ಈ ವಾರ ಈ ರಾಶಿಯವರಿಗೆ ಮಹತ್ತರ ಯಶಸ್ಸು ದೊರೆಯಲಿದೆ

By Web Desk  |  First Published Dec 16, 2018, 6:55 AM IST

ಈ ವಾರ ಈ ರಾಶಿಯವರಿಗೆ ಮಹತ್ತರ ಯಶಸ್ಸು ದೊರೆಯಲಿದೆ


ಈ ವಾರ ಈ ರಾಶಿಯವರಿಗೆ ಮಹತ್ತರ ಯಶಸ್ಸು ದೊರೆಯಲಿದೆ

ಮೇಷ
ಕಷ್ಟದ ಕೆಲಸ ಕಾರ್ಯಗಳು ಎದುರಾಗುವ
ಸಾಧ್ಯತೆ. ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳು
ವುದು ಸೂಕ್ತ. ವಾರವಿಡೀ ಬ್ಯುಸಿಯಾ ಗಿರುವಿರಿ.
ವಾರಾಂತ್ಯದಲ್ಲಿ ಮನಸ್ಸಿಗೆ ನೆಮ್ಮದಿ. ಕುಟುಂಬ ದೊಡನೆ ದೂರ
ಪ್ರಯಾಣ. ಮಕ್ಕಳಿಗೆ ಓದಿನಲ್ಲಿ ನೆಮ್ಮದಿ. ಆದರೂ ಮನಸ್ಸಿನಲ್ಲಿ
ಕಿರಿಕಿರಿ ಸಾಧ್ಯತೆ. ಧ್ಯಾನ ಮಾಡಿ, ಸಂತೋಷದಿಂದಿರುವಿರಿ.

Tap to resize

Latest Videos

undefined

ವೃಷಭ
ವಾರದಲ್ಲಿ ಸಿಹಿ-ಕಹಿ ಎರಡೂ ಸುದ್ದಿಯನ್ನು
ಕೇಳುವಿರಿ. ಕೆಲಸದಲ್ಲಿ ಹಿನ್ನಡೆಯಾದರೂ ಅದನ್ನು
ದಾಟಿ ಯಶಸ್ಸು ಸಾಧಿಸಲಿದ್ದೀರಿ. ಮಕ್ಕಳ ಬಗ್ಗೆ
ಎಚ್ಚರ ಇರಲಿ. ಹಿತಶತ್ರುಗಳೂ ಸಹ ಒಮ್ಮೊಮ್ಮೆ ನಿಮಗೆ ಸರಿ
ದಾರಿ ತೋರಿಸಲಿದ್ದಾರೆ. ಕಟುವಾದ ಮಾತುಗಳಿಂದ ಇನ್ನೊಬ್ಬ
ರನ್ನು ನೋಯಿಸದಿರಿ. ವಾರಾಂತ್ಯದಲ್ಲಿ ನೆಮ್ಮದಿ.

ಮಿಥುನ
ಅತಿಯಾದ ಕೋಪ ಆರೋಗ್ಯಕ್ಕೆ ಹಾನಿಕಾರಕ.
ನಿಮ್ಮ ಒಳ್ಳೆಯ ಸ್ವಭಾವವೇ ನಿಮಗೆ ಮುಳುವಾಗ
ಬಹುದು. ಯಾವುದೇ ಕೆಲಸ ಕಾರ್ಯ ಪ್ರಾರಂಭಿ
ಸಲು ಚಿಂತಿಸುತ್ತಿದ್ದರೆ, ಅದರಲ್ಲಿ ಯಶಸ್ಸು ಕಾಣಲಿದ್ದೀರಿ.
ಶಿಕ್ಷಕರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭ.
ಮಹಿಳೆಯರಿಗೆ ನೆಮ್ಮದಿ ವಾತಾವರಣ ಸಿಗಲಿದೆ.

ಕಟಕ
ಗುರುವಿನ ಮಾರ್ಗದರ್ಶನದಿಂದ ಸರಿಯಾದ
ನಿರ್ಧಾರ ತೆಗೆದುಕೊಂಡರೆ, ಕೈ ಹಾಕಿದಲ್ಲಿ
ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಯಾರಿಗೇ ಆಗಲಿ
ಮಾತಿನಿಂದಲೇ ನೋವು ನೀಡಬೇಡಿ. ಹಳೆಯ ತಪ್ಪುಗಳಿಂದ
ತಿದ್ದುಕೊಂಡು, ಹೊಸ ಹಾದಿಯನ್ನು ಹಿಡಿದರೆ ಒಳಿತು.
ಅವಿವಾಹಿತರಿಗೆ ಕಲ್ಯಾಣ ಭಾಗ್ಯ. ಮಕ್ಕಳಿಗೆ ಶುಭ ದಿನ. 

ಸಿಂಹ
ಮಕ್ಕಳು ವಿದ್ಯಾಭ್ಯಾಸದಿಂದ ಕೊಂಚ ಕಷ್ಟಗಳನ್ನು
ಎದುರಿಸುವ ಸಾಧ್ಯತೆಗಳಿವೆ. ಆದಷ್ಟು ಸಂಗೀತ
ಕೇಳಿ. ಮಹಿಳೆಯರು ಶಾಂತ ರೀತಿಯಲ್ಲಿ ಕುಳಿತು
ಕೈಗೊಂಡ ಕೆಲಸ ಕಾರ್ಯಗಳು ಉತ್ತಮ ಫಲಿತಾಂಶ
ನೀಡಲಿದೆ. ಪುರುಷರಿಗೆ ಯಾರೋ ಮಾಡಿದ ತಪ್ಪು ನಿಮ್ಮನ್ನು
ತಗಲಾಕೊಂಡು ನೆಮ್ಮದಿಗೆ ಭಂಗ. ಸಂಬಂಧಿಕರ ಆಗಮನ.

ಕನ್ಯಾ
ಸ್ನೇಹಿತರೇ ಶತ್ರಗಳಾದರೂ ಅವರನ್ನು ಮಿತ್ರರಂತೆ
ಭಾವಿಸುವ ಗುಣ ನಿಮ್ಮದು. ನಿಮ್ಮ ಒಳ್ಳೆಯ ಗುಣ
ಗಳಿಂದ ಇತರರಿಗೆ ಪ್ರೇರಣೆ ನೀಡಲಿದೆ. ಸಾಧಾರಣ
ರಾದರು ಅಸಾಧಾರಣ ಕೆಲಸಗಳನ್ನು ಈ ವಾರ ಮಾಡಲಿದ್ದೀ
ರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ. ವ್ಯಾಪಾರಿಗಳಿಗೆ,
ಕಾರ್ಮಿಕರಿಗೆ, ವಾಣಿಜ್ಯೋದ್ಯಮಿಗಳಿಗೆ ಲಾಭ ಸಿಗಲಿದೆ. 

ತುಲಾ
ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ.
ನಿಮ್ಮಲ್ಲಿನ ಪ್ರತಿಭೆಗಳನ್ನು ಹೊರ ತರಲು ಉತ್ತಮ
ವೇದಿಕೆ ಸಿಗಲಿದ್ದು, ಸಿಕ್ಕ ಅವಕಾಶವನ್ನು ಕಳೆದುಕೊಳ್ಳ
ದಿರಿ. ವಿದೇಶದಲ್ಲಿರುವ ಸಂಬಂಧಿಕರ ಆಗಮನ. ಕೆಲಸದ ಒತ್ತಡ
ದಿಂದ ಇರುವವರಿಗೆ ದೂರ ಪ್ರಯಾಣದ ಅವಕಾಶ ಸಿಗಲಿದೆ.
ಮನೆ ಹಾಗೂ ಮಕ್ಕಳಿಂದ ಸಂತೋಷ. ಆರೋಗ್ಯದಲ್ಲಿ ಎಚ್ಚರ. 

ವೃಶ್ಚಿಕ
ಒಪ್ಪಿಕೊಂಡಿರುವ ಕೆಲ ಕೆಲಸಗಳನ್ನು ಯಶಸ್ವಿಯಾಗಿ
ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆ ಪಡೆಯಲಿದ್ದೀರಿ.
ಸಹೋದರ ನಡುವೆ ಮನಸ್ಥಾಪ ಸಾಧ್ಯತೆ. ಕೆಲಸ
ದಲ್ಲಿ ಬಡ್ತಿ ಸಿಗಲಿದ್ದು, ದೂರ ಪ್ರಯಾಣ ಬೆಳೆಸಲಿದ್ದೀರಿ.
ಮಕ್ಕಳ ಓದಿನಲ್ಲಿ ಕಿರಿಕಿರಿ ಸಾಧ್ಯತೆ. ನಿಮ್ಮ ಮಾತು ಹಾಗೂ
ಆಲೋಚನೆಗಳಿಂದ ಇತರರನ್ನು ಸಂತೋಷಗೊಳಿಸುವಿರಿ. 

ಧನಸ್ಸು
ಅನಿರೀಕ್ಷಿತ ಸುದ್ದಿಗಳನ್ನು ಕೇಳಲಿದ್ದೀರಿ. ಇದರಿಂದ
ಬದುಕಿನಲ್ಲಿ ಹೊಸ ತಿರುವು ಸಿಗಲಿದೆ. ಮನೆಯಲ್ಲಿ
ಸಂತೋಷ ತುಂಬಲಿದ್ದು, ವಾರಾಂತ್ಯದಲ್ಲಿ ಸಿಹಿ
ಸುದ್ದಿ ಸಿಗಲಿದೆ. ಪುರುಷರಿಗೆ ಕೆಲಸದಲ್ಲಿ ನೆಮ್ಮದಿ. ವ್ಯಾಪಾರಿ
ಗಳು, ಕೃಷಿಕರು, ಕಾರ್ಮಿಕರು ಹಣಕಾಸಿನಲ್ಲಿ ಎಚ್ಚರ ಇರಲಿ.

ಮಕರ
ದೂರ ಪ್ರಯಾಣ ಬೆಳೆಸುವಾಗ ಎಚ್ಚರ ಇರಲಿ.
ಮನೆಯಲಿ ಮೊಡ ಮುಸುಕಿದ ವಾತಾವರಣ
ಇರಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗ
ಲಿದೆ. ಮಾಡಿದ ತಪ್ಪುಗಳಿಂದ ಪ್ರಾಯಶ್ಚಿತ. ಗುರುಹಿರಿಯರಿಗೆ
ನಿಮ್ಮಿಂದ ಗೌರವ ಹಾಗೂ ನೆಮ್ಮದಿ ಸಿಗಲಿದೆ. 

ಕುಂಭ
ಸಣ್ಣ ಕೆಲಸಗಳೂ ದೊಡ್ಡ ಯಶಸ್ಸು ಪಡೆಯಲು
ಸಾಧ್ಯ ಎಂದು ಇತರರಿಗೆ ತೋರಿಸಿಕೊಡಲಿದ್ದೀರಿ.
ಆಮೀಷಗಳಿಗೆ ಒಳಗಾಗದೆ ನೀವು ಕೈಗೊಂಡ
ನಿರ್ಧಾರ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ.
ಎಣ್ಣೆ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು.
ಬಂದ ಸವಾಲನ್ನು ಧೈರ್ಯದಿಂದ ಎದುರಿಸಲಿದ್ದೀರಿ.

ಮೀನ
ವಾಣಿಜ್ಯೋದ್ಯಮಿಗಳಿಗೆ ಕಾನೂನೂ ಹೋರಾಟ
ದಲ್ಲಿ ಜಯ ಸಿಗಲಿದೆ. ಮನೆಯಲ್ಲಿ ಕೊಂಚ ಮನ
ಸ್ಥಾಪಗಳಿದ್ದರೆ ಕೂತು ಬಗೆಹರಿಸಿಕೊಳ್ಳುವುದು
ಒಳ್ಳೆಯದು. ದುಡುಕು ನಿರ್ಧಾರ ಹಾದಿ ತಪ್ಪಿಸುವ ಸಾಧ್ಯತೆ.
ತಾಳ್ಮೆಯೇ ನಿಮ್ಮ ಗುರಿ ಸಾಧಾನೆಗೆ ಉತ್ತಮ ಅಸ್ತ್ರವಾಗಲಿದೆ.

click me!