ಕೋವಿಡ್-19 ನಿರ್ಬಂಧದ ಸಡಿಲಿಕೆ ಬಳಿಕ ಶ್ರೀವೆಂಕಟೇಶನ ದರ್ಶನ ಪುನರಾರಂಭದ ನಂತರ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸೋಮವಾರ ತನ್ನ ಅತಿ ಹೆಚ್ಚು ಏಕದಿನ ಹುಂಡಿ ಸಂಗ್ರಹವನ್ನು ಕಂಡಿದೆ.
ತಿರುಪತಿ: ಕೋವಿಡ್-19 ನಿರ್ಬಂಧದ ಸಡಿಲಿಕೆ ಬಳಿಕ ಶ್ರೀವೆಂಕಟೇಶನ ದರ್ಶನ ಪುನರಾರಂಭದ ನಂತರ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸೋಮವಾರ ತನ್ನ ಅತಿ ಹೆಚ್ಚು ಏಕದಿನ ಹುಂಡಿ ಸಂಗ್ರಹವನ್ನು ಕಂಡಿದೆ. ಇತ್ತೀಚಿನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ 6.18 ಕೋಟಿ ರೂ. ಹಣ ಸೋಮವಾರ ಸಂಗ್ರಹವಾಗಿದೆ. ದೇಶ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡ ನಂತರ ಮೊದಲ ಬಾರಿಗೆ ಟಿಟಿಡಿ ಈ ರೀತಿ ಭಾರಿ ಮೊತ್ತವನ್ನು ಸಂಗ್ರಹಿಸಿದೆ ಎಂದು ವರದಿ ಹೇಳಿದೆ. COVID ಲಾಕ್‌ಡೌನ್ ನಂತರದ ಎಲ್ಲಾ ರೀತಿಯ ಸೇವೆಗಳು ಮತ್ತು ದರ್ಶನಗಳನ್ನು ಟಿಟಿಡಿ ಪುನಾರಂಭಿಸಿದ ನಂತರ ಸೋಮವಾರದ ಆದಾಯ 6.18 ಕೋಟಿ ರೂ. ಸಂಗ್ರಹವಾಗಿದೆ ಎಂದು ಟಿಟಿಡಿಯ ಹಣಕಾಸು ಸಲಹೆಗಾರ ಮತ್ತು ಬಾಲಾಜಿಯ ಮುಖ್ಯ ಖಾತೆ ಅಧಿಕಾರಿಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದಕ್ಕೂ ಹಿಂದೆ ಸಾಂಕ್ರಾಮಿಕ ರೋಗ ಬರುವುದಕ್ಕೂ ಮೊದಲು, 2018ರಲ್ಲಿ ಟಿಟಿಡಿಯಲ್ಲಿ ಅತಿ ಹೆಚ್ಚು ಸಂಗ್ರಹವಾದ ಏಕದಿನ ಹುಂಡಿ ಮೊತ್ತ 6.45 ಕೋಟಿ ರೂ.ಗಳಾಗಿದ್ದು, ಹಾಗೆಯೇ ಜುಲೈ 2018 ರಲ್ಲಿ, ಒಂದೇ ದಿನದ 6.28 ಕೋಟಿ ಹುಂಡಿ ಸಂಗ್ರಹ ಆಗಿತ್ತು. ಹೀಗಾಗಿ ಸೋಮವಾರ ಒಂದೇ ದಿನ ಆದ 6.18 ಕೋಟಿ ಸಂಗ್ರಹವು ರೂ. ದೇವಾಲಯದ ಇತಿಹಾಸದಲ್ಲಿ ಮೂರನೇ ಬಾರಿ ಆಗಿರುವ ಆರು ಕೋಟಿ ಗಡಿ ದಾಟಿದ ಹಣ ಸಂಗ್ರಹ ಆಗಿದೆ. ಸಾಮಾನ್ಯವಾಗಿ ಬೆಟ್ಟದ ಮೇಲಿರುವ ಈ ದೇಗುಲ ಒಂದು ದಿನದಲ್ಲಿ 65,000 ಕ್ಕೂ ಹೆಚ್ಚು ಕಾಲ್ನಡಿಗೆಯಲ್ಲಿ ಸಾಗಿ ಬರುವ ಭಕ್ತರನ್ನು ಕಂಡಿದೆ. ಆದಾಗ್ಯೂ, ವಾರಾಂತ್ಯದಲ್ಲಿ ಈ ಸಂಖ್ಯೆಯು 80,000 ಕ್ಕೂ ಹೆಚ್ಚಾಗಿರುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಇರುವುದರಿಂದ ಈ ಬಾರಿ ಧಾರ್ಮಿಕ ಕ್ಷೇತ್ರಕ್ಕೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂದು ನಂಬಲಾಗಿದೆ.
ತಿರುಪತಿ ದೇಗುಲ ಆವರಣದಲ್ಲಿ ಚಪ್ಪಲಿ ಧರಿಸಿ ನಯನತಾರಾ ಓಡಾಟ, ಪತಿಯಿಂದ ಕ್ಷಮಾಪಣೆ
ಈ ಹಿಂದೆ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯು ಜೂನ್ 6 ರಂದು ತಿರುಮಲದಲ್ಲಿರುವ ಆಂಧ್ರಪ್ರದೇಶದ (Andhra Pradesh) ವೆಂಕಟೇಶ್ವರ ದೇವಸ್ಥಾನದಲ್ಲಿ (Lord Venkateshwara temple) ದಾಖಲೆಯ ರೂ. 10 ಕೋಟಿ ನಗದು ದೇಣಿಗೆ ಸಂಗ್ರವಾಗಿದೆ ಎಂದು ವರದಿ ಮಾಡಿತ್ತು. ಆ ವರದಿಯ ಪ್ರಕಾರ, ಇದು ದೇವಾಲಯದಲ್ಲಿ ಒಂದೇ ದಿನ ಸಂಗ್ರಹವಾದ ಅತ್ಯಂತ ದೊಡ್ಡ ಮೊತ್ತದ ದಾಖಲೆಯಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಗದು ದೇಣಿಗೆ ರೂ. 10 ಕೋಟಿಯನ್ನು ಕೆಲವು ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳು ಮಾಡಿದ್ದಾರೆ ಎಂದು ವರದಿಯಾಗಿದೆ. ಭಕ್ತರು ನೀಡುವ ಹುಂಡಿ ಸಂಗ್ರಹದಿಂದ ಪ್ರತ್ಯೇಕವಾಗಿ ಕಾಣಿಕೆ ಸ್ವೀಕರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚುವರಿಯಾಗಿ, ವಿಶೇಷವಾಗಿ ನೆರೆಯ ತಮಿಳುನಾಡಿನ ತಿರುನಲ್ವೇಲಿಯ ಭಕ್ತರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ಸಂಗ್ರಹಿಸಲಾಗಿದೆ.
ಬೆಂಗಳೂರಿನಲ್ಲಿ ಕಣ್ತುಂಬಿಕೊಳ್ಳಿ ತಿರುಪತಿ ದೇವಾಲಯದ ಪ್ರತಿರೂಪ ರಾಜಾಧಿರಾಜ ಗೋವಿಂದ ಮಂದಿರ