ಲಕ್ಷ್ಮೀ ಕೃಪೆಗಾಗಿ ತುಳಿಸಿ ಗಿಡ ಇಲ್ಲಿ ನೆಡಿ...

By Web Desk  |  First Published Dec 22, 2018, 2:21 PM IST

ಅಪಾರ ಔಷಧೀಯ ಗುಣಗಳಿರುವ ತುಳಸಿ ಗಿಡವನ್ನು ಪ್ರತಿಯೊಬ್ಬ ಹಿಂದೂ ಮನೆಯಲ್ಲಿಟ್ಟು ಪೂಜಿಸುತ್ತಾರೆ. ಆದರೆ, ಇದನ್ನು ಸೂಕ್ತ ಜಾಗದಲ್ಲಿಟ್ಟು ಪೂಜಿಸಿದರೆ ಲಕ್ಷ್ಮಿ ಒಲಿಯುತ್ತಾಳೆ. ಏನು ಹೇಳುತ್ತೆ ವಾಸ್ತು ಶಾಸ್ತ್ರ?


ಹಿಂದೂ ಧರ್ಮದ ಪ್ರತಿಯೊಬ್ಬರ ಮನೆಯಲ್ಲಿಯೂ ತುಳಸಿ ಗಿಡ ಇರುತ್ತದೆ. ತುಳಸಿಯನ್ನು ಲಕ್ಷ್ಮಿ ಅವತಾರವೆಂದೇ ಪೂಜಿಸುತ್ತಾರೆ. ದುಷ್ಟ ಶಕ್ತಿಗಳಿಂದ ತುಳಸಿ ನಮ್ಮನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಇದೆ. ಜೊತೆಗೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುವಂತೆ ತುಳಸಿ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಆದರೆ ವಾಸ್ತು ಪ್ರಕಾರ ತುಳಸಿಯನ್ನು ನಿರ್ದಿಷ್ಟ ದಿಕ್ಕಿನಲ್ಲಿಯೇ ನೆಡಬೇಕು. ಇದರಿಂದ ಮನೆಗೆ ಶುಭವಾಗುತ್ತದೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.

Tap to resize

Latest Videos

undefined

 

ಮುಖ್ಯ ದ್ವಾರದ ಎದುರು ತುಳಸಿ ಗಿಡ: ಮನೆಯ ಅಂಗಳದಲ್ಲಿ ಮುಖ್ಯ ಬಾಗಿಲಿನ ಎದುರು ತುಳಸಿ ಗಿಡವಿದ್ದರೆ, ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಆಗೋದಿಲ್ಲ.

 

ಪ್ರತಿದಿನ ನೀರು ಹಾಕಿ: ವಿಷ್ಣು ಪುರಾಣದಲ್ಲಿ ಹೇಳಿದಂತೆ ಮನೆ ಮುಂದಿರುವ ತುಳಸಿಗೆ ಪ್ರತಿದಿನ ಮುಂಜಾನೆ ನೀರು ಹಾಕಬೇಕು ಹಾಗೂ ಸಂಜೆ ದೀಪ ಹಚ್ಚಿ ಅದರ ಬಳಿ ಇಡಬೇಕು. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚುತ್ತದೆ.

ವಾಸ್ತು ದೋಷ ನಿವಾರಣೆಗೆ: ಮನೆಯಲ್ಲಿ ಯಾವುದೇ ರೀತಿಯ ವಸ್ತು ದೋಷ ಕಂಡು ಬಂದರೆ ತುಳಸಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಇದರಿಂದ ಎಲ್ಲ ನಕಾರಾತ್ಮಕ ಶಕ್ತಿಯೂ ನಶಿಸುತ್ತದೆ.

ತುಳಸಿ ಹಬ್ಬದ ಮಹತ್ವ, ಹಿನ್ನೆಲೆ ಏನು?

click me!