ಈ ರಾಶಿಗೆ ಶುಭ ಶಕುನವೊಂದು ಎದುರಾಗಲಿದೆ : ವಾರ ಭವಿಷ್ಯ

By Web Desk  |  First Published Dec 23, 2018, 7:00 AM IST

ಈ ರಾಶಿಗೆ ಶುಭ ಶಕುನವೊಂದು ಎದುರಾಗಲಿದೆ : ವಾರ ಭವಿಷ್ಯ


ಈ ರಾಶಿಗೆ ಶುಭ ಶಕುನವೊಂದು ಎದುರಾಗಲಿದೆ : ವಾರ ಭವಿಷ್ಯ

ಮೇಷ
ವಾರದ ಮೊದಲಾರ್ಧ ಆರೋಗ್ಯದ ಬಗ್ಗೆ ಕಾಳಜಿ
ಇರಲಿ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ
ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ಯಾವುದೇ
ಕಾರಣಕ್ಕೂ ಆತುರದ ತೀರ್ಮಾನ ತೆಗೆದುಕೊಳ್ಳವುದು ಬೇಡ.
ನಿಮ್ಮ ನೇರ ನಡೆ ನುಡಿಯಿಂದ ಕೆಲಸದಲ್ಲಿ ಬೇಗನೇ ಯಶ
ಸಾಧಿಸುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ.

Tap to resize

Latest Videos

undefined

ವೃಷಭ
ಸಾಕಷ್ಟು ಸಮಯಾವಕಾಶ ಸಿಗಲಿದೆ. ಕೆಲಸದ
ಒತ್ತಡದಿಂದ ಹೊರಗೆ ಬರಲಿದ್ದೀರಿ. ಸಾಧಕರ
ಭೇಟಿಯಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಲಿದೆ. ಭೂ
ವ್ಯಾಜ್ಯದಲ್ಲಿ ಅನುಭವಸ್ಥರ ಮಾತನ್ನು ಕಡೆಗಣಿಸಬೇಡಿ. ಹೊಸ
ಉದ್ಯಮಕ್ಕಾಗಿ ಕಚೇರಿಗಳ ಹುಡುಕಾಟ ನಡೆಸಲಿದ್ದೀರಿ.
ಬಂಧುಗಳಿಂದ ಆರ್ಥಿಕ ಸಹಕಾರ ದೊರೆಯಲಿದೆ.

ಮಿಥುನ
ನಿಮ್ಮಿಂದಾಗಿ ಮನೆಯಲ್ಲಿನ ಸಂತೋಷ
ಹೆಚ್ಚಾಗಲಿದೆ. ಹೆಣ್ಣು ಮಕ್ಕಳಿಗೆ ವಾರಾಂತ್ಯದಲ್ಲಿ
ಶುಭ ಸುದ್ದಿ ತಿಳಿಯಲಿದೆ. ಅವಿವಾಹಿತ ಪುರುಷರಿಗೆ
ಒಳ್ಳೆಯ ಸಂಬಂಧಗಳು ಬರಲಿವೆ. ನಿಮ್ಮ ವಿಚಾರಗಳಿಗೆ
ಸಮಾಜದಲ್ಲಿ ಒಳ್ಳೆಯ ಮಾನ್ಯತೆ ದೊರೆಯಲಿದೆ.
ಬರಹಗಾರರಿಗೆ ಸೂಕ್ತ ಗೌರವ ದೊರೆಯಲಿದೆ. ತಾಳ್ಮೆ ಮುಖ

ಕಟಕ
ತಂದೆಯ ನೆರವಿನಿಂದ ಸಂಭವನೀಯ
ಅಪಾಯಗಳು ತಪ್ಪಲಿವೆ. ಕೆಲಸದ ಸ್ಥಳದಲ್ಲಿ
ಸಂತೋಷ ಹೆಚ್ಚಾಗಲಿದೆ. ಮನೆಗೆ ಬಂಧುಗಳು
ಆಗಮಿಸುವರು. ವೈದ್ಯಕೀಯ ಖರ್ಚು-ವೆಚ್ಚಗಳಲ್ಲಿ
ಇಳಿಕೆಯಾಗಲಿದೆ. ಆತ್ಮವಿಶ್ವಾಸ ಹಿಮ್ಮಡಿಯಾಗಲಿದೆ.
ಸಹೋದರನ ಸಹಕಾರದ ಅಗತ್ಯ ಬರಬಹುದು. 

ಸಿಂಹ
ಆದಾಯಕ್ಕೆ ತಕ್ಕಂತೆ ಖರ್ಚುಗಳನ್ನು
ಹೊಂದಿಸಿಕೊಂಡರೆ ಸೂಕ್ತ. ನಿಮ್ಮ ಅತಿಯಾದ
ಆಸೆಯಿಂದ ಇತರ ಕುಟುಂಬ ಸದಸ್ಯರೊಂದಿಗೆ
ಮನಸ್ಥಾಪ ಉಂಟಾಗಬಹುದು. ಸಣ್ಣ ಸಣ್ಣ ವಿಚಾರಗಳಲ್ಲೂ
ಎಚ್ಚರಿಕೆಯಿಂದ ಹೆಜ್ಜೆ ಇಡಿ. ಯಾರ ಮೇಲೆಯೂ
ದೋಷಾರೋಪ ಮಾಡುವುದು ಸರಿಯಲ್ಲ.

ಕನ್ಯಾ
ನಿಮ್ಮ ದಾರಿಯಲ್ಲಿ ನೀವೇ ನಡೆದು ಗುರಿ
ಸೇರಬೇಕು. ಆದರೆ ಇದಕ್ಕೆ ಸೂಕ್ತ ಸಹಕಾರವೂ
ಬೇಕಾಗುತ್ತದೆ. ಇದು ನಿಮ್ಮ ಮನೆಯ ಸದಸ್ಯರು,
ಸ್ನೇಹಿತರಿಂದ ದೊರೆಯಲಿದೆ. ಹೆಣ್ಣು ಮಕ್ಕಳ ಓದಿನಲ್ಲಿ ಪ್ರಗತಿ
ಕಂಡು ಬರಲಿದೆ. ಸೂಕ್ತ ಮಾಹಿತಿ ತಿಳಿಯದೇ ಯಾವುದೇ
ವಿಚಾರದ ಬಗ್ಗೆ ಮಾತನಾಡುವುದು ಬೇಡ

ತುಲಾ
ಮನೆಯಲ್ಲಿ ಕೆಲಸಗಳು ಹೆಚ್ಚಾಗಲಿವೆ. ಯಾರ ಮೇಲೆ
ಹೆಚ್ಚು ನಂಬಿಕೆ ಇಟ್ಟಿರುತ್ತಿರೋ ಅವರಿಂದಲೇ
ನೋವಾಗುವ ಸಾಧ್ಯತೆ. ದೂರದ ಪ್ರಯಾಣ
ಮಾಡುವ ಅವಕಾಶ ಬರಲಿದೆ. ಸೂಕ್ತ ತಯಾರಿಯೊಂದಿಗೆ ಹಿಂದೆ
ಮಾಡಿದ್ದ ಕೆಲಸಕ್ಕೆ ಈ ವಾರದಲ್ಲಿ ಫಲ ದೊರೆಯಲಿದೆ. ವೃತ್ತಿಯಲ್ಲಿ
ಪದೋನ್ನತಿ ದೊರೆಯಲಿದೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಯ.

ವೃಶ್ಚಿಕ
ವೈವಾಹಿಕ ಬದುಕಿನಲ್ಲಿ ಸಂತಸ ಹೆಚ್ಚಾಗಲಿದೆ. ನಿಮ್ಮ
ಬಗೆಯಾಗಿ ನೀವೇ ಅತಿಯಾಗಿ ಹೇಳಿಕೊಳ್ಳುವುದು
ಬೇಡ. ಧರ್ಮದ ದಾರಿಯಲ್ಲಿ ಮುಂದೆ
ಸಾಗುವಿರಿ. ಇತರರ ಸಾಧನೆಯನ್ನು ಗುರುತಿಸಿ,
ಪ್ರೋತ್ಸಾಹಿಸುವ ಕೆಲಸ ಮಾಡಲಿದ್ದೀರಿ. ದೊಡ್ಡ ಮಟ್ಟದ
ಕಾರ್ಯಗಳನ್ನು ಪ್ರಾರಂಭಿಸಲು ಇದು ಸಕಾಲವಲ್ಲ.

ಧನಸ್ಸು
ಜೀವನ ಶೈಲಿಯಲ್ಲಿ ಬದಲಾವಣೆಯಾಗಲಿದೆ.
ಆಹಾರ, ಪಥ್ಯಗಳನ್ನು ಅನುಸರಿಸಿ ನಡೆಯಲಿ
ದ್ದೀರಿ. ಸೂಕ್ತ ಬದ್ಧತೆಯೊಂದಿಗೆ ಮುಂದೆ ಸಾಗಿದರೆ
ಒಳ್ಳೆಯ ಫಲ ಪಡೆಯುವ ಅವಕಾಶ ಖಂಡಿತವಾಗಿಯೂ
ಇದೆ. ತಂದೆ ತಾಯಿಯಿಂದ ಆರ್ಥಿಕ ಸಹಕಾರ ದೊರೆಯಲಿದೆ

ಮಕರ
ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಆತ್ಮೀಯರು
ಸಿಕ್ಕಲಿದ್ದಾರೆ. ವಾರದ ಮಧ್ಯ ಭಾಗದಲ್ಲಿ ಆರೋಗ್ಯ
ಮತ್ತು ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ವಾರಾಂ
ತ್ಯಕ್ಕೆ ಕುಟುಂಬ ಸಮೇತ ಪ್ರವಾಸ ಹೋಗಲಿದ್ದೀರಿ. ನೆರೆ
ಹೊರೆಯವರ ಜೊತೆ ಉತ್ತಮ ಬಾಂಧವ್ಯ ಸಾಧ್ಯವಾಗಲಿದೆ.

ಕುಂಭ
ಏಕ ಕಾಲದಲ್ಲಿ ಎರಡು ದೋಣಿಗಳ ಮೇಲೆ ಸವಾರಿ
ಮಾಡುವ ಸಾಹಸ ಮಾಡುವುದು ಬೇಡ.
ಗೃಹಿಣಿಯರಿಗೆ ಶುಭ ಫಲ ದೊರೆಯಲಿದೆ.
ಕೆಲಸದಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಕೊಂಚ
ತಾಳ್ಮೆಯಿಂದ ವರ್ತಿಸಿದರೆ ಒಳಿತಾಗಲಿದೆ. ಸ್ನೇಹದಲ್ಲಿ
ವ್ಯವಹಾರ ಬೇಡ. ವಾರ ಪೂರ್ತಿ ಶಾಂತವಾಗಿ ಇರುವಿರಿ.

ಮೀನ
ಶೈಕ್ಷಣಿಕವಾಗಿ ಪ್ರಗತಿ ಸಾಧ್ಯವಾಗಲಿದೆ.
ವಹಿಸಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ
ಮುಗಿಸಲಿದ್ದೀರಿ. ಮತ್ತೊಬ್ಬರ ಮೇಲಿನ
ಅವಲಂಬನೆ ಕಡಿಮೆಯಾಗಲಿದೆ. ಹೆಚ್ಚು ನಿರೀಕ್ಷೆ ಇಟ್ಟು
ಕೊಂಡು ಮಾಡುವ ಕೆಲಸದಿಂದ ತುಸು ನಿರಾಸೆ ಕಾದಿದೆ.

click me!