ವಾಸ್ತು ಶಾಸ್ತ್ರದ ಅನುಸಾರ ಕೆಲವೊಂದು ವಸ್ತುಗಳನ್ನು ಮರೆತು ಕೂಡ ನಾವು ಜೇಬು ಅಥವಾ ಪರ್ಸ್ ನಲ್ಲಿ ಇಡಬಾರದು. ಅಂತಹ ವಸ್ತುಗಳು ಯಾವುವು? ಅದರಿಂದ ಸಮಸ್ಯೆಗಳೇನು ತಿಳಿಯೋಣ...
ಪ್ಯಾಂಟಿನಲ್ಲಿ ಚಿಲ್ಲರೆ ಪೈಸೆ, ಪೆನ್, ಎಟಿಎಂ ಕಾರ್ಡ್‌ಗಳು, ಮನೆ ಕೀ ಮುಂತಾದ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ. ವಾಸ್ತು ಪ್ರಕಾರ ಈ ಬೇಡದ ವಸ್ತುಗಳನ್ನು ಜೇಬಿನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಯಾವ ವಸ್ತುವನ್ನಿಟ್ಟುಕೊಳ್ಳಬಾರದು?
ಹಳೇ ಬಿಲ್: ತಿಂಡಿ ತಿಂದದ್ದು ಆಗಿರಬಹುದು ಅಥವಾ ಸಾಮಗ್ರಿಗಳನ್ನು ಖರೀದಿಸಿದ್ದು, ವಿದ್ಯುತ್ ಬಿಲ್ ಕೂಡ ಆಗಿರಬಹುದು. ಅವನ್ನು ಪರ್ಸ್ ಅಥವಾ ಜೇಬಿನಲ್ಲಿಟ್ಟುಕೊಂಡು ಸುತ್ತಬೇಡಿ. ಇದರಿಂದ ನೆಗೆಟಿವ್ ಎನರ್ಜಿ ಉತ್ಪತ್ತಿಯಾಗುತ್ತದೆ. ಜೊತೆಗೆ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
undefined
ಅಪಾಯಕಾರಿ ಫೋಟೋ: ಕೋಪ, ಕೊಲೆ, ಮತ್ಸರ, ವಿರೋಧ ಭಾವನೆಗಳನ್ನು ಬಿಂಬಿಸುವ ವಸ್ತುಗಳನ್ನು ಜೇಬಿನಲ್ಲಿಡಬೇಡಿ. ಇವು ನಮ್ಮ ಸುತ್ತಮುತ್ತಲೂ ಕೆಟ್ಟ ಶಕ್ತಿಯನ್ನು ಉತ್ತೇಜಿಸುತ್ತವೆ.
ಹರಿದ ಪರ್ಸ್: ಜೇಬಿನಲ್ಲಿ ಪರ್ಸ್ ಇಡಬಾರದೇ ಎಂದು ಕೇಳಬೇಡಿ. ಖಂಡಿತಾ ಇಡಬಹುದು. ಆದರೆ ಆ ಪರ್ಸ್ ಹರಿದು ಅಥವಾ ಹಾಳಾಗಿ ಹೋಗದೆ ಚೆನ್ನಾಗಿರಬೇಕು. ಯಾಕೆಂದರೆ ವಾಸ್ತು ಶಾಸ್ತ್ರದ ಅನುಸಾರ ತುಂಡಾದ ಹರಿದ ಪರ್ಸ್ ಬಳಸಿದರೆ ಹಣ ಉಳಿಯುವುದಿಲ್ಲ.
ನೋಟ್: ಜೇಬಿನಲ್ಲಿ ನೋಟ್ ಇಡುವುದಾದರೆ ಅದನ್ನು ಸರಿಯಾದ ರೀತಿಯಲ್ಲಿ ಇಡಿ. ಅದನ್ನು ಹೇಗೇಗೋ ಮಡಚಿ, ಮುದ್ದೆ ಮಾಡಿ ಇಟ್ಟರೆ ಅದು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.
ವಾಸ್ತುವಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ತಿನ್ನುವ ಆಹಾರ: ಜೇಬಿನಲ್ಲಿ ಸಾಮಾನ್ಯವಾಗಿ ಚಾಕಲೇಟ್ ಅಥವಾ ಚಿಪ್ಸ್ ಪ್ಯಾಕ್ ಇರುತ್ತದೆ. ಆದರೆ ವಾಸ್ತುವಿನ ಪ್ರಕಾರ ಇಂಥ ವಸ್ತುಗಳನ್ನಿಡುವುದರಿಂದ ದುಷ್ಪರಿಮಾಣ ಬೀರುತ್ತದೆ.
ಔಷಧಿಗಳು: ಔಷಧಿಗಳಿಂದ ಹೊರ ಬರುವ ಶಕ್ತಿ ಮನುಷ್ಯನ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ.
ಹರಿತವಾದ ವಸ್ತು: ಬ್ಲೇಡ್, ಚಾಕು, ಪಿನ್, ಸೂಜಿ ಮೊದಲಾದ ವಸ್ತುಗಳನ್ನು ಜೇಬಿನಲ್ಲಿಡಬೇಡಿ. ಇವು ಮನೆಯಲ್ಲಿ ಇಡುವುದೂ ಅಪಾಯಕಾರಿ. ಆದರೆ ಅಗ್ನಿ ತತ್ವ ಹೊಂದಿರುವ ಅಡುಗೆ ಮನೆಯಲ್ಲಿ ಇವುಗಳನ್ನ ಇಡಬಹುದು.