ಧನ ಲಾಭಕ್ಕೆ ಇರಲಿ ಈ ವಸ್ತುಗಳು ಮನೆಯಲ್ಲಿರಲಿ...

By Web DeskFirst Published May 19, 2019, 4:15 PM IST
Highlights

ನಿಮ್ಮ ರಾಶಿಯ ಅನುಸಾರ ಫೆಂಗ್ ಶುಯಿಗೆ ಸಂಬಂಧಿಸಿದ ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಎಲ್ಲ ಸಮಸ್ಯೆಯೂ ದೂರವಾಗಿ ಧನಲಾಭವಾಗುತ್ತೆ.. 

ನೀವು ದಿನಪೂರ್ತಿ ಶ್ರಮಪಟ್ಟು ಕೆಲಸ ಮಾಡುತ್ತೀರಿ, ಆದರೆ ಅದರಿಂದ ಹೆಚ್ಚಿನ ಧನಲಾಭ ಆಗುವುದಿಲ್ಲ. ಈ ಸಮಸ್ಯೆ ನಿಮಗೂ ಕಾಣಿಸಿಕೊಂಡರೆ ಟೆನ್ಶನ್ ಬೇಡ. ಬದಲಾಗಿ ಈ ಟಿಪ್ಸ್ ಪಾಲಿಸಿ. ಹೀಗ್ ಮಾಡಿದರೆ ಧನ ವೃದ್ಧಿಯಾಗುತ್ತದೆ. 

ಮೇಷ: ಮನೆ ಅಥವಾ ಆಫೀಸಿನಲ್ಲಿ ಗೋಲ್ಡನ್ ಬಣ್ಣದ ಕ್ರಿಸ್ಟಲ್ ಆಮೆ ಇಡಿ. ಇದರೊಂದಿಗೆ ಗೋಲ್ಡನ್ ಬಣ್ಣದ ಮೀನನ್ನೂ ಇಡಬಹುದು. 

ವೃಷಭ: ಈ ರಾಶಿಯವರು ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಲಕ್ಷ್ಮಿ ವಾಸಿಸುತ್ತಾಳೆ. 

ಮಿಥುನ: ಮನೆ ಮತ್ತು ಕೆಲಸದಲ್ಲಿ ಧನಲಾಭವಾಗಬೇಕಾದರೆ ಈ ರಾಶಿಯವರು ಡ್ರಾಯಿಂಗ್ ರೂಮಿನಲ್ಲಿ ಅಕ್ವೇರಿಯಂ ಇಡಬೇಕು. 

ಮೂತ್ರ, ವೀರ್ಯ, ಉಸಿರು, ದೇಹ ಹಾಗೂ ಪಂಚಭೂತಗಳ ಸಂಬಂಧ!

ಕರ್ಕಾಟಕ: ಈ ರಾಶಿಯವರು ದೇವರ ಕೋಣೆಯಲ್ಲಿ ಕ್ರಿಸ್ಟಲ್ ಅಥವಾ ಮಣ್ಣಿನ ಆಮೆ ಇಟ್ಟರೆ ಒಳ್ಳೆಯದು.

ಸಿಂಹ: ಇವರು ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಉತ್ತಮ. ಈ ದಿಕ್ಕಿನಲ್ಲಿ ಇಟ್ಟರೆ ಉದ್ಯೋಗದಲ್ಲಿರುವ ಜನರಿಗೆ ಬೇಗನೆ ಭಡ್ತಿ ಆಗುತ್ತದೆ. 

ಕನ್ಯಾ: ಮಣ್ಣಿನ ಆಮೆ ಇಡುವುದು ಅಥವಾ ಆರು ಮೀನುಗಳುಳ್ಳ ಅಕ್ವೇರಿಯಂ ಮನೆ ಮುಖ್ಯ ದ್ವಾರದ ಬಳಿ ಇಡುವುದು ಉತ್ತಮ. 

ತುಲಾ: ಆಫೀಸ್‌ನಲ್ಲಿ ಕ್ರಿಸ್ಟಲ್ ಆಮೆ ಇಟ್ಟರೆ ಉತ್ತಮ. ಇದರಿಂದ ಲಾಭವಾಗುತ್ತದೆ. 

ವೃಶ್ಚಿಕ: ಈ ರಾಶಿಯವರು ದೇವರ ಕೋಣೆಯಲ್ಲಿ ಅಥವಾ ಬೆಡ್ ರೂಮಿನ ಎದುರು ಕ್ರಿಸ್ಟಲ್ ಆಮೆ ಅಥವಾ ಮೀನಿಡಿ. ಇದನ್ನು ಇಡೋದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. 

ಧನು: ಮನೆಯಲ್ಲಿ ಅಕ್ವೇರಿಯ ಇಡಬೇಕು. ಅಕ್ವೇರಿಯಂ ಇಡೋದರಿಂದ ಅರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಧನ ಲಾಭವಾಗುತ್ತದೆ. 

ಮಕರ: ಮನೆಯ ಮುಖ್ಯದ್ವಾರದ ಬಳಿ ಅಥವಾ ದೇವರ ಕೋಣೆ ಬಳಿ ನೀಲಿ ಅಥವಾ ಕಪ್ಪು ಬಣ್ಣದ ಆಮೆ ಇರಿಸಿ. ಇದರಿಂದ ಧನ ಲಾಭವಾಗುತ್ತದೆ ಜೊತೆಗೆ ನೆಗೆಟಿವ್ ಎನರ್ಜಿ ದೂರವಾಗುತ್ತದೆ. 

ಕುಂಭ: ತಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಇಡಿ. ಮನೆಯ ಉತ್ತರ ದಿಕ್ಕು ಕರಿಯರ್ ಮತ್ತು ಪೂರ್ವ ದಿಕ್ಕು ಸಂತೋಷದ ಸಂಕೇತ. ಅಕ್ವೇರಿಯಂ ಇಡೋದರಿಂದ ಮನೆ ಮತ್ತು ಬಿಜಿನೆಸ್ ಎರಡರಲ್ಲೂ ಲಾಭ ಉಂಟಾಗುತ್ತದೆ. 

ಮೀನಾ: ಫೆಂಗ್ ಶುಯಿ ಅನುಸಾರ ಈ ರಾಶಿಯ ಜನರು ದೇವರ ಕೋಣೆಯಲ್ಲಿ ನೀಲಿ ಅಥವಾ ಬಿಳಿ ಬಣ್ಣದ ಆಮೆ ಇರಿಸಿ. ಪ್ರತಿದಿನ ಇದರ ದರ್ಶನ ಮಾಡಿದರೆ ಧನಲಾಭವಾಗುತ್ತದೆ. 

click me!
Last Updated May 19, 2019, 4:15 PM IST
click me!