ಓಡ್ಹೋಗಿ ಮದ್ವೆಯಾಗೋದು ಸಂಪ್ರದಾಯವಿಲ್ಲಿ!

By Web Desk  |  First Published Jul 14, 2019, 12:49 PM IST

ಭಾರತದಲ್ಲಿ ಮನೆಯವರ ಸಮ್ಮತಿ ಇಲ್ಲದೇ ಮದ್ವೆಯಾದವರನ್ನು ಅಪರಾಧಿ ಸ್ಥಾನದಲ್ಲಿಡಲಾಗುತ್ತದೆ. ಅಲ್ಲಲ್ಲಿ ಮರ್ಯಾದಾ ಹತ್ಯೆಯೂ ಇದೇ ಕಾರಣಕ್ಕೆ ನಡೆಯುವುದಿದೆ. ಆದರೆ, ಇಲ್ಲಿ ಓಡಿ ಹೋಗಿ ಮದುವೆಯಾಗುವುದೇ ಸಂಪ್ರದಾಯ!


ಹಿರಿಯರ ನಿರ್ಧಾರದಂತೆ, ಸಾವಿರಾರು ಜನರ ಸಮ್ಮುಖದಲ್ಲಿ ಮಂದಿ ಮದ್ವೆಯಾಗುತ್ತಾರೆ. ಆದರೆ. ಹಿಮಾಚಲ ಪ್ರದೇಶದ ಒಂದು ಗ್ರಾಮದಲ್ಲಿ ಒಂದಾನೊಂದು ಕಾಲದಲ್ಲಿ ಓಡಿ ಹೋಗಿ ಮದುವೆಯಾಗುವುದೇ ಸಂಪ್ರದಾಯವಾಗಿತ್ತು. 

ಹೌದು, ಹಿಮಾಚಲದ ಲಾಹೌಲ್ ಸ್ಪೀತಿಯಲ್ಲಿನ ಕೆಲೌಂಗ್‌ ಹೆಸರಿನ ಒಂದು ಜನಾಂಗ ಇದೆ. ಈ ಜನಾಂಗದಲ್ಲಿ ಹಿಂದೆ ಈ ಸಂಪ್ರದಾಯವಿತ್ತು. ಸ್ವಾತಂತ್ರ್ಯ ದಿನದ ದಿನ ತಮಗೆ ಇಷ್ಟ ಬಂದ ವಧು ವರರನ್ನು ಆಯ್ಕೆ ಮಾಡಿ ಓಡಿ ಹೋಗಬಹುದಾಗಿತ್ತು. ದೇಶಕ್ಕೆ ಸ್ವತಂತ್ರ ಬಂದ ದಿನ ಜನರಿಗೆ ಇಂಥದ್ದೊಂದು ಸ್ವಾತಂತ್ರ್ಯವೂ ಇತ್ತು. 

ಮದುವೆಯಲ್ಲಿ ಮದರಂಗಿ ಹಚ್ಚಿಕೊಳ್ಳುವುದೇಕೆ?

ಓಡಿ ಹೋಗುವ ಮೇಳ

Latest Videos

undefined

ಲಾಹೌಲ್‌ನ ಕಬೀಲಾಯಿ ಜನಾಂಗದ ಸಂಪ್ರದಾಯವಿದು. ಆದರೆ ಈಗ ಈ ಸಂಪ್ರದಾಯವಿಲ್ಲ. ಹಿಂದೆ ಪ್ರತಿವರ್ಷ ಆಗಸ್ಟ್‌ 15ರಂದು ಒಂದು ಮೇಳ ನಡೆಯುತ್ತಿತ್ತು. ಈ ಮೇಳದ ವಿಶೇಷತೆ ಏನೆಂದರೆ ಇಲ್ಲಿ ಪ್ರೀತಿಸುತ್ತಿರುವ ಹುಡುಗ - ಹುಡುಗಿಯರು ತಮಗೆ ಇಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಅಷ್ಟೇ ಅಲ್ಲ, ಅದೇ ದಿನ ತಮ್ಮ ಪ್ರೇಮಿಯೊಂದಿಗೆ ಓಡಿಯೂ ಹೋಗಬಹುದಿತ್ತು. ನಂತರ ನಡೆಯುವ ಮೇಳದಲ್ಲಿ ಮನೆಯಿಂದ ಓಡಿ ಹೋದ ಜೋಡಿ ಸೇರಿದರೆ ಮಾತ್ರ ಅವರ ಪರಿವಾರದವರು ಅವರ ಮದುವೆಗೆ ಒಪ್ಪುತ್ತಿದ್ದರು.

ಈ ಸಂಪ್ರದಾಯದ ಬಗ್ಗೆ ಕೇಳಿದಾಗ ನೀವು ವಾವ್ ಎನ್ನಬಹುದು, ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಈ ಜೋಡಿಗಳು ಮನೆಯವರ ಕಣ್ತಪ್ಪಿಸಿಯೇ ಮನೆಯಿಂದ ಓಡಿ ಹೋಗಬೇಕಾಗಿತ್ತು. ಇವರು ಓಡಿ ಹೋಗಿರುವುದು ತಿಳಿದ ತಕ್ಷಣ ಎರಡೂ ಮನೆಯವರು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಮನೆಯವರು ಇವರನ್ನು ಹಿಡಿಯುವ ಮುನ್ನ ಅವರು ಓಡಿ ಹೋಗಿ ಮೇಳವನ್ನು ಸೇರಬೇಕು. ಒಂದು ವೇಳೆ ಪ್ರೀತಿಸಿದ ಜೋಡಿ ಮೇಳಕ್ಕೆ ತಲುಪುವ ಮುನ್ನವೇ ಸಿಕ್ಕಿ ಬಿದ್ದರೆ,  ಹುಡುಗನನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದರು. ಇನ್ನು ಹುಡುಗಿಗೆ ಆಕೆಯ ತಂದೆ -ತಾಯಿ ಆ ಹುಡುಗನನ್ನು ಮದುವೆಯಾಗಲು ನಿರಾಕರಿಸುತ್ತಾರೆ. ಅಲ್ಲಿಗೆ ಅವರ ಕನಸು ನುಚ್ಚು ನೂರಾದಂತೆ!

ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ

ಕೇಳಲು ವಿಚಿತ್ರವಾಗಿರುವ ಈ ಮದುವೆ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿತ್ತು. ಆದರೆ ಆಧುನಿಕತೆಗೆ ಅನೇಕ ಸಂಪ್ರದಾಯಗಳು ಕಾಣೆಯಾದಂತೆ, ಇದೂ ನಿಂತು ಹೋಗಿದೆ.

click me!