ಧನ ಪ್ರಾಪ್ತಿಗೆ ಅಕ್ಷಯ ತೃತೀಯದಂದು ಹೀಗ್ ಮಾಡಿ...

By Web DeskFirst Published May 6, 2019, 4:03 PM IST
Highlights

ಏನೇ ಕೊಂಡರೂ ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆ ಅಕ್ಷಯ ತೃತೀಯಕ್ಕೆ ತನ್ನದೇ ಆದ ವಿಶೇಷತೆ ಇದೆ. ಈ ದಿನ ಯಾವುದೇ ಶುಭ ಸಮಾರಂಭಗಳನ್ನು ಮಹೂರ್ತ ನೋಡದೆಯೇ ಮಾಡಬಹುದು. ಇಂಥ ಸುಸಂದರ್ಭದಲ್ಲಿ ಧನ ಪ್ರಾಪ್ತಿಗೇನು ಮಾಡಬೇಕು?

ಧನ ಸಂಪತ್ತು ಮತ್ತು ವಾಸ್ತುವಿಗೆ ಸಂಬಂಧವಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿದೆ ಮನೆಯಲ್ಲಿ ಧನ ಪ್ರಾಪ್ತಿಗಾಗಿ ಮಾಡಬೇಕಾದ ವಿಶೇಷ ಸರಳ ವಾಸ್ತು... 

ರಾಶಿ ಗ್ರಹಗಳನ್ನ ಪ್ರಸನ್ನಗೊಳಿಸಿ: ಎಲ್ಲ ರಾಶಿಗಳಿಗೂ ಒಂದೊಂದು ಗ್ರಹ ಅಧಿಪತಿಯಾಗಿದೆ. ಇದು ರಾಶಿ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಕಷ್ಟವೂ ಬರಬಹುದು ಅಥವಾ ಶುಭವೂ ಆಗಬಹುದು. ಆದುದರಿಂದ ಗ್ರಹಕ್ಕೆ ಸಂಬಂಧಿಸಿದ ಒಂದು ಬಣ್ಣದ ವಸ್ತುವನ್ನು ಅಥವಾ ಬಟ್ಟೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. 

ಕಳ್ಳತನ ತಡೆಯಲು ಇಲ್ಲಿವೆ ವಾಸ್ತು ಟಿಪ್ಸ್....

ಅಲ್ಮಾರಾಯನ್ನು ಸರಿಯಾದ ಜಾಗದಲ್ಲಿಡಿ: ಹಣವನ್ನು ಇಡುವ ಅಲ್ಮಾರಾವನ್ನು ಉತ್ತರ ಭಾಗದಲ್ಲಿರುವ ಕೋಣೆಯ ದಕ್ಷಿಣ ಗೋಡೆ ಬಳಿ ಇಡಬೇಕು. ಇದರಿಂದ ಧನವೃದ್ಧಿಯಾಗುತ್ತದೆ. 

ಮನೆಯ ಮುಂಭಾಗ ದೀಪ ಬೆಳಗಿಸಿ : ಬೆಳಗ್ಗೆ ಲಕ್ಷ್ಮಿ ಪೂಜೆಯನ್ನು ಪ್ರತಿದಿನ ಮಾಡಿ. ಸಾಯಂಕಾಲ ಮನೆಯ ಮುಂಭಾಗದಲ್ಲಿ ದೀಪ ಹಚ್ಚಿ ಇಡಿ.  ತುಪ್ಪದ ದೀಪ ಹಚ್ಚಿದರೆ ಉತ್ತಮ. ಈ ಕೆಲಸದಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. 

ಮನೆಯ ಮುಂಭಾಗದಲ್ಲಿ ಗಣೇಶನ ಮೂರ್ತಿ: ಗಣೇಶನ ಮೂರ್ತಿ ಅಥವಾ ಫೋಟೋವನ್ನು ಮುಖ್ಯ ದ್ವಾರದ ಬಳಿ ಇಡಿ. ಇದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ. 

ದಾಂಪತ್ಯ ವಿರಸ ಪರಿಹಾರಕ್ಕೆ ಬೆಡ್‌ರೂಂ ವಾಸ್ತು...

ತುಳಸಿ ಗಿಡ ಬೆಳೆಸಿ: ತುಳಸಿಯನ್ನು ಪೂಜಿಸಿದರೆ ಮನೆಯಲ್ಲಿ ಧನ ಧಾನ್ಯ ವೃದ್ಧಿಯಾಗುತ್ತದೆ. ತುಳಸಿಗೆ ಪ್ರತಿದಿನ ದೀಪ ಹಚ್ಚಿ, ಬೆಳಗ್ಗೆ ಪೂಜಿಸಿದರೆ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರುತ್ತಾಳೆ.  ಗೋವಿಗೆ ತಿಂಡಿ ನೀಡಿ: ನಿತ್ಯ ಬೆಳಗ್ಗೆ ಸ್ನಾನ ಮಾಡಿ ಗೋವಿಗೆ ತಿಂಡಿ ನೀಡಿದರೆ ಉತ್ತಮ. 

click me!