ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸೋ ಒಂದು ದಿನ ಮುನ್ನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ಮಾಡಿದ್ದಾರೆ. ಅಪಾರ ಜನ ಸಮ್ಮುಖದಲ್ಲಿ ದೇಗುಲಗಳ ನಾಡಿನಲ್ಲಿ ಹಿಂದುಗಳ ಹೃದಯ ಗೆಲ್ಲಲು ಮೋದಿ ಯತ್ನಿಸಿದ್ದಾರೆ. ಅಷ್ಟಕ್ಕೂ ಏನಿದು ಗಂಗಾರತಿ?
ಗಂಗೆ ಹಾಗೂ ಗಂಗಾಜಲ ಹಿಂದೂಗಳು ಮುಕ್ತಿ ಹೊಂದಲು ಅಗತ್ಯವೆಂದು ನಂಬುತ್ತಾರೆ. ಇಲ್ಲಿಯೇ ಕೊನೆಯುಸಿರೆಳೆದರೆ ನೇರ ಸ್ವರ್ಗಕ್ಕೇ ಹೋಗುತ್ತೇವೆ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ.
ಉತ್ತರ ಭಾರತದಲ್ಲಿ ಹಲವಾರು ವರ್ಷಗಳಿಂದಲೂ ನಡೆಸಿಕೊಂಡು ಬಂದಿರುವ ಶ್ರೇಷ್ಠ ಹಿಂದೂ ಸಂಪ್ರದಾಯಗಳಲ್ಲಿ ಗಂಗಾರತಿಯೂ ಒಂದು. ಜೀವನದಲ್ಲಿ ಒಮ್ಮೆಯಾದರೂ ತಂಪಾದ ಸಂಜೆಯಲ್ಲಿ, ಗಂಗಾ ತಟದಲ್ಲಿ ವೇದ ಘೋಷಗಳ ನಿನಾದದೊಂದಿಗೆ ಈ ಪೂಜೆಯನ್ನು ಕಣ್ತುಂಬಿ ಕೊಳ್ಳುವುದೇ ಒಂದು ಆನಂದ. ಹರಿದ್ವಾರ, ರಿಷಿಕೇಶ್ ಹಾಗೂ ವಿಶ್ವದ ಪುರಾತನ ನಗರಗಳಲ್ಲಿ ಒಂದಾದ, ಅಧ್ಯಾತ್ಮ ರಾಜಧಾನಿ, ದೀಪ ನಗರಿ ಎಂದೇ ಕರೆಯುವ ವಾರಾಣಸಿಯಲ್ಲಿ ನಡೆಯುವ ಗಂಗಾರತಿ ಮಹತ್ವವೇನು, ಇಲ್ಲಿದೆ ವಿವರ...
undefined
ಮಳೆ, ಬಿಸಿಲೆನ್ನದೇ ಗಂಗೆಗೆ ಪ್ರತಿ ದಿನ ಸಂಜೆಯೂ ಆರತಿ ನಡೆಯುತ್ತದೆ. ಈ ಅದ್ಭುತ ಗಂಗಾರತಿಯನ್ನು ಒಮ್ಮೆಯಾದರೂ ನೋಡಿ ಕಣ್ಣು ತುಂಬಿಕೊಳ್ಳಬೇಕು ಎಂಬುವುದು ಕೋಟ್ಯಾಂತರ ಹಿಂದುಗಳ ಆಶಯವೂ ಹೌದು.
ಬ್ರಹ್ಮ ಮಹಾದೇವ ಗಂಗೆಯನ್ನು ಹೊತ್ತು ತಂದ ಶಿವನನ್ನು ಸ್ವಾಗತಿಸಿದ್ದು ಇದೇ ಸ್ಥಳದಲ್ಲಂತೆ. ದಶಾಶ್ವಮೇಧ ಯಜ್ಞ ನಡೆಸಿದ ಬ್ರಹ್ಮ ಹತ್ತು ಕುದುರುಗಳನ್ನು ಬಲಿ ಕೊಟ್ಟ ಸ್ಥಳ ಇದಾಗಿದ್ದು, ಇಂಥ ಪವಿತ್ರ ಕ್ಷೇತ್ರದಲ್ಲಿ 45 ನಿಮಿಷಗಳ ಕಾಲ, ಭಜನೆಯೊಂದಿಗೆ ಗಂಗಾರತಿ ನಡೆಯುತ್ತದೆ.
ಪವಿತ್ರ ಗಂಗೆ ತಟದಲ್ಲಿ ಗಂಗಾರತಿ ಮಾಡಿದ ಪ್ರಧಾನಿ ಮೋದಿ!
ವಾರಾಣಸಿ ಗಂಗಾರತಿ
ಸುಮಾರು 2 ಸಾವಿರ ದೇವಸ್ಥಾನಗಳಿರುವ ದೇಗುಲಗಳು ನಾಡಾದ ಕಾಶಿ ವಿಶ್ವನಾಥನ ದೇವಾಲಯದ ಬಳಿಯ ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ಗಂಗಾರತಿ ಕೋರಿಯೋಗ್ರಾಫ್ ಮಾಡಿರುವ ರೀತಿಯಲ್ಲಿ ಇರುತ್ತದೆ. ಒಂದೇ ವೇದಿಕೆ ಮೇಲೆ ಮೂವರು ಪಂಡಿತರು ಆರತಿ ಎತ್ತುತ್ತಾರೆ. ಒಂದೆಡೆ ಗಂಗೆ ಶಾಂತಿಯಿಂದ ಹರಿದರೆ, ಮತ್ತೊಂದೆಡೆ ಪಂಡಿತರು ವೇದ ಘೋಷಗಳೊಂದಿಗೆ ಆರತಿ ಎತ್ತುತ್ತಾರೆ.
ಹರಿದ್ವಾರ ಗಂಗಾರತಿ
ಹರಿದ್ವಾರದಲ್ಲಿ ಹರಿ-ಕಿ-ಪೌರಿ ಎಂಬಲ್ಲಿ ಗಂಗಾರತಿ ನಡಿಯುತ್ತದೆ. ಹಿಂದು ಪುರಾಣಗಳ ಪ್ರಕಾರ ಗಂಗೆ ಹುಟ್ಟಿದ ನಂತರ ಬ್ರಹ್ಮಲೋಕಕ್ಕೆ ಪವಿತ್ರ ಜಲವನ್ನು ತೆಗೆದುಕೊಂಡು ಹೋಗುವಾಗ, ವಿಷ್ಣುವಿನ ಪಾದ ತೊಳೆದಿದ್ದನಂತೆ. ಈ ಸ್ಥಳದಲ್ಲಿ ವಿಷ್ಣುವಿನ ಹೆಜ್ಜೆ ಗುರುತು ಇದೆ ಎಂದು ನಂಬಲಾಗಿದ್ದು, 'Feet of the lord'ಎಂದೇ ಕರೆಯುತ್ತಾರೆ. ಈ ಸ್ಥಳಕ್ಕಾಗಮಿಸುವ ಭಕ್ತಾದಿಗಳು ದೂರದಲ್ಲಿ ಕೂತು ಆರತಿ ನೋಡಲು ಇಚ್ಛಿಸುತ್ತಾರೆ. ಆದರೆ, ಇಲ್ಲಿ ಕೂತು ಆರತಿ ನೋಡಲು ಭಕ್ತರು ಮುಗಿ ಬೀಳುತ್ತಾರೆ. ಅಷ್ಟೇ ಅಲ್ಲ, ಈ ಆರತಿ ಮಾಡುವ ಪ್ರಕ್ರಿಯೆಯಲ್ಲಿ ಭಾಗಿಯಾಗುವವರು ತಲೆಗೆ ಬಟ್ಟೆ ಕಟ್ಟಿಕೊಂಡೇ ಆರತಿ ಮಾಡಬೇಕು. ಇಲ್ಲವಾದರೆ ಕೈಗೆ ಹಳದಿ ದಾರ ಕಟ್ಟಿಕೊಳ್ಳಬೇಕು.
ವಾರಾಣಸಿಯಲ್ಲಿ ಮೋದಿ ಮೇನಿಯಾ: ಜನಸಾಗರ ಕಂಡು ದಂಗಾದ ದುನಿಯಾ!
ರಿಷಿಕೇಶ್ ಗಂಗಾರತಿ
ಪ್ರಮಾರ್ತಾನಿಕೇತನ್ ಆಶ್ರಮದ ಬಳಿ ನಡೆಯುವ ಗಂಗಾರತಿ ಹರಿದ್ವಾರ ಹಾಗೂ ವಾರಾಣಸಿಗಿಂತ ವಿಭಿನ್ನವಾಗಿರುತ್ತದೆ. ರಿಷಿಕೇಶ್‌ದಲ್ಲಿ ನಡೆಯುವ ಗಂಗಾರತಿಗೆ ಆಧ್ಯಾತ್ಮಿಕ ಪ್ರಮುಖ್ಯತೆ ಇದ್ದು, ಜನರು ಹೆಚ್ಚಿರುತ್ತಾರೆ. ಆಶ್ರಮದಲ್ಲಿ ವ್ಯಾಸಂಗ ಮಾಡುವ ಪಂಡಿತರು ಇಲ್ಲಿ ಆರತಿ ಎತ್ತುತ್ತಾರೆ.