್ಲ. ಚಿಪ್ಪಿನೊಳಗಿಂದ ಹೊರಬನ್ನಿ.
ಈ ಸಂಕುಚಿತತೆ ಬಿಟ್ಟು ದೃಷ್ಟಿವಿಸ್ತರಿಸಿಕೊಂಡಷ್ಟೂ
ನಿಮಗೇ ಲಾಭ. ಗಡಿಬಿಡಿ ಬೇಡ, ಸಾವಧಾನತೆ ಬರಲಿ.
ಸಂಯಮ ಪರೀಕ್ಷೆಯಾಗಬಹುದು, ಹುಷಾರಾಗಿರಿ.
ಹಣವನ್ನು ವೃಥಾ ಪೋಲು ಮಾಡುವುದನ್ನು ನಿಲ್ಲಿಸಿ. 

ಸಿಂಹ : ಆಸ್ತಿ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಇದು ಸಕಾಲ.
ಹಿರಿಯರ ಸಲಹೆ ಪಡೆಯಿರಿ. ಹಳೆಯ
ಗೆಳೆಯರ ಜೊತೆಗೆ ಹೊಸ ಮಿತ್ರರು
ಸಿಗಬಹುದು. ಲೆಕ್ಕಾಚಾರದಲ್ಲಿ ಗೆಳೆತನ ಮಾಡಬೇಡಿ.
ನಿರುದ್ದೇಶದ ಸ್ನೇಹದಿಂದ ಒಳಿತಾಗುತ್ತದೆ. ನಿಮ್ಮೊಳಗಿನ
ಲೀಡರ್‌ಅನ್ನು ಬಡಿದೆಬ್ಬಿಸಿ. 

ಕನ್ಯಾ :ಮನಃಶಾಂತಿ ಬಗ್ಗೆ ಕಾಳಜಿ ಇರಲಿ.
ನೆರೆಹೊರೆಯವರ ಬಗ್ಗೆ, ಕೊಂಕು ತೆಗೆಯುವ
ಸಂಬಂಧಿಕರ ಬಗ್ಗೆ ಹುಷಾರಾಗಿರಿ. ಎಲ್ಲೂ ಅಳತೆ
ತಪ್ಪಿ ಮಾತಾಡಬೇಡಿ. ಅಪರಿಚಿತರಿಂದ ಹಾನಿಯಿದೆ.
ಆಧ್ಯಾತ್ಮದ ಬಗ್ಗೆ ಆಸಕ್ತಿ ಬರಬಹುದು. ಸಂಸಾರದಲ್ಲಿ
ಭಿನ್ನಾಭಿಪ್ರಾಯ ಬಂದರೂ ಬೇಗ ಸರಿಹೋಗುತ್ತದೆ. 

ತುಲಾ :ಶುಕ್ರನ ದೆಸೆಯಿಂದ ಹಣ ಹರಿವು
ಚೆನ್ನಾಗಿರುತ್ತದೆ. ಹಣದ ಜೊತೆಗೆ ಯಶಸ್ಸೂ
ಸಿಗುತ್ತದೆ. ಬುಧ ಹಾಗೂ ಶುಕ್ರರ ದೆಸೆಯಿಂದ
ಅಧಿಕಾರವೂ ಸಿಗಬಹುದು. ಉದ್ಯೋಗದಲ್ಲಿದ್ದವರಿಗೆ
ಭಡ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು.
ಹಾಗಂತ ಯಶಸ್ಸಿನ ಮದ ತಲೆಗೇರಿಸಿಕೊಳ್ಳಬೇಡಿ. 

ವೃಶ್ಚಿಕ : ಆತ್ಮೀಯರು ಜೊತೆಗಿರಬೇಕು ಅಂದರೆ ನೀವು
ನಗುನಗುತ್ತಿರಬೇಕು. ಗುರುಬಲವಿರುವ ಕಾರಣ
ಹೆಸರು ಬರಬಹುದು. ಶನಿಯ ಪ್ರಭಾವ
ಕಡಿಮೆಯಾಗಬಹುದು. ಆದರೂ ಸ್ಪಷ್ಟ ನಿರ್ಧಾರಕ್ಕೆ
ಬರಲು ಸಾಧ್ಯವಾಗದಿರಬಹುದು. ಜೂನ್‌ನಲ್ಲಿ ಒಳಿತಿದೆ.
ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಲಿ. 

ಧನಸ್ಸು : ಇದು ಪರೀಕ್ಷಾ ಕಾಲ. ಜಾಗೃತರಾಗಿರಿ. ಒಂದು
ಹಂತದಲ್ಲಿ ಇನ್ನು ತಡೆದುಕೊಳ್ಳುವುದು ನನ್ನಿಂದ
ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ ಬರಬಹುದು.
ಮೇ೧೦ರ ಬಳಿಕ ಎಲ್ಲ ತಿಳಿಯಾಗುತ್ತದೆ. ಕಷ್ಟಗಳ ದಿನ
ಕಳೆದು ಖುಷಿಯ ದಿನ ಬರುತ್ತದೆ. 

ಮಕರ : ಒಬ್ಬ ಸಮರ್ಥ ಮಾರ್ಗದರ್ಶಿಯನ್ನು
ಹುಡುಕುವ ಸಮಯ. ಅವರಿಂದ ನಿಮ್ಮ
ಮನೋಬಲ ವೃದ್ಧಿಸುತ್ತದೆ. ಆಗಾಗ ಸುಸ್ತು,
ಆಯಾಸ ಕಾಡಬಹುದು. ಬಂದ ಅವಕಾಶ ಬಳಸಿ
ಶ್ರಮಪಟ್ಟರೆ ಉತ್ತಮ ಫಲವಿದೆ. 

ಕುಂಭ :ಇನ್ನೊಬ್ಬರ ಟೀಕೆಗೆ ಬೆಲೆ ಕೊಡುವುದೇ ನಿಮ್ಮ
ಹಿನ್ನಡೆಗೆ ಮುಖ್ಯ ಕಾರಣ. ಕೆಲವೊಂದು
ಘಟನೆಗಳು ಕಣ್ಣೀರು ತರಿಸಬಹುದು. ಅತಿ
ಭಾವುಕತೆ, ಬೇಡದ ಕಡೆ ಮೃದುತ್ವ, ಗೊಂದಲ,
ಗಡಿಬಿಡಿಗಳಿಂದ ಹೊರಬರಲು ಪ್ರಯತ್ನಿಸಿ. ವಿವೇಕಿಗಳಾಗಿ
ವರ್ತಿಸಿದರೆ ಒಳಿತಿದೆ. 

ಮೀನ : ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು
ಖಂಡಿತಾ ಹಿನ್ನಡೆಯಲ್ಲ. ನಿಮ್ಮ ಒಳ್ಳೆಯತನಕ್ಕೆ
ಬೆಲೆ ಸಿಕ್ಕೇ ಸಿಗುತ್ತದೆ. ಆದರೆ ಸ್ವಲ್ಪ ತಾಳ್ಮೆ ಇರಲಿ.
ನೀವೇನು ಅನ್ನೋದನ್ನು ಜಗತ್ತಿಗೆ ತೋರಿಸಲು ಇದು
ಸಕಾಲ. ಶ್ರದ್ಧೆಯಿಂದ ಮುಂದುವರಿಯಿರಿ. 

PREV
click me!

Recommended Stories

ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌
ನಾಳೆ ಡಿಸೆಂಬರ್ 10 ರವಿಯೋಗ, ಬುಧವಾರ ಐದು ರಾಶಿಗೆ ಅದೃಷ್ಟ, ಸಂಪತ್ತು