ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಹಾಗೂ ವಿಶ್ವದ ಅತಿ ಎತ್ತರದ್ದು ಎಂದು ಹೇಳಲಾದ 369 ಅಡಿ ಎತ್ತರದ ಶಿವನ ಪ್ರತಿಮೆ ಇಂದು ಲೋಕಾರ್ಪಣೆಗೊಳ್ಳಲಿದೆ. ‘ವಿಶ್ವಾಸ್ ಸ್ವರೂಪಂ’ ಹೆಸರಿನ ಈ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅನಾವರಣಗೊಳಿಸಲಿದ್ದಾರೆ.
ಜೈಪುರ: ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಹಾಗೂ ವಿಶ್ವದ ಅತಿ ಎತ್ತರದ್ದು ಎಂದು ಹೇಳಲಾದ 369 ಅಡಿ ಎತ್ತರದ ಶಿವನ ಪ್ರತಿಮೆ ಇಂದು ಲೋಕಾರ್ಪಣೆಗೊಳ್ಳಲಿದೆ. ‘ವಿಶ್ವಾಸ್ ಸ್ವರೂಪಂ’ ಹೆಸರಿನ ಈ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅನಾವರಣಗೊಳಿಸಲಿದ್ದಾರೆ.
ಇದು ಉದಯಪುರದಿಂದ (Udaipur) 45 ಕಿ.ಮೀ. ದೂರದಲ್ಲಿದ್ದು, ಇದನ್ನು ‘ತತ್ ಪದಮ್ ಸಂಸ್ಥಾನ’ (Tat Padam Sansthan) ಎಂಬ ಸಂಸ್ಥೆ ನಿರ್ಮಾಣ ಮಾಡಿದೆ. ಪ್ರತಿಮೆಯ ಉದ್ಘಾಟನೆಯ ಬಳಿಕ ಅ.29ರಿಂದ ನ.6ರವರೆಗೆ 9 ದಿನಗಳ ಕಾಲ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳು (spiritual and cultural programs) ನಡೆಯಲಿವೆ. ಈ ವೇಳೆ ಧಾರ್ಮಿಕ ಬೋಧಕ ಮುರಾರಿ ಬಾಪು (Murari Bapu) ಅವರು ರಾಮಕಥೆಯನ್ನು ಬೋಧನೆ ಮಾಡಲಿದ್ದಾರೆ ಎಂದು ಸಂಸ್ಥಾನದ ಟ್ರಸ್ಟಿಮತ್ತು ಮೀರಜ್ ಗ್ರೂಪ್‌ನ ಅಧ್ಯಕ್ಷ ಮದನ್ ಪಾಲಿವಾಲ್ (Madan Paliwal) ತಿಳಿಸಿದ್ದಾರೆ.
ಈ ಮೂರು ದೇವರನ್ನು ಪೂಜಿಸೋರಿಗೆ ಯಾವ ಶನಿ ಕಾಟವೂ ಕಾಡೋದಿಲ್ಲ!
ಪ್ರತಿಮೆ ವಿಶೇಷತೆ:
ಧ್ಯಾನಭಂಗಿಯಲ್ಲಿ(meditative posture) ಕುಳಿತಿರುವ ಮೂರ್ತಿಯನ್ನು ಬೆಟ್ಟದ ಮೇಲೆ 51 ಬಿಘಾ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಇದು 20 ಕಿ.ಮೀ. ದೂರದಿಂದಲೂ ಗೋಚರಿಸುತ್ತದೆ. ರಾತ್ರಿ ವೇಳೆಯೂ ಮೂರ್ತಿ ಕಾಣುವಂತೆ ದೀಪದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದು ವಿಶ್ವದ ಅತಿ ದೊಡ್ಡ ಶಿವನ ಪ್ರತಿಮೆಯಾಗಿದ್ದು, ಭಕ್ತರಿಗಾಗಿ ಲಿಫ್ಟ್ /ಮೆಟ್ಟಿಲುಗಳು ಮತ್ತು ಸಭಾಂಗಣಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಮೆಯ ನಿರ್ಮಾಣಕ್ಕೆ 3 ಸಾವಿರ ಟನ್ ಕಬ್ಬಿಣ ಮತ್ತು 2.5 ಲಕ್ಷ ಕ್ಯೂಬಿಕ್ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಇದರ ನಿರ್ಮಾಣವನ್ನು ಪೂರ್ಣಗೊಳಿಸಲು 10 ವರ್ಷ ಸಮಯ ತೆಗೆದುಕೊಳ್ಳಲಾಗಿದೆ.
Mahakal Lok Ujjain: ಹೆಜ್ಜೆಹೆಜ್ಜೆಯಲ್ಲೂ ಮೂಡುತ್ತೆ ಶಿವಭಕ್ತಿ: ಹೇಗಿತ್ತು 5 ವರ್ಷದ ತಯಾರಿ?
ಮುರ್ಡೇಶ್ವರ ಶಿವನಿಗಿಂತ ದೊಡ್ಡದು:
ಕರ್ನಾಟಕದ ಮುರ್ಡೇಶ್ವರದಲ್ಲಿರುವ (Murdeshwar) ಶಿವನ ಪ್ರತಿಮೆ 123 ಅಡಿ ಎತ್ತರವಾಗಿದೆ. ಈ ಪ್ರತಿಮೆಯನ್ನು ರಾಜಸ್ಥಾನ ಶಿವನ ಪ್ರತಿಮೆ ಮೀರಿಸಿದೆ.